ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಬದ್ಧ: ನಳಿನ್ ಕುಮಾರ್ ಕಟೀಲ್

ನಮ್ಮಲ್ಲಿ ಮೂಲ ಬಿಜೆಪಿ ವಲಸಿಗ ಬಿಜೆಪಿ ಅನ್ನೂ ಪ್ರಶ್ನೆಯಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೆ‌ಯಿಲ್ಲ. ಮಂತ್ರಿಮಂಡಲ‌ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.

ನಳಿನ್ ಕುಮಾರ್ ಕಟೀಲ್

ನಳಿನ್ ಕುಮಾರ್ ಕಟೀಲ್

  • Share this:
ಹೊಸಕೋಟೆ (ಡಿಸೆಂಬರ್​. 02): ಲವ್ ಜಿಹಾದ್ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣವಾದ ಕಾನೂನು ಜಾರಿಗೆ ತರಲಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಬಿಜೆಪಿ ಪ್ರಣಾಳಿಕೆಯಲ್ಲಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದೆ ತರುವುದಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುನರುಚ್ಚರಿಸಿದ್ದಾರೆ. ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಅಂಗವಾಗಿ ಹೊಸಕೋಟೆಗೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಲವ್ ಜಿಹಾದ್ ಸಹಿಸುವುದಿಲ್ಲ‌. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಂದ ಕ್ರಾಸ್ ಬ್ರೀಡ್ ಎನ್ನುವ ಪದ ಬರಬಾರದಿತ್ತು. ಸಾರ್ವಜನಿಕರು ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ನೀವು ಕ್ರಾಸ್ ಆದವರು ಎಂದು ಜರಿಯಬಹುದು ಎಂದು ಕಟೀಲ್ ವ್ಯಂಗ್ಯವಾಡಿದ್ದಾರೆ.  ಮಂತ್ರಿ ಮಂಡಲ ಪುನರ್​ರಚನೆ ಯಾವಾಗ ಬೇಕಾದರು ಆಗಬಹುದು. ಬಿಜೆಪಿಗೆ ಬಂದ 17 ಜನ ಶಾಸಕರು ಮಂತ್ರಿಗಳಾಗಲು ಅರ್ಹರು. ಆದರೆ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಮತ್ತು ಭೌಗೋಳಿಕವಾರು ಚರ್ಚಿಸಿ ಮಂತ್ರಿ ಮಂಡಲ ರಚನೆ ಮಾಡಿದ್ದಾರೆ ಎಂದರು.

ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಿ ಯಾರಿಗೆಲ್ಲ ಯಾವ ಸ್ಥಾನ ನೀಡಬೇಕೂ ಅವರಿಗೆ ಸಿಎಂ ಸ್ಥಾನ ನೀಡುತ್ತಾರೆ ಎಂದರು. ಇನ್ನೂ ಬಿಜೆಪಿ ಬಿ ಪಾರ್ಮ್ ಪಡೆದು ಬಂದ ಮೇಲೆ ಎಲ್ಲರು ಬಿಜೆಪಿಯವರೆ. ನಮ್ಮಲ್ಲಿ ಮೂಲ ಬಿಜೆಪಿ ವಲಸಿಗ ಬಿಜೆಪಿ ಅನ್ನೂ ಪ್ರಶ್ನೆಯಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ  ಪ್ರಶ್ನೆಯೆ‌ಯಿಲ್ಲ. ಮಂತ್ರಿಮಂಡಲ‌ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೊಸಕೋಟೆಯಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಶ್ರೀರಾಮುಲು ಹೇಳಿಕೆಗೆ ಖಂಡನೆ; ಮೊಳಕಾಲ್ಮೂರಿಗೆ 371(ಜೆ) ಸ್ಥಾನಮಾನಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಆಕ್ರೋಶ

ನಮ್ಮ ಪಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಜಯ ಸಾಧಿಸಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕನಸುಗಳನ್ನು ನನಸು ಮಾಡಬೇಕಾದರೆ, ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ ಬಂದಿರುವ ಬಿಜೆಪಿಯನ್ನು ಜನರು ಗೆಲ್ಲಿಸಬೇಕು. ಒಂದು ವೇಳೆ ಹಳ್ಳಿಹಳ್ಳಿಯಲ್ಲೂ ಕಮಲ ಅರಳಿದರೆ, ರಾಜ್ಯದ ಚಿತ್ರಣವೇ ಬದಲಾಗಿಬಿಡುತ್ತದೆ ಎಂದರು.

ಪ್ರಧಾನಮಂತ್ರಿಗಳು ಯಾವಾಗಲೂ ಒಂದು ಮಾತು ಹೇಳುತ್ತಲೇ ಇರುತ್ತಾರೆ. ಮತಗಟ್ಟೆ ಗೆದ್ದರೆ ದೇಶವನ್ನೇ ಗೆದ್ದಂತೆ ಎಂದು. ಆ ಮಾತು ನಿಜ. ಏಕೆಂದರೆ, ಪಂಚಾಯಿತಿ ಚುನಾವಣೆಯು ಚಿಹ್ನೆ ಇಲ್ಲದೆ ನಡೆಯುತ್ತದೆ. ಆದ ಕಾರಣದಿಂದ ಕಾರ್ಯಕರ್ತರು ಅದನ್ನೇ ಸವಾಲಾಗಿ ಸ್ವೀಕರಿಸಿ ಕೆಲಸ ಆಡಬೇಕು ಎಂದು ಸಲಹೆ ಮಾಡಿದರು.
Published by:G Hareeshkumar
First published: