• Home
  • »
  • News
  • »
  • state
  • »
  • Mysuru Dasara 2022: ವಿಶ್ವ ವಿಖ್ಯಾತ ಜಂಜೂ ಸವಾರಿ ನೋಡಲು ಸಿಗಲಿದೆ ಗೋಲ್ಡ್​ ಪಾಸ್! ಒಂದು ಪಾಸಿನ ಬೆಲೆ ಎಷ್ಟು​?

Mysuru Dasara 2022: ವಿಶ್ವ ವಿಖ್ಯಾತ ಜಂಜೂ ಸವಾರಿ ನೋಡಲು ಸಿಗಲಿದೆ ಗೋಲ್ಡ್​ ಪಾಸ್! ಒಂದು ಪಾಸಿನ ಬೆಲೆ ಎಷ್ಟು​?

ದಸರಾ ನೋಡಲು ಗೋಲ್ಡ್​ ಪಾಸ್​

ದಸರಾ ನೋಡಲು ಗೋಲ್ಡ್​ ಪಾಸ್​

ಈ ಜನರು ಸರ್ಕಾರಿ ವೆಬ್​ಸೈಟ್​ ಮೂಲಕ ಗೋಲ್ಡ್​ ಪಾಸ್​ ಪಡೆಯಬಹುದಾಗಿದೆ. www.mysoredasara.gov.in ಮೂಲಕ ಪಾಸ್​ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದೆ.

  • Share this:

ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara 2022) ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಐತಿಹಾಸಿಕ ದಸರಾ ಹಾಗೂ ಜಂಜೂ ಸವಾರಿ (Jambo Savari) ನೋಡಲು ಕಾಯುತ್ತಿರುವ ಜನರಿಗಾಗಿ ಸರ್ಕಾರ ದಸರಾ ಗೋಲ್ಡ್ ಪಾಸ್ (Gold Pass) ಜಾರಿ ಮಾಡಿದೆ. ಕಳೆದ ವರ್ಷ ಕೆಲ ಪಾಸ್​ ವಿಚಾರವಾಗಿ ಗೊಂದಲ ಉಂಟಾದ ಹಿನ್ನೆಲೆ ಈ ಭಾರೀ ಗೋಲ್ಡ್ ಪಾಸ್ ರದ್ದು ಮಾಡಿರುವುದಾಗಿ ಸಚಿವರೇ (Minister) ಘೋಷಣೆ ಮಾಡಿದ್ರು. ಇದೀಗ ಜನರ ಒತ್ತಾಯಕ್ಕೆ ಮಣಿದು ಮತ್ತೆ ಗೋಲ್ಡ್ ಪಾಸ್​ ಜಾರಿ ಮಾಡಲಾಗಿದೆ. ಗೋಲ್ಡ್ ಪಾಸ್ ಪಡೆದವರಿಗೆ ದಸರಾ ಜಂಬೂ ಸವಾರಿ, ಪಂಜಿನ ಕವಾಯತು ಹಾಗೂ ಮೈಸೂರಿನ ಇತರೆ ಪ್ರೇಕ್ಷಣೀಯ ಸ್ಥಳಗಳ (Sightseeing Places) ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.


ಆನ್​ಲೈನ್​ನಲ್ಲಿ ಗೋಲ್ಡ್​ ಪಾಸ್​ ಮಾರಾಟ


ಗೋಲ್ಡ್​ ಪಾಸ್​ ರದ್ದು ಮಾಡಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ರು. ಜನಜಂಗುಳಿಯ ನಡುವೆ ಜಂಜೂ ಸವಾರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಗೋಲ್ಡ್​ ಪಾಸ್​ ಜಾರಿ ಮಾಡುವಂತೆ ಒತ್ತಡ ಹೆಚ್ಚಾಗಿತ್ತು. ವಿಐಪಿ ಹಾಗೂ ವಿವಿಐಪಿಗಳೇ ಹೆಚ್ಚಾಗಿ ಈ ಪಾಸ್​ಗಳನ್ನು ಕೊಂಡುಕೊಳ್ತಾರೆ. ಈ ಬಾರಿ ಪಾಸ್​ನನ್ನು ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಒಬ್ಬರು ಒಂದು ಬಾರಿಗೆ ಎರಡು ಪಾಸ್ ಪಡೆದುಕೊಳ್ಳಬಹುದಾಗಿದೆ.


ಈ ವೆಬ್​ಸೈಟ್​ ಮೂಲಕ ಪಾಸ್​ ಬುಕ್​ ಮಾಡಿ


ಈ ಜನರು ಸರ್ಕಾರಿ ವೆಬ್​ಸೈಟ್​ ಮೂಲಕ ಗೋಲ್ಡ್​ ಪಾಸ್​ ಪಡೆಯಬಹುದಾಗಿದೆ. www.mysoredasara.gov.in ಮೂಲಕ ಪಾಸ್​ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗಿದೆ.


ಒಂದು ಗೋಲ್ಡ್​ ಪಾಸಿನ ಬೆಲೆ ಎಷ್ಟು?


ಗೋಲ್ಡ್​ ಪಾಸ್​ ಹೆಸರೇ ಹೇಳುವಂತೆ ಸಖತ್​ ಕಾಸ್ಟ್ಲಿ ಆಗಿದೆ. ಪ್ರತಿ ಪಾಸ್ ಗೆ 5999 ರೂಪಾಯಿ ನಿಗದಿ ಮಾಡಲಾಗಿದೆ. ಬುಕಿಂಗ್ ಮಾಡಿದ ಪಾಸ್ ಅನ್ನು ಸೆ.29 ರಂದು ಕೆ.ಎಸ್.ಡಿ‌.ಸಿಯಲ್ಲಿ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ. ಗೋಲ್ಡ್ ಪಾಸ್ ಪಡೆದವರಿಗೆ ದಸರಾ ಜಂಬೂ ಸವಾರಿ, ಪಂಜಿನ ಕವಾಯತು ಹಾಗೂ ಮೈಸೂರಿನ ಇತರೆ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.


ಇದನ್ನೂ ಓದಿ: Mysuru Dasara 2022: ಮೈಸೂರು ದಸರಾ ಎಷ್ಟೊಂದು ಸುಂದರ, ನೀವೂ ಹೋದ್ರೆ ಇವುಗಳನ್ನು ನೋಡಲು ಮರೆಯಬೇಡಿ


ಗ್ರಾಮೀಣ ದಸರಾಗೆ ಚಾಲನೆ:


ಇಂದು ಮೈಸೂರಿನಲ್ಲಿ ಬೆಳಗ್ಗೆ 9.00 ಗಂಟೆಗೆ ದಾರಿಪುರ ಗ್ರಾಮದ ದೇವಸ್ಥಾನದಲ್ಲಿ ಗ್ರಾಮೀಣ ದಸರಾವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್‌‌ ಉದ್ಘಾಟನೆ ಮಾಡಿದರು. ಸುಮಾರು 2 ಕಿ.ಮೀ. ಅದ್ಧೂರಿ ಮೆರವಣಿಗೆ ಜರುಗಲಿದೆ. ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸ್ಥಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಲಿವೆ. ಸಂಸದ ಪ್ರತಾಪ್‌ ಸಿಂಹ, ಶಾಸಕ ಜಿ.ಟಿ ದೇವೇಗೌಡ ಸೇರಿ ಹಲವರು ಭಾಗಿಯಾಗಲಿದ್ದಾರೆ.


ಯೋಗ ನಗರಿಯಲ್ಲಿ ಯೋಗ ದಸರಾ ಆಚರಣೆ


ಮೈಸೂರು ದಸರಾ ಉತ್ಸವ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅರಮನೆಯ ಮುಂಭಾಗದ ಒಳ ಆವರಣದಲ್ಲಿ ಯೋಗ ದಸರಾ ನಡೆಯಲಿದ್ದು, ಸುತ್ತೂರು ಶ್ರೀಗಳಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಶಂಕನಾದದ ಮೂಲಕ ಯೋಗಾಸನ ಶುರು ಮಾಡಿದ್ದು, 75 ಕ್ಲೀಷ್ಟಕರ ಯೋಗಾಸನಗಳನ್ನ ಯೋಗಸಕ್ತರು ಮಾಡಿದರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಆಸನಗಳ ಯೋಗ ಸಂಭ್ರಮ ಜರುಗಿತು.


ಇದನ್ನೂ ಓದಿ:  Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ 


ಸುಮಾರು 300 ಕ್ಕೂ ಹೆಚ್ಚು ಮಂದಿ ಯೋಗ ದಸರಾದಲ್ಲಿ‌ ಭಾಗಿ ಆಗಿ ಯೋಗಾಸನಗಳನ್ನ ಮಾಡಲಾಗ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರು ಯೋಗ ದಸರಾದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಕೃಷ್ಣ ರಾಜ ಕ್ಷೇತ್ರದ ಶಾಸಕ ರಾಮ್ ದಾಸ್ ಭಾಗಿಯಾಗಿದ್ದರು.

Published by:ಪಾವನ ಎಚ್ ಎಸ್
First published: