• Home
  • »
  • News
  • »
  • state
  • »
  • Hubballi: ಗ್ರಾ.ಪಂ​ ಸದಸ್ಯನ ಪತ್ನಿ ಆತ್ಮಹತ್ಯೆಗೆ ಟ್ವಿಸ್ಟ್; ಪುಷ್ಪಾ ಡೆತ್ ನೋಟ್​ನಲ್ಲಿ ಏನಿದೆ?

Hubballi: ಗ್ರಾ.ಪಂ​ ಸದಸ್ಯನ ಪತ್ನಿ ಆತ್ಮಹತ್ಯೆಗೆ ಟ್ವಿಸ್ಟ್; ಪುಷ್ಪಾ ಡೆತ್ ನೋಟ್​ನಲ್ಲಿ ಏನಿದೆ?

ಡೆತ್​ ನೋಟ್​

ಡೆತ್​ ನೋಟ್​

ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ನಂತರ ಸಿಐಡಿ ತನಿಖೆ ವೇಳೆಯಲ್ಲಿಯೇ ಆತನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ ಸಿಕ್ಕ ನಂತರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನು ಡೆತ್ ನೋಟ್ ನಲ್ಲಿ ನಮೂದಿಸಿದ್ದಾರೆ.

  • Share this:

ಹುಬ್ಬಳ್ಳಿ : ಗ್ರಾ. ಪಂ. ಸದಸ್ಯ ದೀಪಕ್ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ (Pushpa Committed Suicide) ಪ್ರಕರಣ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಂಡ 3 ದಿನಗಳ ನಂತರ ಪುಷ್ಪಾ ಬರೆದ ಡೆತ್ ನೋಟ್ (Death Note) ಪತ್ತೆಯಾಗಿದೆ. ನನ್ನ ಸಾವಿಗೆ ಮೇಟಿ ಕುಟುಂಬದವರು (Matei Family) ಕಾರಣ ಎಂದು ಪತ್ರದಲ್ಲಿ ಪುಷ್ಪಾ ಉಲ್ಲೇಖಿಸಿದ್ದಾಳೆ. ಪುಷ್ಪಾ ಪೋಷಕರು ದೀಪಕ್ ಸಹೋದರ, ತಂದೆ - ತಾಯಿ (Father-Mother) ಸೇರಿ ನಾಲ್ವರು ತಮ್ಮ ಮಗಳ ಆತ್ಮಹತ್ಯೆಗೆ ಕಾರಣ ಎಂದು ದೂರು ನೀಡಿರುವಾಗಲೇ ಡೆತ್ ನೋಟ್ ಸಿಕ್ಕಿದೆ.


ಪುಷ್ಪಾ ಬರೆದ ಡೆತ್ ನೋಟ್​​ ಪತ್ತೆ


ತನ್ನ ಸಾವಿಗೆ ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ, ಕುಮಾರ್ ಮಹದೇವಪ್ಪ ಮೇಟಿ, ನವೀನ್ ಮುದ್ಲಿಂಗಣ್ಣವರ ಮತ್ತು ಬಂಧಿತ 7 ಜನ ಕಾರಣ. ಇವರೆಲ್ಲರೂ ರಾಜಕೀಯ ದ್ವೇಷಕ್ಕಾಗಿ ನನ್ನ ಗಂಡನನ್ನು ಕೊಂದಿದ್ದಾರೆ. ಕಾನೂನು ಹೋರಾಟಾಡುತ್ತಿದ್ದ ನಮಗೆ ಪೊಲೀಸ್ ಅಧಿಕಾರಿಗಳು ಸ್ಪಂದಿಸಿಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಸಿಗಲ್ಲ ಅಂತ ನೊಂದಿದ್ದೇನೆ.
ಇಂತಹ ಸರ್ಕಾರದಲ್ಲಿ ಬದುಕಲು ಇಷ್ಟಪಡದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ.


ಇನ್ನು ಮೇಲಾದರೂ ಮೇಲೆ ಹೆಸರಿಸಿದವರನ್ನು ಬಂಧಿಸಿ ಶಿಕ್ಷೆ ಕೊಡಬೇಕು. ಜೀವಾವಧಿ ಶಿಕ್ಷೆ ಕೊಡಬೇಕೆಂದು ಪತ್ರದಲ್ಲಿ ಪುಷ್ಪಾ ಮನವಿ ಮಾಡಿದ್ದಾರೆ. ಪುಷ್ಪಾ ಶವದ ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ತಂದೆ - ತಾಯಿಗೆ ಹಸ್ತಾಂತರಿಸಿದ್ದರು. ಪುಷ್ಪಾ ಆತ್ಮಹತ್ಯೆ ನಂತರ ಪೊಲೀಸರು ಮನೆ ಕೀ ವಶಕ್ಕೆ ಪಡೆದಿದ್ದರು. ಇದೀಗ ಮನೆಯ ಕಬೋರ್ಡ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ.


ಇದನ್ನೂ ಓದಿ: Two Youths Died: ರೀಲ್ಸ್ ಮಾಡಲು ಹೋಗಿ ನೀರಲ್ಲಿ ಮುಳುಗಿ ಯುವಕರಿಬ್ಬರ ಸಾವು


ಅಂದು ಸಂಜೆಯೇ ಆತ್ಮಹತ್ಯೆಗೆ ಶರಣಾಗಿದ್ದರು


ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ಬಿರುಸುಗೊಳಿಸಿದೆ. ಸಿಐಡಿ ವಿಚಾರಣೆ ಎದುರಿಸಿ ಬಂದಿದ್ದ ಪುಷ್ಪಾ ಅಂದು ಸಂಜೆಯೇ ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ನಂತರ ಪುಷ್ಪಾಳ ತಂದೆ ದೀಪಕ್ ಪಟದಾರಿ ಸಹೋದರ ಸಂಜಯ್ ಹಾಗೂ ಆತನ ನಾಲ್ವರು ಕುಟುಂಬದ ಸದಸ್ಯರ ವಿರುದ್ಧ ದೂರು ನೀಡಿ ಈ ನಾಲ್ವರೇ ತಮ್ಮ ಮಗಳ ಸಾವಿಗೆ ಕಾರಣ ಎಂದಿದ್ದರು. ಆದರೆ ಡೆತ್ ನೋಟ್ ಸಿಕ್ಕ ನಂತರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪೊಲೀಸರ ತನಿಖೆಯ ದಿಕ್ಕು ಬದಲಾಗುವಂತಾಗಿದೆ.


ಗೌಡೌನ್ ನಲ್ಲಿದ್ದ ಕುರಿಗಳ ನಿಗೂಢ ಸಾವು


ಹುಬ್ಬಳ್ಳಿ - ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ ಜೋರಾಗಿದೆ. ರಾಜ್ಯದ ಹಲವೆಡೆ ಆಯುಧ ಪೂಜೆ ದಿನದಂದು ಖಂಡೇ ಪೂಜೆ ಮಾಡ್ತಾರೆ. ಅಂದು ಕುರಿಗಳನ್ನು ಬಲಿಕೊಟ್ಟು ಮಾಂಸವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಖಂಡೇ ಪೂಜೆ ಹಾಗೂ ವಿಜಯದಶಮಿ ಕರಿ ಗೆಂದು ತಂದಿದ್ದು ಕುರಿಗಳ ಮಾರಣಹೋಮವಾಗಿದೆ.


ಹಳೆ ಹುಬ್ಬಳ್ಳಿ ಪ್ರದೇಶದ ಮ್ಯಾದಾರ ಓಣಿಯ ಮಟನ್ ಮಾರ್ಕೆಟ್ ನಲ್ಲಿ ದುರ್ಘಟನೆ ಸಂಭವಿಸಿದೆ. ಮಳೆ ಕಾರಣಕ್ಕೆ ಕುರಿಗಳನ್ನು ಗೋಡೌನ್ ನಲ್ಲಿ ಬಿಟ್ಟು  ಶೆಟರ್ ಹಾಕಲಾಗಿತ್ತು. ಬೆಳಿಗ್ಗೆ ಶೆಟರ್ ತೆಗೆದು ನೋಡಿದಾಗ ಅದರೊಳಗಿದ್ದ ಎಲ್ಲ ಕುರಿಗಳು ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.
ಘಟನೆಯಲ್ಲಿ 83 ಕುರಿಗಳು ಸಾವನ್ನಪ್ಪಿವೆ. ಸುಮಾರು 16 ಲಕ್ಷ ರೂಪಾಯಿ ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ಗೌಡೌನ್ ನಲ್ಲಿದ್ದ ಎಲ್ಲ ಕುರಿಗಳೂ ಸಾವನ್ನಪ್ಪಿರೋದು ಹಲವಾರು ಅನುಮಾಮಗಳಿಗೆ ಎಡೆಮಾಡಿಕೊಟ್ಟಿದೆ. ರಾತ್ರಿ ಮಳೆ ಬಂದಿದೆಯಾದ್ರೂ ಸಿಡಿಲು ಬಡಿದಿಲ್ಲ. ಒಂದು ವೇಳೆ ಸಿಡಿಲು ಬಡಿದರೂ ಎಲ್ಲ ಕುರಿಗಳು ಏಕ ಕಾಲಕ್ಕೆ ಸಾಯಲ್ಲ.


ಇದನ್ನೂ ಓದಿ: H D Kumaraswamy: ಅವ್ರು 50 ಕೋಟಿ ಕೊಟ್ಟಿರೋದು ನನ್ನನ್ನು ಕಟ್ಟಿ ಹಾಕಲು; ನಮ್ಮ ಕಾರ್ಯಕರ್ತರನ್ನು ಕೆಣಕಬೇಡಿ ಎಂದ್ರು ಕುಮಾರಸ್ವಾಮಿ


ಇನ್ನು ಫುಡ್ ಪಾಯಿಸನ್ ಆಗಿದೆಯೆಂದರೂ ಎಲ್ಲ ಕುರಿಗಳು ಸಾಯೋ ಪ್ರಶ್ನೆ ಬರೋಲ್ಲ. ಯಾರಾದ್ರೂ ಕಿಡಿಗೇಡಿಗಳು ಕಿಟಕಿಯಿಂದ ರಸಾಯನಿಕ ಸ್ಪ್ರೇ ಮಾಡಿ ಕಿಟಕಿ ಮುಚ್ಚಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಕುರಿ ಖರೀದಿಸಿದ ವ್ಯಕ್ತಿಯ ಕಣ್ಣೀರು ಕಪಾಳಕ್ಕೆ ಬಂದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರರು ಮತ್ತು ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:ಪಾವನ ಎಚ್ ಎಸ್
First published: