Hair Export: ವಿದೇಶಕ್ಕೆ ಕೂದಲು ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ: ಕೊಪ್ಪಳದಲ್ಲಿ ಮತ್ತೆ ಗರಿಗೆದರಿದ ಕೂದಲು ಉದ್ಯಮ

Human hair: ಚೀನಾ ಕಳ್ಳಾಟ ನಡೆಸಿ ಭಾರತದಿಂದ ತರಿಸುವ ಕೂದಲಿಗೆ ಕಡಿಮೆ ದರ ನಿಗದಿಪಡಿಸಿ ಕಚ್ಚಾ ಕೂದಲನ್ನು ತರಿಸಿಕೊಳ್ಳುತ್ತಿತ್ತು. ಇಲ್ಲಿ ದೇಶದ ಆರ್ಥಿಕತೆ ಹಾಗೂ ವಿದೇಶ ವಿನಿಮಯದಲ್ಲಿ ತಪ್ಪು ಲೆಕ್ಕ ತೋರಿಸುತ್ತಿದ್ದರು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಚ್ಚಾ ಕೂದಲು ರಫ್ತನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಇದರಿಂದ ಭಾಗ್ಯನಗರದಲ್ಲಿ ಮತ್ತೆ ಕೂದಲು ಉದ್ಯಮ ಗರಿಗೆದರಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೋವಿಡ್‌(Covid) ಸೋಂಕಿನಿಂದ ಕೂದಲು(Hair) ಉದ್ಯಮದ(Business) ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸಾವಿರಾರು ಕುಟುಂಬಗಳು(Family) ಬೀದಿಗೆ ಬಂದಿವೆ. ಅದ್ರಲ್ಲೂ ಕೊಪ್ಪಳದ(Koppala) ಭಾಗ್ಯನಗರದಲ್ಲಿ(Bhagyanagara) ನಡೆಯುತ್ತಿದ್ದ ಕೂದಲು ಉದ್ಯಮ ದೇಶ, ವಿದೇಶಕ್ಕೂ ರಫ್ತು (Export)ಆಗುತ್ತಿತ್ತು . ಇಲ್ಲಿನ ಶೇ.60 ರಷ್ಟು ಕುಟುಂಬಗಳು ಕೂದಲು ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿವೆ. ಬೆಳಗ್ಗೆ ಎದ್ದ ತಕ್ಷಣವೇ ಕೂದಲು ತೆಗೆದುಕೊಂಡು ಹೋಗಿ ಹಳ್ಳದಲ್ಲಿ ಸ್ವಚ್ಛಗೊಳಿಸಿ, ಹಿಂಜುವ ಕಾಯಕದಲ್ಲಿ ತೊಡಗುತ್ತಾರೆ. ಸಂಸ್ಕರಿಸಿದ ಕೂದಲು ಸಂಗ್ರಹಿಸಿ ವಿದೇಶಗಳಿಗೆ ಕಳುಹಿಸುತ್ತಾರೆ. ಆದರೆ, ಕಳೆದ ವರ್ಷದಿಂದ ಕೋವಿಡ್‌ ಪರಿಣಾಮ ಕೂದಲು ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ವಿದೇಶಕ್ಕೆ ಮಾನವ ಕಚ್ಚಾ ಕೂದಲನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ. ಹೀಗಾಗಿ ಕೂದಲು ಉದ್ಯಮದಿಂದಲೇ ಗುರುತಿಸಿಕೊಂಡಿದ್ದ ಕೊಪ್ಪಳದ ಭಾಗ್ಯನಗರದಲ್ಲಿ ಮತ್ತೆ ಕೂದಲು ಉದ್ಯಮ ಚಿಗುರೊಡೆದು ಸಾವಿರಾರು ಜನರಿಗೆ ಉದ್ಯೋಗ ಸಿಗುವ ಆಸೆ ಚಿಗುರೊಡೆದಿದೆ.

    ಭಾಗ್ಯನಗರದಲ್ಲಿ ಮತ್ತೆ ಗರಿಗೆದರಿದ ಕೂದಲು ಉದ್ಯಮ..

    ಭಾರತದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ಕೂದಲು ಉದ್ಯಮದ ಪ್ರಮುಖ ಕೇಂದ್ರಗಳಾಗಿವೆ. ಭಾರತದ ಪ್ರಮುಖ ಸ್ಪರ್ಧಿಗಳು ಚೀನಾ, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಮ್ಯಾನ್ಮಾರ್. ಕೂದಲನ್ನು ಮುಖ್ಯವಾಗಿ ದೇವಾಲಯಗಳು ಮತ್ತು ಮನೆಗಳಿಂದ ಸಂಗ್ರಹಿಸಲಾಗುತ್ತದೆ. ಇಲ್ಲಿಂದ ಜಾಗತಿಕ ಸೌಂದರ್ಯವರ್ಧಕ ಮಾರುಕಟ್ಟೆಗೆ ಪೂರೈಸಲಾಗುತ್ತದೆ..

    ಇದನ್ನೂ ಓದಿ: Dakshina Kannada ಜಿಲ್ಲೆಗೆ ಸುರಂಗ ನೀರಾವರಿ ಪರಿಚಯಿಸಿದ ಕುಟುಂಬ ಯಾವುದು ಗೊತ್ತೆ?

    ಆದ್ರೆ ದೇಶದಿಂದ ಕೂದಲು ರಫ್ತು ಮಾಡುತ್ತಿದ್ದರಿಂದ, ಮಾನವನ ಕೂದಲುಗಳನ್ನು ಸಂಸ್ಕರಿಸಿ ವಿಗ್ ತಯಾರಿಸಿ ಮಾರಾಟ ಮಾಡುವ ಉದ್ಯಮದ ಮೇಲೆ ಕಚ್ಚಾ ಕೂದಲು ರಫ್ತಿನಿಂದಾಗಿ ಕೂದಲು ಉದ್ಯಮದ ಮೇಲೆ ದೊಡ್ಡ ಹೊಡೆತ ನೀಡಿತ್ತು. ಇಲ್ಲಿ ಚೀನಾ ಕಳ್ಳಾಟ ನಡೆಸಿ ಭಾರತದಿಂದ ತರಿಸುವ ಕೂದಲಿಗೆ ಕಡಿಮೆ ದರ ನಿಗದಿಪಡಿಸಿ ಕಚ್ಚಾ ಕೂದಲನ್ನು ತರಿಸಿಕೊಳ್ಳುತ್ತಿತ್ತು. ಇಲ್ಲಿ ದೇಶದ ಆರ್ಥಿಕತೆ ಹಾಗೂ ವಿದೇಶ ವಿನಿಮಯದಲ್ಲಿ ತಪ್ಪು ಲೆಕ್ಕ ತೋರಿಸುತ್ತಿದ್ದರು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಚ್ಚಾ ಕೂದಲು ರಫ್ತನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಇದರಿಂದ ಭಾಗ್ಯನಗರದಲ್ಲಿ ಮತ್ತೆ ಕೂದಲು ಉದ್ಯಮ ಗರಿಗೆದರಿದೆ.

    ಭಾಗ್ಯ ನಗರದಲ್ಲಿರುವ ಕೂದಲು ಸಂಸ್ಕರಣೆ ಘಟಕ..

    ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ತಾಲೂಕಿನ ಭಾಗ್ಯ ನಗರದಲ್ಲಿ ಖಾಸಗಿ ಕೂದಲು ಸಂಸ್ಕರಣೆ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಬಿಟ್ಟರೆ ಬೇರೆ ಯಾವ ಕಡೆಯೂ ಸಂಸ್ಕರಣ ಘಟಕಗಳಿಲ್ಲ, ರಾಜ್ಯಾದ್ಯಂತ ಸಂಗ್ರಹಿಸಿದ ಕೂದಲನ್ನು ಖರೀದಿದಾರರಿಂದ ಕೊಪ್ಪಳಕ್ಕೆ ಸರಬರಾಜು ಮಾಡಲಾಗುತ್ತಿದೆ. ನಂತರ ಕೊಪ್ಪಳದಲ್ಲಿ ಸಂಗ್ರಹಿಸಿದ ಕೂದಲನ್ನು ಸಂಸ್ಕರಿಸಿ ದೇಶ- ವಿದೇಶಗಳಿಗೆ ರಫ್ತು ಮಾಡುವ ಪ್ರಕ್ರಿಯೆ ನಡೆದಿದೆ.

    ಪ್ರತಿವರ್ಷ 100 ಕೋಟಿಗೂ ಉದ್ಯಮ ವಹಿವಾಟು

    ಇನ್ನು ಕೊಪ್ಪಳದ ಭಾಗ್ಯನಗರದಲ್ಲಿ ವರ್ಷಕ್ಕೆ ಕೂದಲು ಉದ್ಯಮದ ವಹಿವಾಟು 50ರಿಂದ 100 ಕೋಟಿ ನಡೆಯುತ್ತಿದೆ. ಒಟ್ಟು 20 ಸಾವಿರ ಜನರು ಈ ಉದ್ಯಮ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿ ಕೆಜಿ ಕಚ್ಚಾ ಕೂದಲು 6000ರಿಂದ 8000 ವರೆಗೆ ಮಾರಾಟವಾಗುತ್ತದೆ. ಈ ಮೊದಲು ಭಾಗ್ಯನಗರ ವ್ಯಾಪ್ತಿಯಲ್ಲಿ 300 ಸಂಸ್ಕರಣಾ ಘಟಕಗಳಿದ್ದವು. ಇದೀಗ 10ರಿಂದ 12ಕ್ಕೆ ಆ ಸಂಖ್ಯೆ ಇಳಿದಿದೆ.

    ಇದನ್ನೂ ಓದಿ: Bangalore ಸುತ್ತಮುತ್ತ ಈ ಸ್ಥಳಗಳ ಅಭಿವೃದ್ಧಿಗೆ ಮುಂದಾದ ಸರ್ಕಾರ!

    ಕೂದಲು ಉದ್ಯಮದಲ್ಲಿ ಭಾರತದ ಸಿಂಹಪಾಲು

    ವಿಶ್ವದ ಶೇ. 95ರಷ್ಟು ಮಾನವ ಕೂದಲು ಬೇಡಿಕೆಯನ್ನು ಭಾರತವೇ ಪೂರೈಕೆ ಮಾಡುತ್ತಿದೆ. ಆದರೆ, ಇದನ್ನು ಆಮದು ಮಾಡಿಕೊಳ್ಳುತ್ತಿದ್ದ ಚೀನಾ ಸಿದ್ಧಪಡಿಸಿದ ಕೂದಲನ್ನು ವಿಶ್ವಕ್ಕೆ ಪೂರೈಕೆ ಮಾಡುತ್ತಿತ್ತು. ಈಗ ಇದಕ್ಕೆ ಕಡಿವಾಣ ಬೀಳಲಿದ್ದು, ಇಡೀ ವಿಶ್ವ ಮಾನವ ಕೂದಲಿಗಾಗಿ ಭಾರತದ ಮಾರುಕಟ್ಟೆಯನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದ ವಿದೇಶಿ ವಿನಿಮಯಕ್ಕೆ ಬಹುದೊಡ್ಡ ಕೊಡುಗೆ ದೊರೆಯಲಿದೆ.
    Published by:ranjumbkgowda1 ranjumbkgowda1
    First published: