ಜೆಇಇ, ನೀಟ್​ ಪರೀಕ್ಷಾ ಆಕಾಂಕ್ಷಿಗಳಿಗೆ ಇನ್ಮುಂದೆ ಉಚಿತ ಕೋಚಿಂಗ್​!


Updated:August 30, 2018, 3:44 PM IST
ಜೆಇಇ, ನೀಟ್​ ಪರೀಕ್ಷಾ ಆಕಾಂಕ್ಷಿಗಳಿಗೆ ಇನ್ಮುಂದೆ ಉಚಿತ ಕೋಚಿಂಗ್​!

Updated: August 30, 2018, 3:44 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.30): ದುಬಾರಿ ಶುಲ್ಕ ವಿಧಿಸಿ ನೀಟ್​ ಮತ್ತು ಜೆಇಇ ಪರೀಕ್ಷಾ ಆಕಾಂಕ್ಷಿಗಳಿಂದ ಭಾರೀ ಸುಲಿಗೆ ಮಾಡುತ್ತಿದ್ದ ಖಾಸಗಿ ಕೋಚಿಂಗ್​ ಸೆಂಟರ್​ಗಳಿಗೆ ಸರ್ಕಾರವು ಶಾಕಿಂಗ್​ ಸುದ್ದಿಯೊಂದನ್ನು ನೀಡಿದೆ. ಹೌದು ಮುಂದಿನ ವರ್ಷದಿಂದ ಜೆಇಇ ಮತ್ತು ನೀಟ್ ಸಿದ್ಧತೆಗೆ ಸರ್ಕಾರವು ಉಚಿತ ಕೋಚಿಂಗ್ ನೀಡಲು ನಿರ್ಧರಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಈ ಕನಸು ಮುಂದಿನ ವರ್ಷದಿಂದ ನನಸಾಗಲಿದೆ.

ಮುಂದಿನ ವರ್ಷದಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರ ರಚಿಸಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತನ್ನೆಲ್ಲಾ 2,697 ಪರೀಕ್ಷಾಭ್ಯಾಸ ಕೇಂದ್ರಗಳನ್ನು ಕೋಚಿಂಗ್ ಸೆಂಟರ್‌ಗಳಾಗಿ ಪರಿವರ್ತಿಸಲಿದೆ. ಅಲ್ಲದೇ ಸಪ್ಟೆಂಬರ್​ 8 ರಿಂದ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ ಸಚಿವಾಲಯ "ಈ ಅಭ್ಯಾಸ ಕೇಂದ್ರಗಳನ್ನು ಕೇವಲ ಪರೀಕ್ಷಾ ಅಭ್ಯಾಸಕ್ಕಷ್ಟೇ ಸೀಮಿತಗೊಳಿಸದೇ ಬೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸುವುದು ಸರ್ಕಾರದ ಯೋಜನೆ. ಅಲ್ಲದೇ ಇದು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಈ ಯೋಜನೆ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ದುಬಾರಿ ಶುಲ್ಕ ಪಾವತಿಸಲಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ" ಎಂದು ತಿಳಿಸಿದ್ದಾರೆ.

ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ . 2019ರ ಮೇ ತಿಂಗಳಿನಿಂದ ಬೋಧನೆ ಆರಂಭವಾಗಲಿದ್ದು, ಮಾದರಿ ಪರೀಕ್ಷೆಯನ್ನು ನಡೆಸಲು ಎನ್‌ಟಿಎ ನಿರ್ಧರಿಸಿದೆ. ಅಲ್ಲದೇ ಪರೀಕ್ಷೆಗೆ ಎನ್‌ಟಿಎ ಬಳಿ ನೋಂದಾಯಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳು ನೀಟ್-ಯುಜಿ ಮತ್ತು ಯುಜಿಸಿ- ನೆಟ್ ಮಾದರಿ ಪರೀಕ್ಷೆಗೆ ಹಾಜರಾಗಬಹುದಾಗಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...