ಕೋಲಾರದಲ್ಲಿ ಗ್ರಾ.ಪಂ.ಅಧ್ಯಕ್ಷ್ಯ-ಉಪಾಧ್ಯಕ್ಷ ಚುನಾವಣೆ; ಕೆಜಿಎಫ್​​ನಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರ ಹೈಡ್ರಾಮ; ಚುನಾವಣೆ ಮುಂದೂಡಿಕೆ

 ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ಪೆಬ್ರವರಿ 18 ಕ್ಕೆ ಮತ್ತೆ ನಿಗದಿಯಾಗಿದೆ. ಫೆಬ್ರವರಿ 9 ರಂದು ನಡೆದ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ, ಕೆಲ ಸದಸ್ಯರ ಅಸಿಂಧು ಮತ ಪತ್ರಗಳನ್ನ ಎಣಿಕೆ ಮಾಡಿದ್ದಾರೆಂದು ಕಾಂಗ್ರೆಸ್ ಶಾಸಕಿ ರೂಪಶಶಿಧರ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ

  • Share this:
ಕೋಲಾರ(ಫೆ.10): ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ತೀವ್ರ ಜಿದ್ದಾ ಜಿದ್ದಿಯಿಂದ ಸಾಗುತ್ತಿದೆ. ಕೆಜಿಎಫ್​​ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ, ಚುನಾವಣಾಧಿಕಾರಿ ಮಾಡಿದ ಎಡವಟ್ಟಿನಿಂದ ಒಟ್ಟು ಮತಗಳಲ್ಲಿ ಒಂದು ಹೆಚ್ಚುವರಿ ಮತ ಕಂಡುಬಂದಿದೆ. ಬ್ಯಾಲೆಟ್ ಪೇಪರ್ ಹೆಚ್ಚುವರಿಯಾಗಿ ಚುನಾವಣಾ ಅಧಿಕಾರಿ ದಿನೇಶ್ ನೀಡಿದ್ದರಿಂದ, ಮತ ಎಣಿಕೆ ವೇಳೆ ಗೊಂದಲ ಸೃಷ್ಟಿಯಾಗಿ ಕಡೆಗೆ ಚುನಾವಣೆಯನ್ನೇ ಮುಂದೂಡಲಾಗಿದೆ. ಕ್ಯಾಸಂಬಳ್ಳಿ ಪಂಚಾಯಿತಿ ನಂತರ, ಇದೀಗ ಕೆಜಿಎಫ್​​ನ ಶ್ರೀನಿವಾಸ ಸಂದ್ರ ಗ್ರಾಮ ಪಂಚಾಯಿತಿ ಚುನಾವಣೆಯನ್ನು ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಹೆದರಿ ಮುಂದೂಡಿರುವ ಆರೋಪ ಕೇಳಿಬಂದಿದೆ.

ಶ್ರೀನಿವಾಸಸಂದ್ರ  ಗ್ರಾಮ ಪಂಚಾಯಿತಿ ಕಚೇರಿಯಲ್ಲಿ,  ಚುನಾವಣಾ ಅಧಿಕಾರಿ ರಾಮು ಅವರ ಸಮ್ಮುಖದಲ್ಲಿ ನಡೆದ ಚುನಾವಣೆ ಕಡೆಗೂ ಮುಂದೂಡಿಕೆಯಾಗಿದೆ.  ಗ್ರಾಮ ಪಂಚಾಯಿತಿ ಅಧ್ಯಕ್ಷ್ಯ,  ಉಪಾಧ್ಯಕ್ಷ ಚುನಾವಣೆಯ ಗೌಪ್ಯ ಮತದಾನದಲ್ಲಿ ಕೆಲ ಸದಸ್ಯರ ಮತಪತ್ರಗಳಲ್ಲಿ ತಪ್ಪಾಗಿ ಸೀಲ್ ಹಾಕಿರುವುದನ್ನ ಗಮನಿಸಿದ ಕೆಲ ಸದಸ್ಯರು ಆಕ್ಷೇಪಿಸಿದ್ದಾರೆ. ಆದರೂ ಅಧಿಕಾರಿಗಳು ಮತ್ತೊಮ್ಮೆ ಕೆಲವರಿಗೆ ಮತಪತ್ರ ನೀಡಿದ್ದು, ಅಸಿಂಧು ಮತಗಳನ್ನ ಎಣಿಕೆ ಮಾಡಿದ್ದಾರೆಂಬುದು ಕಾಂಗ್ರೆಸ್ ಆರೋಪ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕಿ ರೂಪಶಶಿಧರ್ ಹಾಗೂ ಹತ್ತಾರು ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಕೇಂದ್ರದ ಬಾಗಿಲು ತೆರೆದು ಒಳಗೆ ಬಿಡುವಂತೆ ಆಗ್ರಹಿಸಿದರು. ಇದು ಸಾಧ್ಯವಾಗದ ಹಿನ್ನಲೆ ಚುನಾವಣೆ ಕೇಂದ್ರದ ಎದುರು ಕುಳಿತು ಪ್ರತಿಭಟನೆ ನಡೆಸಿ, ಚುನಾವಣೆ ಮುಂದೂಡಲು ಆಗ್ರಹಿಸಿದರು. ಹೀಗಾಗಿ ಕಾಂಗ್ರೆಸ್ ಪ್ರತಿಭಟನೆಗೆ ಹೆದರಿದ  ಚುನಾವಣಾ ಅಧಿಕಾರಿ ರಾಮು ,  ಚುನಾವಣಾ  ಫಲಿತಾಂಶದ ಘೋಷಣೆಯನ್ನು ಮುಂದೂಡಿಕೆ ಮಾಡುತ್ತಿರುವುದಾಗಿ ಪ್ರಕಟಿಸಿದರು. ಇದರಿಂದ ಫಲಿತಾಂಶ ಘೋಷಿಸದೆ ಮುಂದೂಡಿದ್ದಕ್ಕೆ ಬಿಜೆಪಿಯ ಮುಖಂಡರು ,ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು.

ಸರ್ಕಾರಿ ಆದೇಶಕ್ಕಿಲ್ಲ ಕಿಮ್ಮತ್ತು, ಬೀದರ್​ನಲ್ಲಿ ರಾತ್ರೋರಾತ್ರಿ ಕೊರೆಯಲಾಗುತ್ತಿದೆ ಬೋರ್ ವೆಲ್

ಚುನಾವಣಾ ಅಧಿಕಾರಿ ರಾಮು ಅವರು  ತೆರಳುತ್ತಿದ್ದ ವಾಹನ ತಡೆದು ಪ್ರತಿಭಟನೆಗೆ ಕುಳಿತರು.  ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕಿ ರೂಪಶಶಿಧರ್ ಕಾರಲ್ಲಿ ಕುಳಿತಿದ್ದ ಅಧಿಕಾರಿ ವಿರುದ್ದ ಏಕವಚನದಲ್ಲೆ  ವಾಗ್ದಾಳಿ ನಡೆಸಿದರು.  ಕಾರಲ್ಲಿ ಕುಳಿತಿದ್ದ ಅಧಿಕಾರಿ ರಾಮು ಕೆಳಗಿಳಿಯುವಂತೆ ಏರು ದನಿಯಲ್ಲಿ ತಿಳಿಸಿ, ನೀನು  ಇಲ್ಲಿ ಏನು ಮಾಡುತ್ತಿರುವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸರಿಯಾಗಿ ನಡೆದುಕೊಳ್ಳದಿದ್ದರೆ,  ನಿಮಗೆ ಏನಾಗುತ್ತೊ ನೋಡಿ ಎಂದು ರೂಪಶಶಿಧರ್ ಕಿಡಿಕಾರಿದರು. ಇನ್ನು ಸ್ಥಳದಲ್ಲೇ ಜಮಾಯಿಸಿದ್ದ ಬಿಜೆಪಿ ಪಕ್ಷದ ಮುಖಂಡರು,  ಕಾರ್ಯಕರ್ತರುಶಾಸಕರ ವಿರುದ್ದ ಘೋಷಣೆಗಳನ್ನ ಕೂಗಿದರು.

ಸ್ಥಳಕ್ಕೆ ಭೇಟಿನೀಡಿ ಪರಿಸ್ಥಿತು ತಿಳಿಗೊಳಿಸಿದ ತಹಶೀಲ್ದಾರ್ ಸುಜಾತ

ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ಪೆಬ್ರವರಿ 18 ಕ್ಕೆ ಮತ್ತೆ ನಿಗದಿಯಾಗಿದೆ. ಫೆಬ್ರವರಿ 9 ರಂದು ನಡೆದ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆಯಲ್ಲಿ, ಕೆಲ ಸದಸ್ಯರ ಅಸಿಂಧು ಮತ ಪತ್ರಗಳನ್ನ ಎಣಿಕೆ ಮಾಡಿದ್ದಾರೆಂದು ಕಾಂಗ್ರೆಸ್ ಶಾಸಕಿ ರೂಪಶಶಿಧರ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಚುನಾವಣಾ ಅಧಿಕಾರಿ ರಾಮು,  ಚುನಾವಣೆ ಫಲಿತಾಂಶ ಘೋಷಣೆ ದಿನಾಂಕವನ್ನು ಹಿರಿಯ ಅಧಿಕಾರಿಗಳ ಸಲಹೆ ಪಡೆದು ಘೋಷಿಸುವುದಾಗಿ ತಿಳಿಸಿದರು.

ಇನ್ನು ಚುನಾವಣೆ ಫಲಿತಾಂಶ ಮುಂದೂಡಿದ್ದಕ್ಕೆ ಬಿಜೆಪಿ ಸಹ ವಿರೋಧಿಸಿತ್ತು.  ಸ್ಥಳದಲ್ಲಿ ಕಾಂಗ್ರೆಸ್ ಶಾಸಕಿ ರೂಪಶಶಿಧರ್ ಮತ್ತು ಬಿಜೆಪಿಯ ಮುಖಂಡರು, ಕಾರ್ಯಕರ್ತರು ಮುಖಾಮುಖಿ ಪ್ರತಿಭಟನೆ ನಡೆಸಿದ್ದರಿಂದ, ಶ್ರೀನಿವಾಸಸಂದ್ರ ಪಂಚಾಯಿತಿ ಕಚೇರಿ ಮತ್ತು ಮುಂಭಾಗದ ರಸ್ತೆಯ ಬಳಿ  ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಎರಡೂ ಗುಂಪಿನವರು ಪರಸ್ಪರ  ಮಾತಿನ ಚಕಮಕಿಗೆ ಇಳಿದರು.

ಸ್ಥಳಕ್ಕೆ  ಕೆಜಿಎಫ್​ ತಹಶೀಲ್ದಾರ್ ಸುಜಾತ ಆಗಮಿಸಿ, ಚುನಾವಣಾ ಅಧಿಕಾರಿ ರಾಮುರೊಂದಿಗೆ ಚರ್ಚೆ ನಡೆಸಿ,  ಫೆಬ್ರವರಿ 18 ಕ್ಕೆ ಮತ್ತೊಮ್ಮೆ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ನಡೆಸುವುದಾಗಿ ಘೋಷಿಸಿದರು. ಹೀಗಾಗಿ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

ಇನ್ನು ಇದೇ ವೇಳೆ ಚುನಾವಣಾ ಅಧಿಕಾರಿ ರಾಮು ವಿರುದ್ದ ಕಿಡಿಕಾರಿದ ಶಾಸಕಿ ರೂಪಶಶಿಧರ್, ಚುನಾವಣಾ ಅಧಿಕಾರಿ ಸರ್ಕಾರಿ ವಾಹನದಲ್ಲಿ ರಾಜಕೀಯ  ಪಕ್ಷದ ಮುಖಂಡರ ಜೊತೆಗೆ ಕಚೇರಿಗೆ ಆಗಮಿಸಿದ್ದಾರೆ.  ಅಸಿಂಧುವಾದ ಮತಗಳಿಗೆ ಮತ್ತೊಮ್ಮೆ ಮತದಾನ ಅವಕಾಶವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಅಸಿಂಧು ಮತಗಳನ್ನು ಎಣಿಕೆ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Published by:Latha CG
First published: