• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gram Panchayat Election: ತೆರವಾಗಿರುವ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಮಾರ್ಚ್ 29 ರಂದು ಚುನಾವಣೆ; ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ

Gram Panchayat Election: ತೆರವಾಗಿರುವ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಮಾರ್ಚ್ 29 ರಂದು ಚುನಾವಣೆ; ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಪಚುನಾವಣೆ ಜರುಗುವ ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ಮಾ.15 ರಿಂದ 31, 2021 ರ ವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು,  ಚುನಾವಣೆ ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ.

  • Share this:

ಧಾರವಾಡ(ಮಾ.16): ಧಾರವಾಡ ಜಿಲ್ಲೆಯ ಕೆಲವು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯನ್ನು ಮಾ.29 ರಂದು ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.


ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು  ಕಿರೇಸೂರ ಗ್ರಾಮಪಂಚಾಯತಿಯ, ಕಿರೇಸೂರ-3 ವಾರ್ಡ್‍ನ ಒಂದು (ಅನುಸೂಚಿತ ಪಂಗಡ ಮಹಿಳೆ) ಸದಸ್ಯ ಸ್ಥಾನಕ್ಕೆ, ಮಲ್ಲಿಗವಾಡ ಗ್ರಾಮಪಂಚಾಯತಿಯ ಮಲ್ಲಿಗವಾಡ-1 ವಾರ್ಡ್‍ನ ಮೂರು (ಹಿಂದುಳಿದ ಬ ವರ್ಗ, ಸಾಮಾನ್ಯ, ಸಾಮಾನ್ಯ ಮಹಿಳೆ) ಸದಸ್ಯ ಸ್ಥಾನಗಳಿಗೆ ಹಾಗೂ ಮಲ್ಲಿಗವಾಡ-2 ವಾರ್ಡ್‍ನ ಮೂರು (ಹಿಂದುಳಿದ ಅ ವರ್ಗ ಮಹಿಳೆ, ಹಾಗೂ ಎರಡು ಸಾಮಾನ್ಯ) ಸದಸ್ಯ ಸ್ಥಾನಗಳಿಗೆ ಮತ್ತು ಕಟ್ನೂರ ಗ್ರಾಮಪಂಚಾಯತಿಯ ಕಟ್ನೂರ-1 ವಾರ್ಡ್‍ನ ಮೂರು (ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ) ಸದಸ್ಯ ಸ್ಥಾನಗಳಿಗೆ ಹಾಗೂ ಕಟ್ನೂರ-2 ವಾರ್ಡ್‍ನ ಎರಡು (ಅನುಸೂಚಿತ ಜಾತಿ, ಸಾಮಾನ್ಯ ಮಹಿಳೆ) ಸದಸ್ಯ ಸ್ಥಾನಗಳಿಗೆ, ನವಲಗುಂದ ತಾಲೂಕು: ಬೆಳವಟಗಿ ಗ್ರಾಮಪಂಚಾಯತಿಯ ಅಮರಗೋಳ-1 ವಾರ್ಡ್‍ನ ನಾಲ್ಕು (ಹಿಂದುಳಿದ ಅ ವರ್ಗ, ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ)  ಸದಸ್ಯ ಸ್ಥಾನಗಳಿಗೆ ಹಾಗೂ ಅಮರಗೋಳ-2 ವಾರ್ಡ್‍ನ ಮೂರು (ಹಿಂದುಳಿದ ಅ ವರ್ಗ, ಹಿಂದುಳಿದ ಅ ವರ್ಗ ಮಹಿಳೆ, ಸಾಮಾನ್ಯ) ಸದಸ್ಯ ಸ್ಥಾನಗಳಿಗೆ, ಕುಂದಗೋಳ ತಾಲೂಕು: ಮಳಲಿ ಗ್ರಾಮಪಂಚಾಯತಿಯ ತೀರ್ಥ ವಾರ್ಡ್‍ನ ಒಂದು (ಸಾಮಾನ್ಯ ಅಭ್ಯರ್ಥಿ) ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಜರುಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.


NIA Raid: ಬೆಂಗಳೂರು ಸೇರಿ 11 ಕಡೆ ಎನ್ಐಎ ದಾಳಿ; ಕೇರಳ ಮೂಲದ ಡಾಕ್ಟರ್ ಸೇರಿ ಮೂವರ ಬಂಧನ


ಉಪಚುನಾವಣೆ ಜರುಗುವ ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ಮಾ.15 ರಿಂದ 31, 2021 ರ ವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು,  ಚುನಾವಣೆ ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ.


ಉಪಚುನಾವಣೆ ಜರುಗುವ ಸದಸ್ಯ ಸ್ಥಾನಗಳಿಗೆ ಮಾ.19 (ಶುಕ್ರವಾರ) ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಮಾ.20 (ಶನಿವಾರ) ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಮಾ.22 (ಸೋಮವಾರ) ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಅಗತ್ಯವಿದ್ದರೆ ಮಾ.29 (ಸೋಮವಾರ) ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ನಡೆಸಲಾಗುವುದು. ಮರು ಮತದಾನ ಅವಶ್ಯಕವಿದ್ದಲ್ಲಿ ಮಾ. 30 (ಮಂಗಳವಾರ) ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಸಲಾಗುವುದು. ಮತಗಳ ಎಣಿಕೆ  ಮಾ. 31 (ಬುಧವಾರ) ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿವಿಧ ಕಾರಣಗಳುಂದ ತರುವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಉಪಚುನಾವಣೆ ನಡೆಸಲಾಗುತ್ತದೆ. ಈ ಹಿನ್ನಲೆ ಸ್ಪರ್ಧೆ ಮಾಡಲು ಬಯಸುವ ಅಭ್ಯರ್ಥಿಗಳು‌ ನಾಮಪತ್ರ ಸಲ್ಲಿಸಬಹುದಾಗಿದೆ. ಚುನಾವಣಾ ನೀತಿ‌ಸಂಹಿತೆ ಪಾಲನೆ‌ ಮಾಡುವ ಮೂಲಕ ಗ್ರಾಮದ ಜನರು ಚುನಾವಣೆ ನಡೆಸಬೇಕು. ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ‌ ಕಾನೂನು ಕ್ರಮ‌ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ‌ನಿತೇಶ ಪಾಟೀಲ ಹೇಳಿದ್ದಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು