• Home
  • »
  • News
  • »
  • state
  • »
  • Yashaswini Yojana: ರಾಜ್ಯದಲ್ಲಿ ಮತ್ತೆ ಯಶಸ್ವಿನಿ ಯೋಜನೆ ಜಾರಿ; ನೋಂದಣಿ ಮಾಡಿಕೊಳ್ಳೋದು ಯಾವಾಗ?

Yashaswini Yojana: ರಾಜ್ಯದಲ್ಲಿ ಮತ್ತೆ ಯಶಸ್ವಿನಿ ಯೋಜನೆ ಜಾರಿ; ನೋಂದಣಿ ಮಾಡಿಕೊಳ್ಳೋದು ಯಾವಾಗ?

ಮತ್ತೆ ಯಶಸ್ವಿನಿ ಯೋಜನೆ ಜಾರಿ

ಮತ್ತೆ ಯಶಸ್ವಿನಿ ಯೋಜನೆ ಜಾರಿ

ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ನಿಗದಿ ಮಾಡಲಾಗಿದೆ. 4 ಸದಸ್ಯರ ಕುಟುಂಬಕ್ಕೆ ವರ್ಷಕ್ಕೆ 500 ವಂತಿಕೆ ಕಟ್ಟಬೇಕಾಗಿದೆ. ನೊಂದಣಿ ಪ್ರಕ್ರಿಯೆಯನ್ನು 01-11-2022 ರಿಂದ ಪ್ರಾರಂಭವಾಗಲಿದೆ. 

  • News18 Kannada
  • Last Updated :
  • Karnataka, India
  • Share this:

ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು (Yashaswini Yojana) ಮರು ಜಾರಿಗೊಳಿಸಿದೆ. ತಾತ್ವಿಕ ಅನುಮೋದನೆ ನೀಡಿ ಸರ್ಕಾರ ಆದೇಶ (Government Order) ನೀಡಿದೆ. 2018ರಲ್ಲಿ ಈ ಯೋಜನೆ ರದ್ದುಗೊಳಿಸಲಾಗಿತ್ತು. ಯಶಸ್ವಿನಿ ಯೋಜನೆಗಾಗಿ ರೈತರು ಹಾಗೂ  ಸಹಕಾರಿ ಸಂಘಗಳು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ (Re-Enforcement) ಆದೇಶ ಹೊರಡಿಸಿದೆ. 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ. 


ಯಶಸ್ವಿನಿ ಯೋಜನೆ ಯಾವಾಗ ಜಾರಿ


ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ನಿಗದಿ ಮಾಡಲಾಗಿದೆ. 4 ಸದಸ್ಯರ ಕುಟುಂಬಕ್ಕೆ ವರ್ಷಕ್ಕೆ 500 ವಂತಿಕೆ ಕಟ್ಟಬೇಕಾಗಿದೆ. ನೊಂದಣಿ ಪ್ರಕ್ರಿಯೆಯನ್ನು 01-11-2022 ರಿಂದ ಪ್ರಾರಂಭವಾಗಲಿದೆ. ಯಶಸ್ವಿ ಯೋಜನೆ ಅವಧಿ 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1650 ಖಾಯಿಲೆಗಳಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.


Govt orders to re implement Yashaswini Yojana pvn
ಮತ್ತೆ ಯಶಸ್ವಿನಿ ಯೋಜನೆ ಜಾರಿ


ಏನಿದು ಯಶಸ್ವಿನಿ ಯೋಜನೆ?


ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು 'ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ'. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್​​ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.


ಯೋಜನೆಯ ಫಲಾಭವಿಯಾಗಲು ಇರಬೇಕಾದ ಅರ್ಹತೆಗಳೇನು?:


ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.


ಪಾವತಿಸಬೇಕಾದ ವಂತಿಗೆ ಹಣ ಎಷ್ಟು?: 


ಫಲಾನುಭವಿಯಾಗ ಬಯಸುವ ಪ್ರತಿಯೊಬ್ಬರೂ ವರ್ಷಕ್ಕೆ ನಿಗದಿತ ಪ್ರಮಾಣದ ವಂತಿಗೆ ಹಣ ನೀಡಬೇಕು. ಇದೀಗ 4 ಸದಸ್ಯರ ಕುಟುಂಬಕ್ಕೆ ವರ್ಷಕ್ಕೆ 500 ವಂತಿಕೆ ಕಟ್ಟಬೇಕಾಗಿದೆ. ಒಂದೇ ಕುಟುಂಬದ 5 ಅಥವಾ 5ಕ್ಕಿಂತ ಹೆಚ್ಚು ಸದಸ್ಯರು ನೋದಣಿಯಾದಲ್ಲಿ ವಂತಿಗೆಯಲ್ಲಿ ಶೇ.15 ರಿಯಾಯಿತಿ ಇರುತ್ತದೆ .


ಯಾವ ಯಾವ ಸದಸ್ಯರು ಸೇರಿರುತ್ತಾರೆ?:


ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು. ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.


 823 ಬಗೆಯ ಶಸ್ತ್ರಚಿಕಿತ್ಸೆಗಳು


ಪ್ರತಿಯೊಬ್ಬ ಸದಸ್ಯನಿಗೆ ಯುನಿಕ್ ಐಡಿ ನಂಬರ್​​​ಗಳಿರುವ ಬಾರ್ ಕೋಡ್ ರೀಡಿಂಗ್ ವ್ಯವಸ್ಥೆ ಇರುವ ಗುರುತಿಸುವ ಕಾರ್ಡ್ ಅನ್ನು ಕೊಡಲಾಗುತ್ತದೆ. ಅದರ ಮುಂದಿನ ಪ್ರಬದಲ್ಲಿ ನೋಂದಾಯಿಸಿದ ವಿವರಗಳು ಮತ್ತು ಹಿಂಬದಿಯಲ್ಲೇ ಅವರ ಭಾವಚಿತ್ರಗಳು ಇರುತ್ತದೆ. ಯೋಜನೆಯು ಒಳಗೊಂಡ ಶಸ್ತ್ರಚಿಕಿತ್ಸೆಗಳೆಷ್ಟು: ಯಶಸ್ವಿನಿ ಈ ಯೋಜನೆಯಲ್ಲಿ 823 ಬಗೆಯ ಶಸ್ತ್ರಚಿಕಿತ್ಸೆಗಳು ಒಳಗೊಂಡಿದೆ.


ಇದನ್ನೂ ಓದಿ: Siddaramaiah Tweet: ನಿಮ್ಮ ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು; ಬೊಮ್ಮಾಯಿ, ಬಿಎಸ್​ವೈಗೂ ಸಿದ್ದು ಸವಾಲ್​!


ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳು 


ಟ್ರಸ್ಟನಿಂದ ಅಂಗೀಕೃತವಾದ ಆಸ್ಪತ್ರೆಗಳಲ್ಲಿ ಯಶಸ್ವಿನಿ ಫಲಾನುಭವಿಗಳು ಹೊರರೋಗಿ ಸಲಹೆಯನ್ನು ರೂ 100ಗಳನ್ನು ಸಾಮಾನ್ಯ ಪರೀಕ್ಷೆಗೆ ಮತ್ತು ವಿಶೇಷ ತಜ್ಙರಿಂದ ಪರೀಕ್ಷೆ ಮಾಡಿಸಿಕೊಳ್ಳಲು ರೂ.200ಗಳನ್ನು ಪಾವತಿಸಿ ಮೂರು ತಿಂಗಳವರೆಗೆ ಅದೇ ಕಾರ್ಡ್​​​​​ನಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಯಶಸ್ವಿನಿ ಕಾರ್ಡ್​ದಾರರು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಕ್ಲಿನಿಕ್ ಅಥವಾ ಇನ್ನಾವುದೇ ಇನ್ವೆಸ್ಟಿಗೇಷನ್ ಗಳನ್ನು ಶೇ 25 ರಿಯಾಯಿತಿ ದರದಲ್ಲಿ ಪಡೆಯಬಹುದು.


ಇದನ್ನೂ ಓದಿ: Tumakuru: ನಿಮಗೆ ಪೂಜೆ ಮಾಡಿಕೊಡುವುದಿಲ್ಲ, ದಲಿತ ಕುಟುಂಬವನ್ನು ದೇಗುಲದಿಂದ ಹೊರಕ್ಕೆ ಕಳುಹಿಸಿದ ಅರ್ಚಕ


ಯಶಸ್ವಿನಿ ಯೋಜನೆಯಡಿಯಲ್ಲಿ ಒಳಪಡದ ಶಸ್ತ್ರಚಿಕಿತ್ಸೆಗಳು 


ಶಸ್ತ್ರಚಿಕಿತ್ಸೆ ಅವಶ್ಯವಿಲ್ಲದ ಯಾವುದೇ ವೈದ್ಯಕೀಯ ಚಿಕಿತ್ಸೆ ಯೋಜನೆಯಲ್ಲಿ ಲಭ್ಯವಿರುವುದಿಲ್ಲ. ಇದಲ್ಲದೇ ಚಿಕಿತ್ಸೆಗಳಾದ ಕೀಮೊಥೆರಪಿ, ರೇಡಿಯೋ ಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟು ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತ್ರಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್,ಸ್ಟಂಟ್, ಇಂಪ್ಲಾಂಟ್ಸ್ ಇತ್ಯಾದಿ ಸೌಲಭ್ಯಗಳು ಯೋಜನೆಯಲ್ಲಿ ಸೇರಿರುವುದಿಲ್ಲ. ಇಂತಹ ಅನಾರೋಗ್ಯಗಳಿಗೆ ಫಲಾನುಭವಿ ಪಡೆಯುವ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಗಳ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು.

Published by:ಪಾವನ ಎಚ್ ಎಸ್
First published: