Sister Suicide: ಗೌರಿ ತರೋ ವಿಚಾರಕ್ಕೆ ಗಲಾಟೆ, ತಂಗಿ ಜೊತೆ ಜಗಳ ಮನನೊಂದು ಅಕ್ಕ ಸೂಸೈಡ್!

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಹಿನ್ನೆಲೆ ಗೌರಿ ತರುವ ಬಗ್ಗೆ ಚರ್ಚೆಯಾಗಿದೆ. ಆಗ ಇದೇ ವಿಚಾರದಲ್ಲಿ ಅಕ್ಕ ತಂಗಿಯ ಮಧ್ಯೆ ಗಲಾಟೆಯಾಗಿದೆ. ನಂತರ ಅಕ್ಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸಾವನ್ನಪ್ಪಿದ ರುಕ್ಮಿಣಿ

ಸಾವನ್ನಪ್ಪಿದ ರುಕ್ಮಿಣಿ

  • Share this:
ಗೌರಿ ಗಣೇಶ ಹಬ್ಬವೆಂದರೆ (Gowri Ganesha Festival) ಎಲ್ಲಾ ಕಡೆ ಭಾರೀ ಸಂಭ್ರಮ ಮನೆ ಮಾಡಿರುತ್ತೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಹೆಣ್ಮಕ್ಕಳು (Girls) ನಲಿಯುತಾ, ಕುಣಿಯುತ್ತಾ ಓಡಾಡ್ತಾ ಇರೋದನ್ನು ನೋಡೋದೇ ಚಂದ. ಅದರಲ್ಲೂ ಗೌರಿ ಹಬ್ಬ ಅಂದ್ರೆ ಹೆಣ್ಮಕ್ಕಳಿಗೆ ಇನ್ನೂ ಶ್ರೇಷ್ಠ. ಈ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಗೌರಿ-ಗಣೇಶ ಹಬ್ಬದಂದೇ ಮನೆ (Home) ಸೂತಕವಾಗಿದೆ. ಗೌರಿ ತರೋ ವಿಚಾರಕ್ಕೆ ಅಕ್ಕ ತಂಗಿಯರ(Sisters) ನಡುವೆ ಜಗಳ (Fight) ನಡೆದಿದೆ. ಪರಿಣಾಮ ಅಕ್ಕ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ. ಒಂದು ಚಿಕ್ಕ ವಿಚಾರಕ್ಕೆ ನಡೆದ ಗಲಾಟೆ ಈಗ ಪ್ರಾಣವನ್ನೇ ಕಳೆದುಕೊಳ್ಳೋವರೆಗೆ ಬಂದು ನಿಂತಿದೆ. ಅಂದಹಾಗೇ ಈ ಘಟನೆ ನಡೆದಿರೋದು ಕುಂದಾನಗರಿ ಬೆಳಗಾವಿಯಲ್ಲಿ.

ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಹಿನ್ನೆಲೆ ಮನೆಗೆ ಗೌರಿ ತರುವ ಬಗ್ಗೆ ಮನೆಯಲ್ಲಿ ಚರ್ಚೆಯಾಗಿದೆ. ಆಗ ಇದೇ ವಿಚಾರದಲ್ಲಿ ಅಕ್ಕ ತಂಗಿಯ ಮಧ್ಯೆ ಗಲಾಟೆಯಾಗಿದೆ. ನಂತರ ಅಕ್ಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರತಿವರ್ಷ ಮನೆಗೆ ಗೌರಿಯನ್ನು ತರುತ್ತಿದ್ದ ಅಕ್ಕ
ಗೌರಿ ಗಣೇಶ ಹಬ್ಬದ ವೇಳೆ ಪ್ರತಿವರ್ಷ ಮನೆಗೆ ಗೌರಿಯನ್ನು ಅಕ್ಕ ರುಕ್ಮಿಣಿ ತರುತ್ತಿದ್ದಳು. ಆದರೆ ಈ ಬಾರಿ ತಂಗಿ ಹಠ ಮಾಡಿದ್ದಾಳೆ. ಪ್ರತಿ ಬಾರಿ ಅಕ್ಕನೇ ಏಕೆ ಮನೆಗೆ ಗೌರಿ ತರಬೇಕು. ನಾನೂ ತರ್ತಿನಿ ಎಂದು ತಂಗಿ ಸರಿತಾ ವಾದ ಮಾಡಿದ್ದಾಳೆ. ಕೊನೆಗೆ ಅಕ್ಕ ತಂಗಿಯ ಜಗಳದಲ್ಲಿ ಮನನೊಂದು ರುಕ್ಮಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Gorwri ganesha festival statue matter fight between sisters elder sister suicide
ಸಾವನ್ನಪ್ಪಿದ ಅಕ್ಕ ರುಕ್ಮಿಣಿ


ಇದನ್ನೂ ಓದಿ: ದಯಮಾಡಿ ಕ್ಷಮಿಸಿ ನನಗೆ ಬದುಕುವುದಕ್ಕೆ ಇಷ್ಟವಿಲ್ಲ, ಕೈಕುಯ್ದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ!

ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ವಿದ್ಯಾರ್ಥಿ ಸಾವು
ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. 10ನೇ ತರಗತಿಯ ಚೇತನ್(15) ಮೃತ ವಿದ್ಯಾರ್ಥಿ. ತುಮಕೂರು ತಾಲೂಕು ಮುದಿಗೆರೆ ಕಟ್ಟೆಯಲ್ಲಿ ಘಟನೆ ನಡೆದಿದೆ. ಗಣೇಶ ವಿಸರ್ಜನೆ ಮಾಡಲು ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಯನ್ನ ಕಟ್ಟೆಗೆ ಇಳಿಸಿದ್ದಾರೆ.

ಈಜು ಬಾರದೇ ವಿದ್ಯಾರ್ಥಿ ಸಾವು
ಆದರೆ ವಿದ್ಯಾರ್ಥಿ ಚೇತನ್ ಈಜು ಬಾರದೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತ ತುಮಕೂರು ನಗರದ ಭೀಮಸಂದ್ರ ಮೂಲದ ವಿದ್ಯಾರ್ಥಿಯಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಪ್ರೀತಿಯ ಹಸು ಅಪಘಾತದಲ್ಲಿ ಮರಣ, ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು!
ಪ್ರೀತಿಯಿಂದ ಸಾಕಿದ್ದ ಹಸು ಅಪಘಾತದಲ್ಲಿ ಸಾವನ್ನಪ್ಪಿದ್ದು ಮಕ್ಕಳು ರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಿವಮೊಗ್ಗ ನಗರದ ಮಲವಗೊಪ್ಪದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮಲವಗೊಪ್ಪ ಶಿವಮೊಗ್ಗ ಭದ್ರಾವತಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ಲಾರಿ ಗುದ್ದಿದ ಪರಿಣಾಮ ಹಸು ಸ್ಥಳದಲ್ಲೇ ಪಾಣ ಬಿಟ್ಟಿದೆ. ಪೂಜಾ ಎನ್ನುವ ಹಸು ಅಪಘಾತದಲ್ಲಿ ಮರಣ ಹೊಂದಿದ್ದನ್ನು ಕಂಡು ಮಕ್ಕಳು ಹಸುವನ್ನು ತಬ್ಬಿ ಅತ್ತಿದ್ದಾರೆ. ಮಕ್ಕಳು ಅಳುವ ಮನಕಲಕುವಂತಿತ್ತು.

ಇದನ್ನೂ ಓದಿ: ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್ ಹಾರಾಟ!

ಉಕ್ಕಡಗಾತ್ರಿಯಲ್ಲಿ ಅಕ್ಕ-ತಂಗಿ ನೀರುಪಾಲು!
ಹರಿಹರ ತಾಲೂಕಿನ ಉಕ್ಕಡಗಾತ್ರಿ ತೀರ್ಥಕ್ಷೇತ್ರಕ್ಕೆ ಹೋಗಿದ್ದ ಅಕ್ಕತಂಗಿಯರು ನೀರುಪಾಲಾದ ಘಟನೆ ನಡೆದಿದೆ. ನೀರಿನಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಹುಚ್ಚವನಹಳ್ಳಿ ಗ್ರಾಮದ ರಾಧಮ್ಮ ಮಕ್ಕಳಾದ ವಿ ಚೈತ್ರ (19 ವರ್ಷ) ವಿ ಪುಷ್ಪಾವತಿ (16) ಸಾವನ್ನಪ್ಪಿದವರು.

ಹೊಳೆಯಲ್ಲಿ ಸ್ನಾನ ಮಾಡಲು ನೀರಿನಲ್ಲಿ ಇಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚೈತ್ರಾ ಎಂಬಾಕೆ ವಿಕಲಚೇತನರಾಗಿದ್ದರು. ಉಕ್ಕಡಗಾತ್ರಿ ಉಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published by:Thara Kemmara
First published: