ವಿಶ್ವವಿಖ್ಯಾತ ಪ್ರಸಿದ್ಧ ಹಂಪಿಯಲ್ಲಿ ವಿವಾದ: ಜಾರಿಯಾಗುತ್ತಾ ವಸ್ತ್ರಸಂಹಿತೆ


Updated:August 30, 2018, 8:56 AM IST
ವಿಶ್ವವಿಖ್ಯಾತ ಪ್ರಸಿದ್ಧ ಹಂಪಿಯಲ್ಲಿ ವಿವಾದ: ಜಾರಿಯಾಗುತ್ತಾ ವಸ್ತ್ರಸಂಹಿತೆ

Updated: August 30, 2018, 8:56 AM IST
ಶರಣು ಹಂಪಿ,  ನ್ಯೂಸ್​ 18 ಕನ್ನಡ

ಬಳ್ಳಾರಿ(ಆ.30): ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರ್ತಾರೆ. ಅದರಲ್ಲೂ ವಿದೇಶಿಗರೂ ಇರ್ತಾರೆ. ಆದರೆ ವಿದೇಶಿಗರ ತುಂಡುಡುಗೆ ಇದೀಗ ವಿವಾದಕ್ಕೆ ಕಾರಣವಾಗಿದೆ. ವಸ್ತ್ರಸಂಹಿತೆ ಹೇರುವ ಸಾಧ್ಯತೆಯೂ ಇದೆ.

ದಕ್ಷಿಣ ಕಾಶಿಯೆಂದೇ ಹೆಸರುವಾಸಿಯಾದ ಹಂಪಿಯಲ್ಲಿ ವಿದೇಶಿಗರಿಂದ ಹಿಂದೂ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂಬ ಆರೋಪ ನಿನ್ನೆ ಮೊನ್ನೆಯದಲ್ಲ. ಹಂಪಿ ನೋಡಲು ಬರುವ ವಿದೇಶಿಗರು ವಿರುಪಾಕ್ಷ ದೇವಸ್ಥಾನಕ್ಕೇ ತುಂಡುಗುಗೆಯಲ್ಲಿ ಬರ್ತಾರೆ. ಕೆಲವರು ಚಪಲ್ಲಿ ಹಾಕೊಂಡೇ ಬರ್ತಾರೆ. ಇದರಿಂದ ಇಲ್ಲಿನ ಸಂಸ್ಕೃತಿಯಂತೆ ನಡೆದುಕೊಳ್ಳೋರಿಗೆ ಮುಜುಗರ ಆಗುತ್ತೆ. ದೇವಸ್ಥಾನಕ್ಕೆ ಮಡಿಮೈಲಿಗೆಯಲ್ಲಿ ಬರುವ ಭಕ್ತರಿಗೆ ಇದು ಸಾಕಷ್ಟು ಬೇಸರ ತರಿಸಿದೆ.

ಹೀಗಾಗಿ ತಿರುಪತಿ, ಧರ್ಮಸ್ಥಳದಲ್ಲಿ ಭಕ್ತರ ದರುಶನ ವ್ಯವಸ್ಥೆಯಂತೆ ಇಲ್ಲಿಯೂ ವಸ್ತ್ರಸಂಹಿತೆ ಅಗತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿ ಎಸ್ ಉಗ್ರಪ್ಪ ಹೇಳಿದ್ದಾರೆ.

ಈ ಹಿಂದೆ ಗಂಡಸರಿಗೆ ಲುಂಗಿ, ಶಲ್ಯ ಹಾಗೂ ಮಹಿಳೆಯರಿಗೆ ಸೀರೆ ಧರಿಸಿ ದೇವಸ್ಥಾನದ ಒಳಗೆ ಬರುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ವಸ್ತ್ರಸಂಹಿತೆ ಪದ್ಧತಿ ಕೆಲ ತಿಂಗಳೂ ಇರಲಿಲ್ಲ. ಈ ಕುರಿತು ಮರುಪರಿಶೀಲಿಸಿ ವಸ್ತ್ರಸಂಹಿತೆ ಜಾರಿಗೆ ತನ್ನಿ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಒಟ್ಟಿನಲ್ಲಿ ಹಂಪಿಯಲ್ಲೂ ವಸ್ತ್ರಸಂಹಿತೆ ಜಾರಿ ಬಗ್ಗೆ ವಿಚಯ ಚರ್ಚೆಯಲ್ಲಿದೆ. ನೋಡೋಣ ಏನಾಗುತ್ತೆ ಎಂದು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...