ಮುಕ್ತಾಯವಾದ ಗ್ರಾಮ ಸಮರ; ರಾಯಚೂರಿನಲ್ಲಿ ಹಲವು ವಿಶಿಷ್ಠ ಅಭ್ಯರ್ಥಿಗಳ ಗೆಲುವು

ರಾಯಚೂರು ತಾಲೂಕಿನ‌ ಮಿಟ್ಟಿ ಮಲ್ಕಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲಿಯಾಬಾದ ಗ್ರಾಮದಲ್ಲಿ ವೀರೇಶ ಎಂಬ ವಿಕಲಚೇತನ ಜಯಗಳಿಸಿದ್ದಾನೆ. ದೇವಸಗೂರು ಪಂಚಾಯತಿ ಯಲ್ಲಿ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಬಸಮ್ಮ ಹಾಗು ಹನುಮಂತಮ್ಮ ಇಬ್ಬರು ಸೋಲು ಅನುಭವಿಸಿದ್ದಾರೆ.

ಗೆದ್ದ ಅಭ್ಯರ್ಥಿ

ಗೆದ್ದ ಅಭ್ಯರ್ಥಿ

  • Share this:
ರಾಯಚೂರು(ಡಿ.31): ಕೊರೊನಾ ಮಧ್ಯೆಯೂ ನಡೆದ ಗ್ರಾಮ ಪಂಚಾಯತಿ ಚುನಾವಣೆ ಮುಕ್ತಾಯವಾಗಿದೆ. ಎರಡು ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ನಿನ್ನೆ ಮಧ್ಯರಾತ್ರಿಯವರೆಗೂ ಪ್ರಕಟವಾಗಿವೆ. ರಾಯಚೂರು ಜಿಲ್ಲೆಯ ಒಟ್ಟು 178 ಗ್ರಾಮ ಪಂಚಾಯತಿ ಗಳ ಪೈಕಿ 172 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಮಸ್ಕಿ ತಾಲೂಕಿನ ನಾಲ್ಕು ಗ್ರಾಮ ಪಂಚಾಯತಿ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ದೇವದುರ್ಗಾ ತಾಲೂಕಿನ ಹೇಮನಾಳ, ಶಾವಂತಗೆರೆ ಗ್ರಾಮ ಪಂಚಾಯತಿಯ ಕ್ಷೇತ್ರ ಪುರ್ನವಿಂಗಡನೆಯ ಪ್ರಕರಣ ನ್ಯಾಯಲಯದಲ್ಲಿರುವುದರಿಂದ ಚುನಾವಣೆ ನಡೆದಿಲ್ಲ.

ಒಟ್ಟು 172 ಗ್ರಾಮ ಪಂಚಾಯತಿ ಗಳಲ್ಲಿ 3377 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ 419 ಜನರು ಅವಿರೋಧ ಆಯ್ಕೆಯಾಗಿದ್ದರು. 3205 ಸ್ಥಾನಗಳಿಗೆ 7598 ಅಭ್ಯರ್ಥಿಗಳು ಕಣದಲ್ಲಿದ್ದರು. ನಿನ್ನೆ ರಾತ್ರಿ 12 ಗಂಟೆಯವರೆಗೂ ಮತ ಪತ್ರಗಳ ಎಣಿಕೆ ನಡೆದಿದೆ. ಇದು ಪಕ್ಷಾತೀತ ಚುನಾವಣೆಯಾಗಿದ್ದರೂ, ರಾಜಕೀಯ ಪಕ್ಷಗಳ ಬೆಂಬಲಿಗರು ಚುನಾವಣೆಗೆ ಸ್ಪರ್ಧಿಸಿ ಗೆದ್ದದ್ದರಿಂದ ಸಹಜವಾಗಿ ರಾಜಕೀಯ ಪಕ್ಷಗಳ ತಮ್ಮ ಬಲಾಬಲದ ಬಗ್ಗೆ ಅಂಕಿ ಸಂಖ್ಯೆ ನೀಡುತ್ತಿದ್ದಾರೆ.

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಬಿಜೆಪಿ 895, ಕಾಂಗ್ರೆಸ್ 917 , ಜೆಡಿಎಸ್ 360 ಹಾಗೂ 215 ಇತರರು ಆಯ್ಕೆಯಾಗಿದ್ದಾರೆ. ರಾಯಚೂರು, ಸಿಂಧನೂರು, ಮಸ್ಕಿ, ಸಿರವಾರದಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ, ಮಾನವಿಯಲ್ಲಿ ಜೆಡಿಎಸ್ ಹಾಗೂ ದೇವದುರ್ಗಾದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿದೆ.ಈ ಚುನಾವಣೆಯಲ್ಲಿ ಹಲವರ ಸಮಬಲದ ಮತಗಳನ್ನು ಪಡೆದಿದ್ದರು. ಅವರಲ್ಲಿ ಟಾಸ್ ಮಾಡಿದಾಗ ದೇವದುರ್ಗಾ ತಾಲೂಕಿನ ರಾಮದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂಕೇಶ್ಚರಹಾಳದಲ್ಲಿ 388 ಮತಗಳನ್ನು ಅರಣಮ್ಮ ಹಾಗು ಭೀಮವ್ವ ಸಮನಾಗಿ ಮತ ಹಂಚಿಕೊಂಡಿದ್ದರು. ಟಾಸ್ ಮಾಡಿದಾಗ ಅರಣಮ್ಮ ಜಯಗಳಿಸಿದ್ದಾರೆ.

SriMurali: ಲವ್​ ಆ್ಯನಿವರ್ಸರಿ ಆಚರಿಸಿಕೊಂಡ ರೋರಿಂಗ್​ ಸ್ಟಾರ್​ ಶ್ರೀಮುರಳಿ-ವಿದ್ಯಾ ದಂಪತಿ..!

ಮಸ್ಕಿ ತಾಲೂಕಿನ ಹಿರೇದಿನ್ನಿಯಲ್ಲಿ ಹುಸೇನಮ್ಮ ಎಂಬುವವರು ಸಹ ಟಾಸ್ ನಲ್ಲಿ ಜಯಗಳಿಸಿದ್ದಾರೆ, ಮಸ್ಕಿ ತಾಲೂಕಿನ ಜಕ್ಕೇರಮಡು ಗ್ರಾಮದಲ್ಲಿ ಅಣ್ಣ ಹಾಗು ತಮ್ಮ ಗೆಲವು ಸಾಧಿಸಿದ್ದಾರೆ, ಹರಿಶ್ಚಂದ್ರ ರಾಠೋಡ ಹಾಗು ತಿಮ್ಮಣ್ಣ ರಾಠೋಡ ಜಯಗಳಿಸಿದ್ದು ಹರಿಶ್ಚಂದ್ರ ರಾಠೋಡರ ಪತ್ನಿ ಶಾರದಾ ರಾಠೋಡ ಸೋಲು ಅನುಭವಿಸಿದ್ದಾರೆ.

ರಾಯಚೂರು ತಾಲೂಕಿನ ಮರ್ಚಟ್ಯಾಳ ಗ್ರಾಮ ಪಂಚಾಯತಿಗೆ ಮಾಜಿ ಸಚಿವ ಮುನಿಯಪ್ಪ ಮುದ್ದಪ್ಪರ ಮಕ್ಕಳಾದ ಮೀನಾಕ್ಷಿ ಹಾಗು ಶಾರದ ಸ್ಪರ್ಧಿಸಿದ್ದರು, ಆದರೆ ಅವರಿಬ್ಬರು ಸೋಲು ಅನುಭವಿಸಿದ್ದಾರೆ, ಬೆಂಗಳೂರು ಹಾಗು ಚಿಕ್ಕಬಳ್ಳಾಪುರದಲ್ಲಿರುವ ಇಬ್ಬರು ತವರ ಮನೆಯಲ್ಲಿ ಸ್ಪರ್ಧೆಗೆ ಮುಂದಾಗಿ ಸೋಲು ಅನುಭವಿಸಿದ್ದಾರೆ.

ರಾಯಚೂರು ತಾಲೂಕಿನ‌ ಮಿಟ್ಟಿ ಮಲ್ಕಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲಿಯಾಬಾದ ಗ್ರಾಮದಲ್ಲಿ ವೀರೇಶ ಎಂಬ ವಿಕಲಚೇತನ ಜಯಗಳಿಸಿದ್ದಾನೆ. ದೇವಸಗೂರು ಪಂಚಾಯತಿ ಯಲ್ಲಿ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಬಸಮ್ಮ ಹಾಗು ಹನುಮಂತೆಮ್ಮ ಇಬ್ಬರು ಸೋಲು ಅನುಭವಿಸಿದ್ದಾರೆ.

ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮ ಪಂಚಾಯತಿ ಗೆ ಗೋಪಿನೀಡು ಕೃಷ್ಣಾ ಸತತ ಐದನೆಯ ಬಾರಿ ಗೆಲುವು ಸಾಧಿಸಿದ್ದಾರೆ. ರಾಯಚೂರಿನಲ್ಲಿ ಮತ ಎಣಿಕೆಯ ಸಮೀಪವೇ ವೀರಯ್ಯಸ್ವಾಮಿಯವರ ಕುಟುಂಬದವರ ಮದುವೆ  ಅರಕ್ಷತೆ ನಡೆಯುತಿತ್ತು. ಮತ ಎಣಿಕೆಗೆ ಬಂದವರು ಮದುವೆ ಊಟಕ್ಕೆ ಹೋಗುತ್ತಿದ್ದರು, ಇದನ್ನು ಗಮನಿಸಿದ ಕುಟುಂಬಸ್ಥರು ಕೊನೆಗೆ ಗೇಟ್ ನಲ್ಲಿ ಗುರುತಿಸಿ ಕಲ್ಯಾಣಮಂಟಪಕ್ಕೆ ಬಿಡುತ್ತಿದ್ದರು.

ಮಸ್ಕಿಯಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ ಕಾಲೇಜಿನ ಸುತ್ತಲು ಇರುವ ಗುಡ್ಡದಲ್ಲಿ ಸಾವಿರಾರು ಜನ ಜಮಾಯಿಸಿದ್ದರು, ಇದೇ ರೀತಿ ಜಿಲ್ಲೆಯ ಬಹುತೇಕ ಕಡೆ ಜನಜಾತ್ರೆ ಸೇರಿದ್ದು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು, ಹಲವು ಬಾರಿ ಲಘು ಲಾಠಿ ಪ್ರಹಾರ ನಡೆಸಲಾಯಿತು.ಈಗ ಚುನಾವಣೆ ಮುಗದಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ, ಯಾವ ಪಕ್ಷದ ಬೆಂಬಲಿಗರು ಅಧಿಕಾರ ಹಿಡಿಯುತ್ತಾರೆ ಎಂಬ ಚರ್ಚೆ ಆರಂಭವಾಗಿದೆ.
Published by:Latha CG
First published: