ವಿಜಯಪುರ ಜಿಲ್ಲೆಯಲ್ಲಿ ಶೇ. 81.66 ರಷ್ಟು ಮತದಾನ; ಇಂದು ಮುಂಜಾನೆ ಭದ್ರತಾ ಕೊಠಡಿ ಸೇರಿದ ಮತಪೆಟ್ಟಿಗೆಗಳು

2ನೇ ಹಂತದಲ್ಲಿ ಶೇ. 81.66 ರಷ್ಚು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಡಿ. 22 ರಂದು ನಡೆದ ಮೊದಲ ಹಂತದಲ್ಲಿ ಶೇ. 77.92 ರಷ್ಟು ಮತದಾರರು ವೋಟು ಹಾಕಿದ್ದರು. ಈ ಮೂಲಕ ಮೊದಲ ಹಂತಕ್ಕೆ ಹೋಲಿಸಿದರೆ 2ನೇ ಹಂತದಲ್ಲಿ ಮತದಾನ ಪ್ರಮಾಣ ಶೇ. 3.74 ರಷ್ಟು ಹೆಚ್ಚಾಗಿದೆ.

ಮತದಾರರು

ಮತದಾರರು

  • Share this:
ವಿಜಯಪುರ (ಡಿ. 28): ವಿಜಯಪುರ ಜಿಲ್ಲೆಯಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಇಂದು ನಸುಕಿನ ಜಾವದವರೆಗೆ ಮತಪೆಟ್ಟಿಗೆಗಳು ಭದ್ರತಾ ಕೊಠಡಿ ಸೇರಿವೆ. 2ನೇ ಹಂತದಲ್ಲಿ ಭೀಮಾ ತೀರದ ಮೂರು ಸೇರಿದಂತೆ ಒಟ್ಟು 4 ತಾಲೂಕುಗಳಲ್ಲಿ ಚುನಾವಣೆ ನಡೆದಿತ್ತು.  ಈ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 8 ತಾಲೂಕುಗಳಲ್ಲಿ ನಡೆದ ಚುನಾವಣೆಗಿಂತ 2ನೇ ಹಂತದಲ್ಲಿ 4 ನಾಲ್ಕು ತಾಲೂಕುಗಳಲ್ಲಿ ನಡೆದ ಮತದಾನ ಪ್ರಮಾಣ ಹೆಚ್ಚಾಗಿದೆ. 2ನೇ ಹಂತದಲ್ಲಿ ಭೀಮಾ ತೀರದ ಇಂಡಿ, ಚಡಚಣ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. 

2ನೇ ಹಂತದಲ್ಲಿ ಶೇ. 81.66 ರಷ್ಚು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಡಿ. 22 ರಂದು ನಡೆದ ಮೊದಲ ಹಂತದಲ್ಲಿ ಶೇ. 77.92 ರಷ್ಟು ಮತದಾರರು ವೋಟು ಹಾಕಿದ್ದರು. ಈ ಮೂಲಕ ಮೊದಲ ಹಂತಕ್ಕೆ ಹೋಲಿಸಿದರೆ 2ನೇ ಹಂತದಲ್ಲಿ ಮತದಾನ ಪ್ರಮಾಣ ಶೇ. 3.74 ರಷ್ಟು ಹೆಚ್ಚಾಗಿದೆ. 2ನೇ ಹಂತದಲ್ಲಿ ನಡೆದ ಮತದಾನದ ತಾಲೂಕುವಾರು ವಿವರ ಇಂತಿದೆ.

ದತ್ತಪೀಠದ ಹೋರಾಟ ಸತ್ಯದ ಹೋರಾಟ; ಕೋರ್ಟ್​​​ನಲ್ಲಿ ಸತ್ಯದ ಪರ ತೀರ್ಪು ಬರಲಿದೆ; ಸಿ.ಟಿ.ರವಿ

ಇಂಡಿ- ಶೇ. 81.92, ಚಡಚಣ- ಶೇ. 82.13, ಸಿಂದಗಿ- ಶೇ. 81.51 ಮತ್ತು ದೇವರ ಹಿಪ್ಪರಗಿ- ಶೇ. 81.66 ಮತದಾನ ದಾಖಲಾಗಿದೆ.  2ನೇ ಹಂತದಲ್ಲಿಯೂ ಮತದಾನ ಸಂಪೂರ್ಣ ಶಾಂತಿಯುತವಾಗಿ ಮುಕ್ತಾಯವಾಗಿರುವುದು ವಿಶೇಷ.  ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 77.92 ರಷ್ಟು ಮತದಾನ ದಾಖಲಾಗಿತ್ತು.  ವಿಜಯಪುರ ತಾಲೂಕಿನಲ್ಲಿ ಶೇ.75.16, ಬಬಲೇಶ್ವರ- ಶೇ. 82.58, ತಿಕೋಟಾ- ಶೇ. 79.87, ಬಸವನ ಬಾಗೇವಾಡಿ- ಶೇ. 79.63, ನಿಡಗುಂದಿ- ಶೇ. 76.65, ಕೊಲ್ಹಾರ- ಶೇ.82.45, ಮುದ್ದೇಬಿಹಾಳ- ಶೇ. 72.01 ಮತ್ತು ತಾಳಿಕೋಟೆ ತಾಲೂಕಿನಲ್ಲಿ ಶೇ. 78.15 ರಷ್ಟು ಮತದಾನ ದಾಖಲಾಗಿತ್ತು.

ಮಾಲೀಕನೊಂದಿಗೆ ಮತಗಟ್ಟೆಗೆ ಬಂದ ನಾಯಿ

ಈ ಮಧ್ಯೆ ನಿನ್ನೆ ಮುಕ್ತಾಯವಾದ ಚುನಾವಣೆಯಲ್ಲಿ ಹಲವಾರು ಘಟನೆಗಳು ನಡೆದವು.  ಮತಗಟ್ಟೆಗೆ ಬಂದ ನಾಯಿಯೊಂದು ಮತದಾರರೊಂದಿಗೆ ಸರತಿ ಸಾಲಿನಲ್ಲಿ ನಿಂತ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಗ್ರಾಮದ ನಿವಾಳಖೇಡ ಗ್ರಾಮದಲ್ಲಿ ನಡೆಯಿತು.  ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಮತದಾರರೊಬ್ಬರು ಬಂದಿದ್ದರು.  ಆಗ ಅವರನ್ನು ಬೆನ್ನತ್ತಿ ಬಂದ ನಾಯಿಯೊಂದು ಮತಗಟ್ಟೆ ಪ್ರವೇಶಿಸಿತು.  ಅಷ್ಟೇ ಅಲ್ಲ, ಮತದಾರ ತನ್ನ ಮತ ಹಾಕುವವರೆಗೆ ಆತನೊಂದಿಗೆ ಈ ಶ್ವಾನ ಅಲ್ಲಿಯೇ ಇತ್ತು.  ಮತ ಹಾಕಿ ಮತದಾರ ಮನೆಗೆ ತೆರಳಿದ ನಂತರ ಈ ನಾಯಿ ಕೂಡ ತನ್ನ ಮಾಲಿಕನೊಂದಿಗೆ ಅಲ್ಲಿಂದ ತೆರಳಿತು.

ಕೊರೋನಾ ಸೋಂಕಿತರಿಂದಲೂ ಹಕ್ಕು ಚಲಾವಣೆ

ಈ ಮಧ್ಯೆ ನಿನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ 2ನೇ ಹಂತದ ಮತದಾನದಲ್ಲಿ ಬಸವನಾಡಿನಲ್ಲಿ ಇಬ್ಬರು ಕೊರೊನಾ ಸೋಂಕಿತರಿಂದ ಮತದಾನ ಮಾಡಿ ನಾಗರಿಕ ಜವಾಬ್ದಾರಿ ಮೆರೆದಿದ್ದಾರೆ.   ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ನಾಗಾವಿ ಗ್ರಾಮ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 176ರಲ್ಲಿ  ಓರ್ವ ಸೋಂಕಿತರು ಮತದಾನ ಮಾಡಿದರು. ಮತ್ತೋಂದೆಡೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಣೂರ ಗ್ರಾಮ ಪಂಚಾಯಿತಿ.ಯ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 82ರಲ್ಲಿ ಕೊರೊನಾ ಸೋಂಕಿತರೊಬ್ಬರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಮತದಾನ ಮುಕ್ತಾಯದ ಸಮಯಕ್ಕೂ ಸ್ವಲ್ಪ ಮುಂಚೆ ಮತಗಟ್ಟೆಗೆ ಆಗಮಿಸಿದ ಇವರು ಪಿಪಿಇ ಕಿಟ್ ಧರಿಸಿ ಕೊನೆಯ ಕ್ಷಣದಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳೂ ಪಿಪಿಇ ಕಿಟ್ ಧರಿಸುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ವಹಿಸಿದ್ದು ಗಮನ ಸೆಳೆಯಿತು.

ಡಿಸಿ, ಎಸಿ ಭೇಟಿ, ಪರಿಶೀಲನೆ

ಈ ಮಧ್ಯೆ, ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗದ ನಾಲ್ಕು ತಾಲೂಕುಗಳಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ನಾನಾ ಮತಗಟ್ಟೆಗಳಿಗೆ ಭೇಟಿ ನೀಡ ಪರಿಶೀಲನೆ ನಡೆಸಿದರು. ಮೊದಲಿಗೆ ಇಂಡಿ ತಾಲೂಕಿನ ಹಳಗುಣಕಿ, ಬಬಲಾದ, ಚವಡಿಹಾಳ, ಸಾಲೋಟಗಿ, ನಾದ ಬಿಕೆ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಅಲ್ಲದೇ, ಸಿಂದಗಿ ತಾಲೂಕಿನ ಕೋರಹಳ್ಳಿ ಗ್ರಾಮದಲ್ಲಿ ಚುನಾವಣೆ ಸಿಬ್ಬಂದಿಗೆ ನೀಡಲಾಗುವ ಆಹಾರ ತಯಾರಿಕೆ ಕೋಣೆಗೆ ಭೇಟಿ ನೀಡಿ ಗುಣಮಟ್ಟವ ಹಾಗೂ ಶುಚಿತ್ವವನ್ನು ಪರಿಶೀಲನೆ ನಡೆಸಿದರು. ನಂತರ ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ಮತಗಟ್ಟೆಗೆ ತೆರಳಿ ಅಲ್ಲಿಯೂ ಮತದಾನ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದರು.

2ನೇ ಹಂತದಲ್ಲಿ 1505 ಸ್ಥಾನಗಳಿಗೆ ನಡೆದ ಮತದಾನದಲ್ಲಿ 4250 ಮತದಾರರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದು, ಡಿ. 30 ರಂದು ಫಲಿತಾಂಶ ಪ್ರಕಟವಾಗಲಿದೆ.  ಮೊದಲ ಹಂತದಲ್ಲಿ ನಡೆದ 1875 ಸ್ಥಾನಗಳ ಚುನಾವಣೆಗೆ 4997 ಅಭ್ಯರ್ಥಿಗಳು ಕಣದಲಿದ್ದಾರೆ.  ಈ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಫಲಿತಾಂಶವೂ ಕೂಡ ಡಿ. 30 ರಂದು ಪ್ರಕಟವಾಗಲಿದೆ.
Published by:Latha CG
First published: