HOME » NEWS » State » GP ELECTION ALL MEMBERS ELECTED UNOPPOSED IN RAVURU VILLAGE OF KALBURGI HK

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರದ ಅಬ್ಬರ ; ರಾವೂರು ಗ್ರಾಮದ ಎಲ್ಲ ಸದಸ್ಯರ ಅವಿರೋಧ ಆಯ್ಕೆ

ರಾವೂರು ಗ್ರಾಮದ 25 ಸ್ಥಾನ ಹಾಗೂ ಗಾಂಧಿ ನಗರದಿಂದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಖಾಡದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದರು 24 ಅಭ್ಯರ್ಥಿಗಳು ತಮ್ಮ ಉಮೇದುವರಿಕೆ ವಾಪಸ್ ಪಡೆದಿದ್ದರು

news18-kannada
Updated:December 20, 2020, 5:16 PM IST
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರದ ಅಬ್ಬರ ; ರಾವೂರು ಗ್ರಾಮದ ಎಲ್ಲ ಸದಸ್ಯರ ಅವಿರೋಧ ಆಯ್ಕೆ
ಅವಿರೋಧ ಆಯ್ಕೆಯಾದ ಸದಸ್ಯರು
  • Share this:
ಕಲಬುರ್ಗಿ (ಡಿಸೆಂಬರ್​. 20): ಕಲಬುರ್ಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಡಿಸೆಂಬರ್ 22 ರಂದು ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕೆಲವೆಡೆ ಕೆಲ ಸದಸ್ಯರ ಅವಿರೋಧ ಆಯ್ಕೆ ನಡೆದಿದ್ದರೆ, ರಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಎಲ್ಲ ಸದಸ್ಯರ ಅವಿರೋಧ ಆಯ್ಕೆಯಾಗಿದೆ.  ಮನೆ ಮನೆಗೆ ತೆರಳಿ ಮತ ಹಾಕುವಂತೆ ಅಭ್ಯರ್ಥಿಗಳು ಮನವಿ ಮಾಡುತ್ತಿದ್ದಾರೆ. ನೂರಾರು ಬೆಂಬಲಿಗರೊಂದಿಗೆ ಅಭ್ಯರ್ಥಿಗಳು ಪ್ರಚಾರ ಕೈಗೊಂಡಿದ್ದಾರೆ. ಮತದಾರರ ಆಶೀರ್ವಾದ ಸಿಗಲಿದೆ. ತಾವು ಗೆದ್ದೇ ಗೆಲ್ತೇವೆ ಎಂದು ಅಭ್ಯರ್ಥಿಗಳು ವಿಶ್ವಾಸ ವ್ಯಕ್ತಪಡಿಸ್ತಿದಾರೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮ ಪಂಚಾಯಿತಿಯ ಎಲ್ಲ 32 ಸ್ಥಾನಗಳು ಕೊನೆಗೂ ಅವಿರೋಧವಾಗಿ ಆಯ್ಕೆಯಾಗಿವೆ.

ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾದಲ್ಲಿ ಕೆ.ಕೆ.ಆರ್.ಡಿ.ಬಿ.ಯಿಂದ ಒಂದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಭರವಸೆ ನೀಡಿದ್ದರು. ಇದರ ಬೆನ್ನ ಹಿಂದೆಯೇ ರಾವೂರು ಗ್ರಾಮ ಪಂಚಾಯ್ತಿಯ ಎಲ್ಲ ಸ್ಥಾನಗಳನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ರಾವೂರು ಗ್ರಾಮದ 25 ಸ್ಥಾನ ಹಾಗೂ ಗಾಂಧಿ ನಗರದಿಂದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಖಾಡದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದರೂ. ಗ್ರಾಮದ ಹಿರಿಯರ ಮನವೊಲಿಕೆಯ ನಂತರ 24 ಅಭ್ಯರ್ಥಿಗಳು ತಮ್ಮ ಉಮೇದುವರಿಕೆ ವಾಪಸ್ ಪಡೆದಿದ್ದರು. ವಾಪಸ್ ಪಡೆದ ನಂತರ ಕೆಲ ಅಭ್ಯರ್ಥಿಗಳು ಮೋಸದಿಂದ ತಮ್ಮನ್ನು ಚುನಾವಣಾ ಅಖಾಡದಿಂದ ಹಿಂದೆ ಸರಿಸಿದ್ದಾರೆಂದು ಆರೋಪಿಸಿದ್ದರೂ. ಆದರೆ ತಾವಾಗಿಯೇ ಉಮೇದುವಾರಿಕೆ ವಾಪಸ್ ಪಡೆದಿರುವುದರಿಂದ ಉಳಿದ 32 ಅಭ್ಯರ್ಥಿಗಳನ್ನು ಅವಿರೋಧ ಎಂದು ಪ್ರಕಟಿಸಲಾಗಿದೆ.

ಇದನ್ನೂ ಓದಿ : ರೈತರು, ಕಾರ್ಮಿಕರ ಪ್ರತಿಭಟನೆ : ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ

ಅವಿರೋಧ ಆಯ್ಕೆ ಅಂತಿಮಗೊಳ್ಳುತ್ತಿದ್ದಂತೆಯೇ ಗ್ರಾಮದ ಜನ ನೂತನ ಸದಸ್ಯರನ್ನು ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ಸನ್ಮಾನಿಸಿ ಗೌರವಿಸಿದ್ದಾರೆ. ಕಲಬುರ್ಗಿಯಲ್ಲಿಯಲ್ಲಿ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ಕೆಲ ಸದಸ್ಯರು ಮಾತ್ರ ಅವಿರೋಧ ಆಯ್ಕೆಯಾಗಿದ್ದಾರೆ. ಆದರೆ, ಇಡೀ ಗ್ರಾಮ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರನ್ನೂ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ರಾವೂರು ಗ್ರಾಮಸ್ಥರು ಗಮನ ಸೆಳೆದಿದ್ದಾರೆ.

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಘೋಷಿಸಿರುವಂತೆ ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಪಡೆದುಕೊಳ್ಳಲು ಗ್ರಾಮ ಪಂಚಾಯ್ತಿ ಅರ್ಹತೆ ಗಿಟ್ಟಿಸಿದಂತಾಗಿದೆ. ಉಳಿದಂತೆ ಇತರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರೋ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
Published by: G Hareeshkumar
First published: December 20, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories