• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • SSLC Students: ನಿಮಗೆ ಇಲ್ಲಿದೆ ಗುಡ್‌ ನ್ಯೂಸ್‌; ಫೇಲ್ ಆಗುವ ಚಿಂತೆ ಬೇಡ, ಸಿಗಲಿದೆ ಗ್ರೇಸ್ ಮಾರ್ಕ್ಸ್!

SSLC Students: ನಿಮಗೆ ಇಲ್ಲಿದೆ ಗುಡ್‌ ನ್ಯೂಸ್‌; ಫೇಲ್ ಆಗುವ ಚಿಂತೆ ಬೇಡ, ಸಿಗಲಿದೆ ಗ್ರೇಸ್ ಮಾರ್ಕ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದವರಿಗೆ ಫೇಲ್ ಆಗುವ ಭಯಬೇಡ. ಯಾಕೆಂದ್ರೆ ಗ್ರೇಸ್ ಮಾರ್ಕ್‌ ನೀಡಿ ಪಾಸ್ ಮಾಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ನೀವು ಈ ಬಾರಿ ಎಸ್ಎಸ್‌ಎಲ್‌ಸಿ ಎಕ್ಸಾಂ (SSLC Exam) ಬರೆದ ವಿದ್ಯಾರ್ಥಿಗಳಾ (Students)? ಅಥವಾ ನಿಮ್ಮ ಮಕ್ಕಳು (Children) ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ (Result) ಕಾಯುತ್ತಿದ್ದಾರಾ? ಹಾಗಿದ್ರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್ (Good News). ಅದೇನಪ್ಪಾ ಅಂದ್ರೆ ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದವರಿಗೆ ಫೇಲ್ (Fail) ಆಗುವ ಭಯಬೇಡ. ಯಾಕೆಂದ್ರೆ ಗ್ರೇಸ್ ಮಾರ್ಕ್‌ (Grace Marks) ನೀಡಿ ಪಾಸ್ (Pass) ಮಾಡಲು ರಾಜ್ಯ ಶಿಕ್ಷಣ ಇಲಾಖೆ (State Educational Department) ನಿರ್ಧರಿಸಿದೆ. ಉತ್ತೀರ್ಣಕ್ಕೆ (Pass) ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.


ಯಾರಿಗೆ ಸಿಗಲಿದೆ ಗ್ರೇಸ್ ಮಾರ್ಕ್ಸ್?


ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ. ಪರೀಕ್ಷೆ ಬರೆದಿರುವ ಆರು ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಇನ್ನುಳಿದ ಮೂರು ವಿಷಯಗಳಲ್ಲಿ ಅನುತ್ತಿರ್ಣವಾಗಿದ್ದರೆ ಆ ಮೂರು ವಿಷಯಗಳಲ್ಲಿ ಥಿಯರಿ ಪರೀಕ್ಷೆಯ ತಲಾ 80 ಅಂಕದ ಶೇ.10ರಷ್ಟು ಅಂದರೆ ಮೂರು ವಿಷಯಗಳಿಂದ 24 ಅಂಕಗಳು ಗ್ರೇಸ್‌ ಅಂಕಗಳಾಗಿ ದೊರೆಯುತ್ತವೆ.


ಗ್ರೇಸ್ ಮಾರ್ಕ್ಸ್ ಹಂಚಿಕೆ ಮಾಡುವುದು ಹೇಗೆ?


ಕನ್ನಡ ಭಾಷಾ ವಿಷಯಕ್ಕೆ 100 ಅಂಕಗಳಿಗೆ ಥಿಯರಿ ಪರೀಕ್ಷೆ ಇರುವುದರಿಂದ ಶೇ.10 ಅಂದರೆ 10 ಅಂಕಗಳಾಗುತ್ತದೆ. ಹಾಗಾಗಿ ಅನುತ್ತೀರ್ಣ ವಿಷಯಗಳಲ್ಲಿ ಪ್ರಥಮ ಭಾಷೆ ಕನ್ನಡ ಇದ್ದಲ್ಲಿ ಮೂರು ವಿಷಯಗಳ ಕೃಪಾಂಕ ಸಂಖ್ಯೆ ಆಗ 26 ಆಗಲಿದೆ. ಈ ಅಂಕಗಳನ್ನು ಅನುತ್ತೀರ್ಣ ವಿಷಯಗಳಿಗೆ ಹಂಚಿಕೆ ಮಾಡಿ ಪಾಸು ಮಾಡಲಾಗುತ್ತದೆ. ಆದರೆ, ಈ ಗ್ರೇಸ್‌ ಅಂಕಗಳನ್ನುಯಾವ ರೀತಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.


ಇದನ್ನೂ ಓದಿ: SSLC ಮೌಲ್ಯಮಾಪನಕ್ಕೆ 9 ಸಾವಿರ ಶಿಕ್ಷಕರು ಗೈರು; ಫಲಿತಾಂಶ ಮೇ. 15ಕ್ಕೆ ಪ್ರಕಟ ಸಾಧ್ಯತೆ


26 ಅಂಕ ಆಗದಿದ್ದರೆ ಗ್ರೇಸ್ ಮಾರ್ಕ್ಸ್ ಇಲ್ಲ


ಮೂರು ಥಿಯರಿ ಪರೀಕ್ಷೆ ಸೇರಿ 26 ಅಂಕ ಕೃಪಾಂಕ ನೀಡಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಫೇಲ್‌ನ ದವಡೆಯಿಂದ ವಿದ್ಯಾರ್ಥಿಗಳನ್ನು ಬಚಾವ್ ಮಾಡಲು ನಿರ್ಧರಿಸಲಾಗಿದೆ. ಆದರೆ ಮೂರು ವಿಷಯಗಳಲ್ಲಿ ಕೃಪಾಂಕ ನೀಡಿದರೂ ಪಾಸಾಗಲಿಲ್ಲವೆಂದರೆ ಅಂತಹ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವುದಿಲ್ಲ ಅಂತ ಶಿಕ್ಷಣ ಇಲಾಖೆ ತಿಳಿಸಿದೆ.


ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬರೋದು ಯಾವಾಗ?


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಚ್‌ 28 ರಿಂದ ಏಪ್ರಿಲ್‌ 11 ರವರಗೆ 2022 ನೇ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯನ್ನ ನಡೆಸಿದೆ. ಈಗಾಗಲೇ ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಸಹ ಪ್ರಕಟಿಸಿದೆ. ಮೌಲ್ಯ ಮಾಪನ ಪ್ರಕ್ರಿಯೆ ಕೂಡಾ ಆರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 12ರಂದು ಅಂದರೆ ಇಂದು ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಲ್ಲಾ ತಯಾರಿ ನಡೆಸಿತ್ತು. ಆದರೆ ಈಗ ಪರೀಕ್ಷಾ ಫಲಿತಾಂಶ ಪ್ರಕಟಿಸುವ ದಿನಾಂಕ ಮುಂದೆ ಹೋಗಿದೆ.


ಇದನ್ನೂ ಓದಿ: SSLC ಪರೀಕ್ಷೆಯ Key Answers ಪ್ರಕಟ; ಈ ವೆಬ್​ಸೈಟ್​ ಮೂಲಕ ಸರಿ ಉತ್ತರಗಳನ್ನು ನೋಡಬಹುದು


ಫಲಿತಾಂಶ ಪ್ರಕಟ ಮುಂದೂಡಿಕೆ


ಸಾಲು ಸಾಲು ರಜೆಗಳು ಬಂದ ಕಾರಣ, ಮೌಲ್ಯಮಾಪನ ಕೊಂಚ ವಿಳಂಭವಾದ ಹಿನ್ನಲೆಯಲ್ಲಿ ಮೇ 5 ರ ವೇಳೆಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಂತರ ಅಂಕಗಳ ದಾಖಲೀಕರಣ ಪೂರ್ಣಗೊಳಿಸಿ ಮೇ 15 ಕ್ಕೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

top videos
    First published: