ಮುಗಿಯದ ಕೆಜಿಎಫ್​​ನ ಶ್ರೀನಿವಾಸಸಂದ್ರ ಗ್ರಾ.ಪಂ. ಚುನಾವಣೆ ಬಿಕ್ಕಟ್ಟು; ಡಿಸಿ ಕಚೇರಿ ಎದುರು ಶಾಸಕಿ ರೂಪಾಶಶಿಧರ್ ಪ್ರತಿಭಟನೆ

ಮಾತನಾಡಿದ ಶಾಸಕಿ ರೂಪಾಶಶಿಧರ್, ಚುನಾವಣೆ ನಡೆಸುವ ನೋಟೀಸ್ ನೀಡಿ, ಚುನಾವಣೆ ದಿನವೇ ಎಲೆಕ್ಷನ್ ರದ್ದು ಮಾಡಿ, ಮೊನ್ನೆ ನಡೆದಿರುವ ಚುನಾವಣೆಯ ಮತಗಳನ್ನ ಎಣಿಸಲಾಗಿದೆ. ಚುನಾವಣಾ ಅಧಿಕಾರಿ ರಾಮು ಏಕಮುಖವಾಗಿ ವರ್ತಿಸಿದ್ದು, ಕೂಡಲೇ ಆಯ್ಕೆ ಪ್ರಕ್ರಿಯೆಯನ್ನ ತಡೆಹಿಡಿದು ಅಧಿಕಾರಿ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಡಿಸಿ ಕಚೇರಿ ಬಳಿ ಪ್ರತಿಭಟನೆ

ಡಿಸಿ ಕಚೇರಿ ಬಳಿ ಪ್ರತಿಭಟನೆ

  • Share this:
ಕೋಲಾರ(ಫೆ.16): ಕೋಲಾರ ಜಿಲ್ಲೆಯ ಕೆಜಿಎಫ್​​ ತಾಲೂಕಿನ  ಶ್ರೀನಿವಾಸ ಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯ ಉಪಾಧ್ಯಕ್ಷ್ಯ ಚುನಾವಣೆಯ ತಿಕ್ಕಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಫೆಬ್ರವರಿ 9 ರಂದು  ನಡೆದಿದ್ದ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ವೇಳೆ, ಕೆಲವರ ಮತಗಳು ಅಸಿಂಧು ಆಗಿದ್ದರೂ, ಮೂರು ಬಾರಿ ಚುನಾವಣೆ ನಡೆಸಲಾಗಿತ್ತು. ಹಾಗಾಗಿ ಚುನಾವಣೆ ಮುಂದೂಡಿ ಎಂದು ಗ್ರಾಮ ಪಂಚಾಯಿತಿ ಎದುರು ಶಾಸಕಿ ರೂಪಶಶಿಧರ್, ಕಾಂಗ್ರೆಸ್ ಕಾರ್ಯಕರ್ತರ ಸಮೇತ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಬೆದರಿದ್ದ ಚುನಾವಣಾ ಅಧಿಕಾರಿ ರಾಮು, ಚುನಾವಣೆ ನಡೆಸಿ ಫಲಿತಾಂಶ ಘೋಷಿಸದೆ, ಫೆಬ್ರವರಿ 15 ಕ್ಕೆ ಚುನಾವಣೆ ಮುಂದೂಡಿರುವುದಾಗಿ ತಿಳಿಸಿದ್ದರು.

ಇದೀಗ ಫೆಬ್ರವರಿ 15 ಕ್ಕೆ ನಿಗದಿಯಾಗಿದ್ದ  ಚುನಾವಣೆಯಲ್ಲೂ,  ಅಧಿಕಾರಿ ರಾಮು ಅವರು ಚುನಾವಣೆ ಪ್ರಕ್ರಿಯೆ ನಡೆಸದೆಯೇ ಫಲಿತಾಂಶ ಘೋಷಿಸಿದ್ದಾರೆಂದು ಕಾಂಗ್ರೆಸ್ ಪ್ರತಿಭಟನೆ ಹಾದಿ ಹಿಡಿದಿದೆ. ಫೆಬ್ರವರಿ 15 ಕ್ಕೆ ಚುನಾವಣೆ ನಿಗದಿಯಾಗಿರುವ ಮಾಹಿತಿಯನ್ನ ನೋಟೀಸ್ ಮೂಲಕ ಸದಸ್ಯರಿಗೆ ಕಳಿಸಿದ್ದ ಅಧಿಕಾರಿಗಳು, ಬೆಳಗ್ಗೆ ಚುನಾವಣೆಯನ್ನೇ ರದ್ದುಗೊಳಿಸಿ, ಕೇವಲ ಫಲಿತಾಂಶವನ್ನ ಘೋಷಿಸಿದ್ದಾರೆ.  19 ಸದಸ್ಯರ ಒಟ್ಟು ಬಲಾಬಲದಲ್ಲಿ, ಒಟ್ಟು 19 ಸದಸ್ಯರನ್ನ ಹೊಂದಿರುವ ಪಂಚಾಯಿತಿಯಲ್ಲಿ  10 ಮತಗಳನ್ನ ಪಡೆದುಕೊಂಡ ರಘು ಎನ್ನುವರನ್ನ ನೂತನ ಅಧ್ಯಕ್ಷ್ಯರನ್ನಾಗಿ ಚುನಾವಣಾ ಅಧಿಕಾರಿ ರಾಮು ಘೋಷಿಸಿದರು. ಹೀಗಾಗಿ ಅಧಿಕಾರಿ ವಿರುದ್ಧ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದಾರೆ.

ಚುನಾವಣೆ ಇದೆಯೆಂದು ನೋಟೀಸ್ ನೀಡಿ, ಚುನಾವಣೆ ರದ್ದು ಮಾಡಿ, ಮೊನ್ನೆ ನಡೆದಿದ್ದ ಚುನಾವಣೆಯ ಮತಪತ್ರಗಳನ್ನ ಎಣಿಕೆ ಮಾಡಿ ಘೋಷಿಸಿರುವ ಫಲಿತಾಂಶ ಅಕ್ರಮ ಎಂಬುದು ಆರೋಪವಾಗಿದೆ.  ಹೀಗಾಗಿ ಚುನಾವಣಾ ಅಧಿಕಾರಿ ವಿರುದ್ದ ಕೆಜಿಎಫ್​ ಶಾಸಕಿ ರೂಪಾಶಶಿಧರ್ ನೇತೃತ್ವದಲ್ಲಿ ಬೆಂಬಲಿಗರು ಮತ್ತೊಮ್ಮೆ  ಪ್ರತಿಭಟನೆ ನಡೆಸಿದರು.

Petrol Diesel Price: 8 ದಿನಗಳಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಯಾವ್ಯಾವ ನಗರಗಳಲ್ಲಿ ಎಷ್ಟೆಷ್ಟಿದೆ ರೇಟು?

ಸ್ಥಳಕ್ಕೆ ಕೋಲಾರ ಉಪವಿಭಾಧಿಕಾರಿ ಸೋಮಶೇಖರ್ ಭೇಟಿ ನೀಡಿ ಶಾಸಕರು ಮತ್ತು ಬೆಂಬಲಿಗರ ಸಮಸ್ಯೆ ಆಲಿಸಿದರು. ಆದರೆ ಚುನಾವಣೆ ಪ್ರಕ್ರಿಯೆ ನಡೆದಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಹೇಳಿದರು. ಶಾಸಕರು ಮತ್ತು ಬೆಂಬಲಿಗರು ಚುನಾವಣೆಯನ್ನ ರದ್ದು ಮಾಡುವಂತೆ ಪಟ್ಟು ಹಿಡಿದರು.

ಗ್ರಾಮ  ಪಂಚಾಯಿತಿ  ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ನಂತರ, ಕೋಲಾರ ಡಿಸಿ ಕಚೇರಿ ಎದುರು ಗ್ರಾಮ ಪಂಚಾಯ್ತಿ ಸದಸ್ಯರ ಸಮೇತ ಶಾಸಕಿ ರೂಪಶಶಿಧರ್ ಹಾಗೂ ಬೆಂಬಲಿಗರು ಮೌನ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಡಿಸಿ ಸೆಲ್ವಮಣಿ ಭೇಟಿ ನೀಡಿ, ಶಾಸಕರು ಹಾಗೂ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಒಂದು ದಿನ ಕಾಲಾವಕಾಶ ನೀಡುವಂತೆ ಕೋರಿದರು. ಬಳಿಕ ಮಾತನಾಡಿದ ಶಾಸಕಿ ರೂಪಾಶಶಿಧರ್, ಚುನಾವಣೆ ನಡೆಸುವ ನೋಟೀಸ್ ನೀಡಿ, ಚುನಾವಣೆ ದಿನವೇ ಎಲೆಕ್ಷನ್ ರದ್ದು ಮಾಡಿ, ಮೊನ್ನೆ ನಡೆದಿರುವ ಚುನಾವಣೆಯ ಮತಗಳನ್ನ ಎಣಿಸಲಾಗಿದೆ. ಚುನಾವಣಾ ಅಧಿಕಾರಿ ರಾಮು ಏಕಮುಖವಾಗಿ ವರ್ತಿಸಿದ್ದು, ಕೂಡಲೇ ಆಯ್ಕೆ ಪ್ರಕ್ರಿಯೆಯನ್ನ ತಡೆಹಿಡಿದು ಅಧಿಕಾರಿ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಚುನಾವಣೆಯ ನಡಾವಳಿಗಳನ್ನ ದಾಖಲು ಮಾಡಲು ಮೊದಲ ದಿನ ಬೇರೆ ಪುಸ್ತಕ ಬಳಸಿದ್ದು, ಇದೀಗ ಎರಡನೇ ಬಾರಿ ಚುನಾವಣೆ ನಡೆದಾಗ ಮತ್ತೊಂದು ಪುಸ್ತಕದಲ್ಲಿ ದಾಖಲು ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಚುನಾವಣೆ ಇರುವ ಅಧಿಸೂಚನೆ ಹೊರಡಿಸಿ ಬಳಿಕ ಚುನಾವಣೆ ರದ್ದು ಮಾಡಿ, ಹಿಂದೆ ನಡೆದ ಚುನಾವಣೆಯ ಮತಗಳನ್ನ ಪರಿಗಣಿಸಿದ್ದಕ್ಕೆ,  ಅಧಿಕಾರಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಆದರೆ ಈ ಆರೋಪವನ್ನ‌ ಕೆಜಿಎಪ್ ಬಿಜೆಪಿ ನಾಯಕರು ತಳ್ಳಿಹಾಕಿದ್ದು,  ಚುನಾವಣಾ ಅಧಿಕಾರಿ ಪ್ರಾಮಾಣಿಕವಾಗಿ ನಡೆದುಕೊಂಡರೂ ದಬ್ಬಾಳಿಕೆ ನಡೆಸಿ ಚುನಾವಣೆ ಫಲಿತಾಂಶ ಮುಂದೂಡಲಾಗಿತ್ತು. ಇದೀಗ ಫಲಿತಾಂಶ ಘೋಷಿಸಿರುವುದು ನ್ಯಾಯಯುತ ಬೆಳವಣಿಗೆ ಎಂದು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
Published by:Latha CG
First published: