• Home
  • »
  • News
  • »
  • state
  • »
  • ಗ್ರಾಮ ಪಂಚಾಯಿತಿ​ ಚುನಾವಣೆ: ಅಕ್ರಮ ಮದ್ಯದ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು

ಗ್ರಾಮ ಪಂಚಾಯಿತಿ​ ಚುನಾವಣೆ: ಅಕ್ರಮ ಮದ್ಯದ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣು

ಮದ್ಯ ಹಾಗೂ ಆರೋಪಿ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು

ಮದ್ಯ ಹಾಗೂ ಆರೋಪಿ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು

ಕಾರವಾರ ಗೋವಾ ಗಡಿ ಭಾಗದ ಗ್ರಾಮೀಣ ಭಾಗದಲ್ಲಿ ಚುನವಾಣೆ ಅಂದಮೇಲೆ ಗೋವಾ ಅಕ್ರಮ ಮದ್ಯ ಸದ್ದು ಮಾಡುತ್ತದೆ. ಮತದಾರರ ಓಲೈಕೆಗಾಗಿ ಅಕ್ರಮ ಗೋವಾ ಮದ್ಯ ಸಾಗಾಟ ಜೋರಾಗಿಯೇ ನಡೆಯುತ್ತದೆ.

  • Share this:

ಕಾರವಾರ(ಡಿಸೆಂಬರ್​. 20): ಗ್ರಾಮ ಪಂಚಾಯಿತಿ ಚುನಾವಣೆ ನಡೆಯತ್ತಿರುವ ಈ ಹಿನ್ನಲೆಯಲ್ಲಿ ಗೋವಾದಿಂದ ಅಕ್ರಮ ಮದ್ಯ ತಡೆಗಟ್ಟಲು ಅಬಕಾರಿ ಇಲಾಖೆಯ ಸಿಬ್ಬಂದಿಯ ಜೊತೆಗೆ ಪೊಲೀಸ್ ಇಲಾಖೆ ಕೂಡಾ ಹದ್ದಿನ ಕಣ್ಣಿಟ್ಟು, ಗಡಿಯಲ್ಲಿ ಕಾರ್ಯಚರಣೆಗೆ ಇಳಿದಿದೆ. ಗ್ರಾ.ಪಂ ಚುನಾವಣೆ ಎಂದ ಮೇಲೆ ಹಣ ಹೆಂಡ ಇದ್ದೆ ಇರುತ್ತದೆ. ಕಾರವಾರ ಗೋವಾ ಗಡಿ ಜಿಲ್ಲೆಯಾಗಿರುವುದರಿಂದ ಗೋವಾದಿಂದ ಅಕ್ರಮ ಗೋವಾ ಮದ್ಯ ಹರಿದು ಬರುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಗೋವಾ ಗಡಿ ಬಾಗ ಮಾಜಾಳಿಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ವಾಹನ ತಪಾಸಣೆಗೆ ಇಳಿದಿದ್ದಾರೆ. ಗೋವಾದಿಂದ ಬರುವ ಪ್ರತಿಯೊಂದು ವಾಹನವನ್ನ ತಪಾಸಣೆ ನಡೆಸಿ ಮುಂದಿನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಜತೆಗೆ ಕಳ್ಳ ದಾರಿಯಿಂದ ಅಕ್ರಮ ಮದ್ಯ ಸಾಗಾಟ ಜೋರಾಗಿರುವುದರಿಂದ ಅಲ್ಲಿಯೂ ಕೂಡಾ ಅಬಕಾರಿ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಹೀಗೆ ಅಕ್ರಮ ಗೋವಾ ಮದ್ಯ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಮತ್ತು ಪೋಲಿಸ್ ಇಲಾಖೆ ಸನ್ನದವಾಗಿದೆ.


ಹದ್ದಿನ ಕಣ್ಣಿಟ್ಟಿರುವ ಅಬಕಾರಿ


ಕಾರವಾರ ಗೋವಾ ಗಡಿ ಭಾಗದ ಗ್ರಾಮೀಣ ಭಾಗದಲ್ಲಿ ಚುನವಾಣೆ ಅಂದಮೇಲೆ ಗೋವಾ ಅಕ್ರಮ ಮದ್ಯ ಸದ್ದು ಮಾಡುತ್ತದೆ. ಮತದಾರರ ಓಲೈಕೆಗಾಗಿ ಅಕ್ರಮ ಗೋವಾ ಮದ್ಯ ಸಾಗಾಟ ಜೋರಾಗಿಯೇ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಗಡಿಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನ ನಿಯೋಜನೆ ಮಾಡಿ ಅಕ್ರಮ ತಡೆಯಲು ಮುಂದಾಗಿದೆ. ಜತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಕೂಡಾ ಹದ್ದಿನ ಕಣ್ಣಿಟ್ಟು ಹಗಲು ರಾತ್ರಿ ಓಡಾಡುವ ವಾಹನ ತಪಾಸಣೆ ಮಾಡಿ ಗೋವಾ ಮದ್ಯ ತಡೆಗೆ ಮುಂದಾಗಿದ್ದಾರೆ.


ಗ್ರಾಮೀಣ ಭಾಗದಲ್ಲಿ ಅಲ್ಲಿ ಇಲ್ಲಿ ಹುದುಗಿಸಿಟ್ಟ ಅಕ್ರಮ ಮದ್ಯವನ್ನ ವಶಕ್ಕೆ ಪಡೆಯುವಲ್ಲಿ ಅಬಕಾರಿ ಇಲಾಖೆ ಸಫಲವಾಗಿದೆ. ಕಳೆದ ವಾರ ಗ್ರಾಮೀಣ ಭಾಗಕ್ಕೆ ದಾಳಿ ಇಟ್ಟ ಅಬಕಾರಿ ಇಲಾಖೆ ಸಿಬ್ಬಂದಿ ಸುಮಾರು 50 ಸಾವಿರ ಗೋವಾ ಮದ್ಯವನ್ನ ವಶಕ್ಕೆ ಪಡೆದಿತ್ತು ಹೀಗೆ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ದಾಳಿ ನಡೆಯುತ್ತಲೆ ಇದೆ.


ಗ್ರಾಮೀಣ ಭಾಗದ ಮೇಲೆ ಹೆಚ್ಚು ಹೆಚ್ಚು ದಾಳಿ


ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನವಾನಣೆ ನಡೆಯುತ್ತಿದ್ದು, ಮೊದಲ ಹಂತದ ಚುನಾವಾನಣೆ 22 ರಂದು ಕರಾವಳಿ ಭಾಗದಲ್ಲಿ ನಡೆಯಲಿದೆ. ಕಾರವಾರ ಗ್ರಾಮೀಣ ಭಾಗಕ್ಕೆ ಕಳ್ಳ ದಾರಿಯಿಂದ ಅಕ್ರಮ ಹೆಂಡ ಹರಿದು ಬರುವ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಅಬಕಾರಿ ಇಲಾಖೆಯ ಸಿಬ್ಬಂದಿ ಹೆಂಡದ ರುಚಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಗೋವಾ ಗಡಿ ಭಾಗದಲ್ಲಿ ಗೋವಾ ದಿಂದ ಬರುವ ಪ್ರತಿಯೊಂದು ವಾಹನವನ್ನ ತಪಾಸಣೆ ಮಾಡುತ್ತಿದೆ. ಜತೆಗೆ ಸಾರಿಗೆ ಬಸ್ ಮೂಲಕ ಕೂಡಾ ಅಕ್ರಮ ಮದ್ಯ ಕಾರವಾರಕ್ಕೆ ಸಾಗಾಟವಾಗುವ ನಿಟ್ಟಿನಲ್ಲಿ ಗೋವಾದಿಂದ ಬರುವ ರಾಜ್ಯ ಸಾರಿಗೆ ಮತ್ತು ಗೋವಾ ಸಾರಿಗೆ ಬಸ್ ಕೂಡಾ ತಪಾಸಣೆ ಮಾಡುತ್ತಿದೆ.


ಇದನ್ನೂ ಓದಿ : ಬೇಕಾಬಿಟ್ಟಿ ವಸೂಲಿಗೆ ನಿಂತಿರುವ ಖಾಸಗಿ ಶಾಲೆಗಳ ಜೊತೆಗೆ ಸರ್ಕಾರ ಶಾಮೀಲಾಗಿದೆ; ಸಿದ್ದರಾಮಯ್ಯ ಟೀಕೆ


ಹೆದ್ದಾರಿ ಮೂಲಕ ಅಷ್ಟೆ ಅಲ್ಲದೆ ದೋಣಿಯಲ್ಲಿ ಸಮುದ್ರದ ಮೂಲಕ ಕಾರವಾರಕ್ಕೆ ಗೋವಾದಿಂದ ಅಕ್ರಮ ಮದ್ಯ ಸಾಗಾಟ ಈ ಹಿಂದೆ ಅವ್ಯವಾಹತವಾಗಿ ನಡೆಯುತ್ತಿತ್ತು ಇದಕ್ಕೆ ಸಂಭಂದಿಸಿ ಅನೇಕರನ್ನ ಅಬಕಾರಿ ಇಲಾಖೆಯ ಸಿಬ್ಬಂದಿ ಬಂಧಿಸಿ ಪ್ರಕರಣ ದಾಖಲಿಸಿದ ಉದಾಹರಣೆಗಳಿವೆ. ಈ ಹಿನ್ನಲೆಯಲ್ಲಿ ಈಗಲೂ ಕೂಡಾ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿ ಸಮುದ್ರದ ಮೂಲಕ ಅಕ್ರಮ ಮದ್ಯ ಸಾಗಾಟ ವಾಗದಂತೆ ಕರವಾಳಿ ಕಾವಲು ಪಡೆಯ ಪೊಲೀಸರನ್ನ ನಿಯೋಜನೆ ಮಾಡಿ ಗಸ್ತು ತಿರುಗಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ನಾಲ್ಕು ಕಡೆಯಿಂದ ಅಕ್ರಮ ಮದ್ಯ ತಡೆಯಲು ಪೋಲಿಸ್ ಮತ್ತು ಅಬಕಾರಿ ಇಲಾಖೆ ಮುಂದಾಗಿದೆ.


ಒಟ್ಟಾರೆ ಅಕ್ರಮ ಗೋವಾ ಮದ್ಯ ತಡೆಗೆ ಜಂಟಿ ಕಾರ್ಯಚರಣೆಗೆ ಇಳಿದ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ವಿರುದ್ದ ಚುನಾವಣೆಗೆ ನಿಂತ ಅಭ್ಯರ್ಥಿಗಳು ಗರಂ ಆಗಿದ್ದಾರೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು