ಗ್ರಾ.ಪಂ ಚುನಾವಣೆ: ದತ್ತ ಜಯಂತಿ ಹಿನ್ನಲೆ ಚಿಕ್ಕಮಗಳೂರಿನಲ್ಲಿ ಎರಡಲ್ಲ, ಒಂದೇ ಹಂತದಲ್ಲಿ ಚುನಾವಣೆ

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಡಿಸೆಂಬರ್ 27 ರಿಂದ 29ರವರೆಗೆ ದತ್ತಜಯಂತಿ ಅಭಿಯಾನ ನಡೆಯಲಿದ್ದು ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಅನುಮತಿ ಕೋರಿ ಮನವಿ ಮಾಡಿಕೊಂಡಿದ್ದರು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಿಕ್ಕಮಗಳೂರು (ಡಿ.5) : ಎರಡು ಹಂತದಲ್ಲಿ ನಡೆಯಬೇಕಿದ್ದ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಯನ್ನ ದತ್ತಜಯಂತಿಯ ಅಂಗವಾಗಿ ಒಂದೇ ಹಂತದಲ್ಲಿ ಡಿಸೆಂಬರ್ 22 ರಂದು ನಡೆಸಲು ರಾಜ್ಯ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದೆ.  ಈ ಹಿಂದೆ ಡಿಸೆಂಬರ್ 22 ಹಾಗೂ 27 ರಂದು ಎರಡು ಹಂತದಲ್ಲಿ ಚುನಾವಣೆ ಎಂದು ಆಯೋಗ ದಿನಾಂಕ ನಿಗದಿ ಮಾಡಿತ್ತು. ಆದರೆ,  ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಡಿಸೆಂಬರ್ 27 ರಿಂದ 29ರವರೆಗೆ ದತ್ತಜಯಂತಿ ಅಭಿಯಾನ ನಡೆಯಲಿದ್ದು ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಅನುಮತಿ ಕೋರಿ ಮನವಿ ಮಾಡಿಕೊಂಡಿದ್ದರು. ಅವರ ಮನವಿಯಂತೆ ಚುನಾವಣೆ ನಡೆಸಲು ಸೂಚಿಸಿದೆ. ಸೂಕ್ಷ್ಮ ಜಿಲ್ಲೆಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಕಾನೂನು ಪಾಲನೆಗೆ ಪೊಲೀಸ್ ಸೇರಿದಂತೆ ಇತರೆ ಅಧಿಕಾರಿಗಳ ಸೇವೆಯೂ ಅವಶ್ಯಕವಾಗಿದ್ದು, ಚುನಾವಣೆಯನ್ನ ಎರಡು ಹಂತದಲ್ಲಿ ಮಾಡಿದ್ದಲ್ಲಿ ಬಂದೋಬಸ್ತ್ ಮಾಡಲು ಕಷ್ಟಸಾಧ್ಯವಾಗುತ್ತದೆ. ಬೇರೆ ಜಿಲ್ಲೆಯಲ್ಲೂ ಇದೇ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿದ್ದು ಬೇರೆ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳನ್ನ ಕರೆಸಿಕೊಳ್ಳಲು ಸಾಧ್ಯವಾಗವುದಿಲ್ಲ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿದೆ.  ಆದಲ್ಲಿ ಸೂಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಅನುಮತಿ ಕೋರಿದ್ದರು.

ಇದನ್ನು ಓದಿ: ಮರ್ಯಾದಾ ಹತ್ಯೆಗೆ ಮುಂದಾದ ಪೋಷಕರು; ಯುವತಿಯ ಬೆರಳು ಕಟ್

ಜಿಲ್ಲಾಧಿಕಾರಿಗಳ ಮನವಿಯನ್ನ ಅವಲೋಕಿಸಿ ರಾಜ್ಯ ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ರಂಜಿತಾ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಅನುಮತಿ ನೀಡಿದೆ.

ಎರಡು ಹಂತದಲ್ಲಿ ಚುನಾವಣೆ ಎದುರಿಸಲಿ ರೂಪಿಸಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿರೋದು ಅಭ್ಯರ್ಥಿಗಳಲ್ಲಿ ಚುನಾವಣೆಗೆ ಭರದ ಸಿದ್ದತೆಗೆ ಮುಂದಾಗುವಂತೆ ಮಾಡಿದೆ. ಚುನಾವಣೆ ಚಟುವಟಿಕೆ ಆರಂಭವಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲೋಕೆ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
Published by:Seema R
First published: