ಶಿಕ್ಷಕರಿಂದಲೇ ಹೇಯ ಕೃತ್ಯ...ಕಾರಣ ಕೇಳಿ ಶಿಕ್ಷಣ ಇಲಾಖೆ ನೋಟಿಸ್ ಜಾರಿ​

news18
Updated:August 10, 2018, 7:01 PM IST
ಶಿಕ್ಷಕರಿಂದಲೇ ಹೇಯ ಕೃತ್ಯ...ಕಾರಣ ಕೇಳಿ ಶಿಕ್ಷಣ ಇಲಾಖೆ ನೋಟಿಸ್ ಜಾರಿ​
  • Advertorial
  • Last Updated: August 10, 2018, 7:01 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ 

ಬೆಳಗಾವಿ (ಆಗಸ್ಟ್ 10) :  ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿಗೆ ಮಕ್ಕಳ ಹಾಜರಾತಿ ತೀವ್ರವಾಗಿ ಕುಸಿಯುತ್ತಿದೆ. ಇದಕ್ಕೆ ಅನೇಕ ಕಾರಣಗಳು ಪೋಷಕರು ಹೇಳುತ್ತಾರೆ. ಆದರೇ ಈಗ ನಾವು ಹೇಳಲು ಹೊರಟಿರೋದು ಶಿಕ್ಷಕನೊಬ್ಬ ಹೇಯ ಕೃತ್ಯದ ಸ್ಟೋರಿ.. ಪಾಠ ಕಲಿಯೋಕೆ ಬರೋ ಮಕ್ಕಳ ಕೈಯಲ್ಲಿ ಅದೇಂತ ಕೆಲಸ ಮಾಡ್ಸಿದ್ದಾನೆ ಅಂತ ನೀವೊಮ್ಮೆ ಓದಿ... !

ಯೆಸ್ ಇದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ್ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಹೇಯ ಕೃತ್ಯ.. ಮಕ್ಕಳು ವಿದ್ಯಾ, ಬುದ್ದಿ ಕಲಿತು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಲಿ ಅಂತ ಪೋಷಕರು ಶಾಲೆಗೆ ಕಳುಹಿಸಿದ್ದರೆ. ಆದರೇ ಈ ಶಾಳೆಯಲ್ಲಿ ಆಗುತ್ತಿರೋದೆ ಬೇರೆ. ಶಾಲಾ ವಿದ್ಯಾರ್ಥಿಗಳನ್ನು ಶೌಚಾಲಯ ಶುಚಿತ್ವ, ಶಿಕ್ಷಕರ ಬೈಕ್ ಕ್ಲಿನ್ ಬಳಸಿಕೊಳ್ಳಲಾಗುತ್ತಿದೆ.

ಇದು ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಜೈಪಾಲ್ ಭಜಂತ್ರಿಯಿಂದಲೇ ಈ ಎಲ್ಲಾ ಕೆಲಸ ಮಾಡಿಸುವ ಕೃತ್ಯ ನಡೆದಿದೆ ಎಂದು ಆರೋಪಿಲಾಗಿದೆ. ಇನ್ನೂ ನ್ಯೂಸ್ 18 ಕನ್ನಡ ಜತೆಗೆ ಮಾತನಾಡಿದ ಶಿಕ್ಷಕ ಜೈಪಾಲ್ ಈ ಬಗ್ಗೆ ಸ್ವತಃ ತಾನೇ ಒಪ್ಪಿಕೊಂಡಿದ್ದಾನೆ. ನಂತರ ತನ್ನ ತಪ್ಪನ್ನು ಮರೆಮಾಚುವ ಯತ್ನವನ್ನು ಸಹ ಮಾಡಿದ್ದಾನೆ.

ಶಿಕ್ಷಕ ವರ್ತನೆ ಬಗ್ಗೆ ಸ್ಥಳೀಯರು ಅನೇಕ ಆರೋಪಗಳನ್ನುಸಹ ಮಾಡಿದ್ದಾರೆ. ಇನ್ನೂ ಶಿಕ್ಷಕರ ಈ ಹೇಯ ಕೃತ್ಯದ ಬಗ್ಗೆ ನ್ಯೂಸ್ 18 ಕನ್ನಡದಲ್ಲಿ ವಿಸ್ಕೃತ ವರದಿ ಪ್ರಸವಾಗಿತ್ತು. ಇದಾದ ಬಳಿಕ ಎಚ್ಚೆತ್ತ ಮೂಡಲಗಿ ಬಿಇಓ ಎ.ಸಿ ಗಂಗಾಧರ ಈ ಬಗ್ಗೆ ದೃಶ್ಯಗಳನ್ನು ನೋಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರಭಾರಿ ಮುಖ್ಯ ಶಿಕ್ಷಕರ ಅಮಾನತ್ತು ಮಾಡುವ ಅಧಿಕಾರ ನನಗಿಲ್ಲ. ಈ ಬಗ್ಗೆ ಡಿಡಿಪಿಐಗೆ ವರದಿ ಕಳುಹಿಸುತ್ತೇನೆ ಎಂದಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿಕ್ಕೋಡಿ ಡಿಡಿಪಿಐ ಅಜೀತ್ ಮಣ್ಣಿಕೇರಿ, ಶಿಕ್ಷಕನಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಬಿಇಓ ವರದಿ ಆಧಾರಿಸಿ ಶಿಸ್ತು ಕ್ರಮ ಕೈಗೊಳ್ಳಲಾವುದು ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆಯಾಗಿ ಇತ್ತೀಚಿನ ದಿಗನಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳ ಹಾಜರಾತಿ ಗಣನೀಯವಾಗು ಕುಸಿಯುತ್ತಿದೆ. ಅಂತಹುವುದರಲ್ಲಿ ಶಿಕ್ಷಕರ ಈ ವರ್ತನೆ ಪೋಷಕರ ಆಕ್ರೋಶ ಗುರಿಯಾಗಿದೆ. ಇನ್ನಾದರೂ ಶಿಕ್ಷಣ ಇಲಾಖೆ ಇಂತಹ ಪ್ರಕರಣಗಳ ಮೇಲೆ ನಿಗಾ ವಹಿಸಬೇಕು. ಬೇಜವಾಬ್ದಾರಿ ಶಿಕ್ಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಅಂದಾಗ ಮಾತ್ರ ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಬಹುದು. 

 
First published:August 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ