HOME » NEWS » State » GRAMA PANCHAYAT ELECTION IN KARNATAKA VOTERS TRAVELING TO NATIVE FROM BANGALORE TO COST THEIR VOTES SCT

Grama Panchayat Election: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ; ಬೆಂಗಳೂರಿನಿಂದ ಊರಿನತ್ತ ಹೊರಟ ಮತದಾರರು, ಬಸ್​ಗಳು ಫುಲ್ ರಷ್

Karnataka Grama Panchayat Election | ಇಂದು ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿರುವುದರಿಂದ ಜನರು ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟಿದ್ದಾರೆ. ಶಿವಮೊಗ್ಗ, ಕಡೂರು, ಪಾವಗಡ, ಭದ್ರಾವತಿ ಕಡೆಗೆ ತೆರಳುವ ಬಸ್​ಗಳು ಪೂರ್ತಿ ರಷ್ ಆಗಿವೆ.

news18-kannada
Updated:December 22, 2020, 8:05 AM IST
Grama Panchayat Election: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ; ಬೆಂಗಳೂರಿನಿಂದ ಊರಿನತ್ತ ಹೊರಟ ಮತದಾರರು, ಬಸ್​ಗಳು ಫುಲ್ ರಷ್
ಊರಿಗೆ ತೆರಳಲು ಬೆಂಗಳೂರಿನಲ್ಲಿ ಬಸ್​ಗಾಗಿ ಕಾಯುತ್ತಿರುವ ಮತದಾರರು
  • Share this:
ಬೆಂಗಳೂರು (ಡಿ. 22): ಕರ್ನಾಟಕದಲ್ಲಿ ಇಂದಿನಿಂದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಆಯ್ದ ತಾಲೂಕುಗಳಲ್ಲಿ ಇಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ಮಾಡಲು ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕ ಜನರು ತಮ್ಮ ಊರುಗಳತ್ತ ಹೊರಟಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನೆರೆದ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೊರಡಲು ಬಸ್​ಗಳಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂದಿತು. ಮಧ್ಯಾಹ್ನದ ವೇಳೆಗೆ ಊರುಗಳಿಗೆ ತೆರಳಿ ಮತದಾನ ಮಾಡಲು ಮುಂದಾಗಿರುವ ಜನರು ಬೆಳಗ್ಗೆಯೇ ಬೆಂಗಳೂರಿನಿಂದ ಹೊರಟಿದ್ದಾರೆ. ಇನ್ನು ಅನೇಕರು ನಿನ್ನೆ ರಾತ್ರಿ ಬಸ್​ಗೇ ಊರಿಗೆ ತೆರಳಿದ್ದಾರೆ. ಹೀಗಾಗಿ, ಬಸ್​ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು.

ಇಂದು ಬೆಳಗ್ಗೆಯೇ ಬೆಂಗಳೂರಿನಿಂದ ಹೊರಟರೆ ಮಧ್ಯಾಹ್ನದ ವೇಳೆಗೆ ಊರು ತಲುಪಬಹುದು ಎಂದು ಜನರು ಪ್ರಯಾಣ ಮಾಡುತ್ತಿದ್ದಾರೆ. ಶಿವಮೊಗ್ಗ, ಕಡೂರು, ಪಾವಗಡ, ಭದ್ರಾವತಿ ಕಡೆಗೆ ತೆರಳುವ ಬಸ್​ಗಳು ಪೂರ್ತಿ ರಷ್ ಆಗಿವೆ. ಇಂದು ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿರುವುದರಿಂದ ಜನರು ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟಿದ್ದಾರೆ. ತಡರಾತ್ರಿವರೆಗೆ ಕೆಎಸ್ಆರ್​ಟಿಸಿ ಬಸ್ ಗಳಲ್ಲಿ ಊರುಗಳತ್ತ ಮುಖ ಮಾಡಿದ ಜನರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಊರುಗಳಿಗೆ ಪಯಣ ಬೆಳೆಸಿದ್ದಾರೆ.

ಇದನ್ನೂ ಓದಿ: ಇಂದು ಮೊದಲ ಹಂತದ ಗ್ರಾಮ ಪಂಚಾಯತ್​ ಚುನಾವಣೆ; ಕೊರೋನಾ ಮುನ್ನೆಚ್ಚರಿಕೆಯೊಂದಿಗೆ ಮತದಾನ

ಇದೇವೇಳೆ ಬಸ್​ಗಳಿಲ್ಲದೇ ಮೆಜೆಸ್ಟಿಕ್​ನಲ್ಲಿ ಪ್ರಯಾಣಿಕರು ಪರದಾಟ ನಡೆಸಿದ ಘಟನೆಯೂ ನಡೆಯಿತು. ಕಡೂರು, ಬೀರೂರು, ಅಜ್ಜಂಪುರ ಹೊಸದುರ್ಗ, ತರೀಕೆರೆ, ಹಾಸನ, ‌ಭದ್ರಾವತಿ ಕಡೆಗೆ ಬಸ್ ಗಳಿಲ್ಲದ ಜನರು ಪರದಾಡಿದರು. ಕೇವಲ ಮೆಜೆಸ್ಟಿಕ್ ನಿಂದ ಮಾತ್ರ ನಾನ್ ಸ್ಟಾಪ್ ಬಸ್​ಗಳು ಸಂಚಾರ ಮಾಡುತ್ತಿವೆ. ಇನ್ನೂ ಕೆಲವು ಮಾರ್ಗಗಳಲ್ಲಿ ರಾಜಹಂಸ ಬಸ್​ಗಳನ್ನು ಬಿಡಲಾಗಿದೆ. ಸಾಮಾನ್ಯ ಸಾರಿಗೆಗಿಂತ ರಾಜಹಂಸದಲ್ಲಿ ದುಪ್ಪಟ್ಟು ದರ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಹಂಸ ಬಸ್​ನಲ್ಲಿ ಸಂಚರಿಸುವಷ್ಟು ಹಣ ನಮ್ಮಲ್ಲಿ ಇಲ್ಲ. ರೆಗ್ಯುಲರ್ ಬಸ್ ಗಳ ಬದಲು ರಾಜಹಂಸ ಬಸ್​ಗಳನ್ನು ಬಿಟ್ಟರೆ ಅಷ್ಟು ಹಣ ಕೊಡೋದು ಹೇಗೆ ಎಂದು ಆಕ್ರೋಶ ‌ಹೊರಹಾಕಿದ್ದಾರೆ.

ಸಾರಿಗೆ ಇಲಾಖೆಯಿಂದ ಸಾಮಾನ್ಯ ಸಾರಿಗೆ ಬಸ್​ಗಿಂತಲೂ ರಾಜಹಂಸ ಬಸ್​ಗಳನ್ನೇ ಹೆಚ್ಚಾಗಿ ಬಿಡಲಾಗುತ್ತಿದೆ. ಸಾಮಾನ್ಯ ಸಾರಿಗೆ ಬಸ್ ನಲ್ಲಿ ಬೆಂಗಳೂರಿನಿಂದ ಕಡೂರಿಗೆ 250 ರೂ. ಆದರೆ, ರಾಜಹಂಸ ಬಸ್ ನಲ್ಲಿ 500 ರೂ ಕೊಡಬೇಕು ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ರಾಜಹಂಸ ಬಸ್ ಬದಲಾಗಿ ಕೆಎಸ್ಆರ್​ಟಿಸಿ ಸಾಮಾನ್ಯ ಸಾರಿಗೆ ಬಸ್ ಬಿಡುವಂತೆ ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ.
Youtube Video

ಕರ್ನಾಟಕದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಇಂದು ನಡೆಯಲಿದೆ. 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳಲ್ಲಿ ಡಿ. 27ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕೆ 5,487 ಚುನಾವಣಾಧಿಕಾರಿಗಳು, 6085 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಇಂದು ನಡೆಯುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈಗಾಗಲೇ ಸುಮಾರು 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Published by: Sushma Chakre
First published: December 22, 2020, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories