ಸ್ಪರ್ಧಿಸಿರುವುದು 7 ಕ್ಷೇತ್ರಗಳಲ್ಲಿ, ಆದರೂ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ; ಗೌಡರ ಬಗ್ಗೆ ಬಿಎಸ್​ವೈ ವ್ಯಂಗ್ಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯಾಗಿ ರಾಜ್ಯದಲ್ಲಿ ಸ್ಪರ್ಧಿಸಿದೆ. 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಹಾಗೂ 7 ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧೆ ಮಾಡಿದೆ.

Rajesh Duggumane | news18
Updated:April 20, 2019, 8:17 AM IST
ಸ್ಪರ್ಧಿಸಿರುವುದು 7 ಕ್ಷೇತ್ರಗಳಲ್ಲಿ, ಆದರೂ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ; ಗೌಡರ ಬಗ್ಗೆ ಬಿಎಸ್​ವೈ ವ್ಯಂಗ್ಯ
ಯಡಿಯೂರಪ್ಪ-ದೇವೇಗೌಡ
Rajesh Duggumane | news18
Updated: April 20, 2019, 8:17 AM IST
ಬೆಂಗಳೂರು (ಏ.20): ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಅವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಜೆಡಿಎಸ್​ ಸ್ಪರ್ಧಿಸಿರುವುದು ಕೇವಲ 7 ಕ್ಷೇತ್ರಗಳಲ್ಲಾದರೂ ಅವರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.

ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯಡಿಯೂರಪ್ಪ, ‘ರಾಜ್ಯದಲ್ಲಿ ಜೆಡಿಎಸ್​ ಕೇವಲ 7 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಆದಾಗ್ಯೂ ದೇವೇಗೌಡರಿಗೆ ಪ್ರಧಾನಿ ಅಥವಾ ಪ್ರಧಾನಿಯ ಸಲಹೆಗಾರ ಆಗಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದಾರೆ,’ ಎಂದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದೇವೇಗೌಡ, “ನಾನು ಎಲ್​ಕೆ ಅಡ್ವಾಣಿಯಂತೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವುದಿಲ್ಲ. ಒಂದೊಮ್ಮೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ಆದರೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ,” ಎಂದು ಹೇಳಿದ್ದರು. ಈ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿಯಾದರೆ ಬೆಂಬಲಕ್ಕೆ ನಾನು ನಿಲ್ಲುತ್ತೇನೆ; ಎಚ್​.ಡಿ. ದೇವೇಗೌಡ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯಾಗಿ ರಾಜ್ಯದಲ್ಲಿ ಸ್ಪರ್ಧಿಸಿದೆ. 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಹಾಗೂ 7 ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧೆ ಮಾಡಿದೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿದೆ ಎನ್ನುವ ವಿಶ್ವಾಸ ಬಿಜೆಪಿಯದ್ದು. “ನಮ್ಮ ಪಕ್ಷ ಶಿವಮೊಗ್ಗದಲ್ಲಿ ಮಾತ್ರ ಹೆಚ್ಚು ಅಂತರಗಳಿಂದ ಗೆಲ್ಲುವುದು ಮಾತ್ರವಲ್ಲ, ರಾಜ್ಯದಲ್ಲಿ 22 ಸ್ಥಾನ ಗಳಿಸಲಿದೆ. ನಮಗೆ ಆ ಬಗ್ಗೆ ಸಂಪೂರ್ಣ ವಿಶ್ವಾಸವಿದೆ,” ಎಂದರು ಯಡಿಯೂರಪ್ಪ.
Loading...

ಇದನ್ನೂ ಓದಿ: ಮಗನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡ

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...