HOME » NEWS » State » GOVT OFFICIALS MISTAKE WHILE CLEARING THE MEMORIAL OCCUPIED VENUE IN KODAGU GNR

ರಾಜಕೀಯ ನಾಯಕರ ಒತ್ತಡ - ಕೊಡಗಿನಲ್ಲಿ ಗದ್ದುಗೆ ಒತ್ತುವರಿ ಜಾಗ ತೆರವು ಮಾಡುವಲ್ಲಿ ಅಧಿಕಾರಿಗಳ ಎಡವಟ್ಟು

ಇನ್ನು, ಮಡಿಕೇರಿ ತಹಶೀಲ್ದಾರ್ ನೇತೃತ್ವದಲ್ಲಿ ತ್ಯಾಗರಾಜ ಕಾಲೋನಿಯಲ್ಲಿ ಸರ್ವೇ ಮಾಡಲು ಹೋಗಿದ್ದರು. ಆದರೆ ಜನರು ಮಾತ್ರ ಅಧಿಕಾರಿಗಳಿಗೆ ಸರ್ವೇ ಮಾಡಲು ಅವಕಾಶ ನೀಡಿಲ್ಲ. ಬದಲಿಗೆ ಗದ್ದುಗೆ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್, ನಗರಸಭೆಯಿಂದ ನಿರ್ಮಿಸಿರುವ ಶಾಲೆ ಇವೆಲ್ಲವೂ ಇದ್ದು, ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ಸರ್ವೆ ಮಾಡುವಂತೆ ಜನರು ಆಗ್ರಹಿಸಿದ್ದಾರೆ.

news18-kannada
Updated:September 30, 2020, 7:24 PM IST
ರಾಜಕೀಯ ನಾಯಕರ ಒತ್ತಡ - ಕೊಡಗಿನಲ್ಲಿ ಗದ್ದುಗೆ ಒತ್ತುವರಿ ಜಾಗ ತೆರವು ಮಾಡುವಲ್ಲಿ ಅಧಿಕಾರಿಗಳ ಎಡವಟ್ಟು
ಕೊಡಗು ನ್ಯೂಸ್​
  • Share this:
ಕೊಡಗು(ಸೆ.30): ರಾಜಕೀಯ ನಾಯಕರ ಆಜ್ಞೆ ಪಾಲಿಸುವುದಕ್ಕಾಗಿ ಪುರಾತತ್ವ ಸಂರಕ್ಷಿತಾ ಸ್ಮಾರಕ ಜಾಗವನ್ನು ರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಎಡವುತ್ತಿರುವ ಆರೋಪ ಕೇಳಿ ಬಂದಿದೆ. ಮಡಿಕೇರಿ ನಗರದ ಮಹದೇವಪೇಟೆಯಲ್ಲಿ ಕೊಡಗನ್ನು ಆಳ್ವಿಕೆ ಮಾಡಿದ ಲಿಂಗರಾಜ ಮತ್ತು ವೀರರಾಜ ಅರಸರ ಗದ್ದುಗೆಗಳಿವೆ. ಈ ಗದ್ದುಗೆಗೆ ಒಳಪಟ್ಟ 19.86 ಎಕರೆ ಜಾಗದಲ್ಲಿ ಬಹುತೇಕ ಒತ್ತುವರಿಯಾಗಿ ಕೇವಲ 3.5 ಎಕರೆ ಜಾಗವಷ್ಟೇ ಉಳಿದಿದೆ. ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡುವಂತೆ ಮಹದೇವಪ್ಪ ಎಂಬುವವರು 2001 ರಲ್ಲೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂದರ್ಭದಿಂದಲೂ ಅಧಿಕಾರಿಗಳು ಒತ್ತುವರಿಯಾಗಿರುವ ಎಲ್ಲಾ ಜಾಗವನ್ನೂ ಸರ್ವೇ ಮಾಡುವುದಕ್ಕೆ ಬದಲಾಗಿ ತ್ಯಾಗರಾಜ ಕಾಲೋನಿಯಲ್ಲಿರುವ ಮುಸ್ಲಿಂ ಸಮುದಾಯದ 27 ಕುಟುಂಬಗಳ ಮನೆಗಳನ್ನೇ ಟಾರ್ಗೆಟ್ ಮಾಡಿ ಸರ್ವೇ ಮಾಡುತ್ತಿದ್ದಾರೆ ಎನ್ನೋ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನಿಸಿ 2004 ರಲ್ಲಿ 27 ಜನರು ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಕೋರ್ಟ್ ಕೂಡ ಈ 27 ಕುಟುಂಬಗಳನ್ನು ಅಲ್ಲಿಂದ ತೆರವು ಮಾಡುವ ಬದಲು ಸಂರಕ್ಷಿತ ಸ್ಮಾರಕಕ್ಕೆ ತೊಂದರೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ಅಲ್ಲದೆ ಅವರಿಗೆ ಪರ್ಯಾಯ ಜಾಗವನ್ನು ಕೊಡುವುದು ಸೂಕ್ತವೆಂದು ನಿರ್ದೇಶನ ನೀಡಿದೆ.

ಬುಧವಾರವೂ ಗದ್ದುಗೆಯ ಜಾಗವನ್ನು ಸರ್ವೇ ಮಾಡಲು ಹೋಗಿದ್ದ ಅಧಿಕಾರಿಗಳು ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ಸರ್ವೇ ಮಾಡುವ ಬದಲಿಗೆ ಈ 27 ಕುಟುಂಬಗಳಿರುವ ಏರಿಯಾವನ್ನೇ ಮತ್ತೆ ಟಾರ್ಗೆಟ್ ಮಾಡಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಪ್ರತಿವಾದಿಗಳ ಪರ ವಕೀಲ ವಿದ್ಯಾಧರ ಗಂಭೀರವಾಗಿ ಆರೋಪಿಸಿದರು.

ಇನ್ನು, ಮಡಿಕೇರಿ ತಹಶೀಲ್ದಾರ್ ನೇತೃತ್ವದಲ್ಲಿ ತ್ಯಾಗರಾಜ ಕಾಲೋನಿಯಲ್ಲಿ ಸರ್ವೇ ಮಾಡಲು ಹೋಗಿದ್ದರು. ಆದರೆ ಜನರು ಮಾತ್ರ ಅಧಿಕಾರಿಗಳಿಗೆ ಸರ್ವೇ ಮಾಡಲು ಅವಕಾಶ ನೀಡಿಲ್ಲ. ಬದಲಿಗೆ ಗದ್ದುಗೆ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್, ನಗರಸಭೆಯಿಂದ ನಿರ್ಮಿಸಿರುವ ಶಾಲೆ ಇವೆಲ್ಲವೂ ಇದ್ದು, ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ಸರ್ವೆ ಮಾಡುವಂತೆ ಜನರು ಆಗ್ರಹಿಸಿದ್ದಾರೆ. ಹೀಗಾಗಿ ಅದೆಲ್ಲವನ್ನೂ ಪರಿಶೀಲನೆ ನಡೆಸಲಾಗುವುದು ಎಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ಹೇಳಿದ್ದಾರೆ.

ಇದನ್ನೂ ಓದಿ: ಪ್ಯಾರೀಸ್​​​​ ನಗರದ ಹಲವೆಡೆ ಕೇಳಿಸಿತು ಭಾರೀ ಸದ್ದು: ಜನತೆಯಲ್ಲಿ ಆತಂಕ

ಒಟ್ಟಿನಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಲು ಅಧಿಕಾರಿಗಳು ಕಳೆದ 16 ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದು, ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿರುವುದೇ ಸ್ಮಾರಕದ ಜಾಗವನ್ನು ರಕ್ಷಿಸುವಲ್ಲಿ ಎಡವಟ್ಟಾಗುತ್ತಿದೆ ಎನ್ನಲಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಒತ್ತುವರಿಯಾಗಿರುವ ಎಲ್ಲಾ ಜಾಗವನ್ನು ಸರ್ವೆ ಮಾಡಿ ಸ್ಮಾರಕದ ಜಾಗವನ್ನು ರಕ್ಷಿಸಬೇಕಿದೆ.
Published by: Ganesh Nachikethu
First published: September 30, 2020, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading