ಅಮೆರಿಕಾ ಅಧ್ಯಕ್ಷರ ಆಗಮನಕ್ಕೆ ಅನಗತ್ಯ ಆಡಂಬರ; ಟ್ರಂಪ್​​​​​ ಭೇಟಿಯಿಂದ ಪ್ರಯೋಜನವಿಲ್ಲ: ಸಿದ್ಧರಾಮಯ್ಯ

ಸಚಿವ ಸ್ಥಾನ ಸಿಗಲಿಲ್ಲವೆಂದು ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಅದು ಯಾವಾಗ ಸ್ಫೋಟಗೊಳ್ಳುತ್ತೋ ಗೊತ್ತಿಲ್ಲ. ಕೆಲ ಶಾಸಕರು ಬಿಜೆಪಿ ತೊರೆದು ಬೇರೆ ಪಕ್ಷ ಸೇರಲು ತುದಿಗಾಲಮೇಲೆ ನಿಂತಿದ್ದಾರೆ ಎಂದರು

 ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಕಲಬುರ್ಗಿ(ಫೆ. 24): ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅಗತ್ಯಕ್ಕಿಂತ ಹೆಚ್ಚು ಆಡಂಬರ ಮಾಡುತ್ತಿದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಭಾರತಕ್ಕೆ ಟ್ರಂಪ್ ಆಗಮನದಿಂದ ಏನೂ ಆಗಲ್ಲ. ಒಂದು ದೇಶದ ಅಧ್ಯಕ್ಷ ಬರುತ್ತಿದ್ದಾರೆ ಎಂದರೆ ಅವರನ್ನು ಒಳ್ಳೆಯ ಸ್ವಾಗತ ಮಾಡುವುದು ನಮ್ಮ ಕರ್ತವ್ಯ. ಶಿಷ್ಟಾಚಾರದ ಪ್ರಕಾರ ಸ್ವಾಗತ ಮಾಡಬೇಕಾಗುತ್ತದೆ. ಆದರೆ, ಇದು ಅಗತ್ಯಕ್ಕಿಂತ ಆಡಂಬರ ಹೆಚ್ಚಾಗಿದೆ. ಈ ವೇಳೆ ಯಾವುದೇ ಆಮದು ಒಪ್ಪಂದಕ್ಕೆ ಮುಂದಾಗಬಾರದು ಎಂದು ಎಚ್ಚರಿಸಿದ್ಧಾರೆ.

ಟ್ರಂಪ್ ಭೇಟಿಯ ಹಿನ್ನೆಲೆಯಲ್ಲಿ ಅಹ್ಮದಾಬಾದ್​ನಲ್ಲಿ ಸ್ಲಮ್​ಗಳನ್ನು ಮರೆಮಾಚಲು ಸುಂದರವಾದ ಗೋಡೆ ನಿರ್ಮಿಸಿದ ಸರ್ಕಾರದ ಕ್ರಮದ ಬಗ್ಗೆ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ವ್ಯಂಗ್ಯ ಮಾಡಿದರು.

"ನರೇಂದ್ರ ಮೋದಿಯಿಂದ ಡೊನಾಲ್ಡ್ ಟ್ರಂಪ್ ಸ್ಫೂರ್ತಿ ಪಡೆಯಬೇಕಾದ ಕಾಲ ಬಂದಿದೆ. ಬಡ ಜೀವನವನ್ನು ಮರೆಮಾಚುವ ಅಲಂಕಾರಿಕ ಗೋಡೆಗಳನ್ನು ಕಟ್ಟುವ ಪ್ರೇರಣೆ ಪಡೆಯಬೇಕಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಲೇವಡಿ ಮಾಡಿದರು.

ರಾಹುಲ್ ಗಾಂಧಿಯೇ ಮತ್ತೆ ಎಐಸಿಸಿ ಅಧ್ಯಕ್ಷರಾಗಬೇಕೆಂಬುದು ನನ್ನ ಆಸೆ. ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಶೀಘ್ರದಲ್ಲಿ ಆಗುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ತಾನು ಹೊಸ ಪಕ್ಷ ಪ್ರಾರಂಭಿಸುತ್ತೇನೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​​ ಕುಮಾರ್​ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಕಟೀಲ್​ಗೆ ರಾಜಕೀಯ ಅನುಭವ ಕಡಿಮೆ. ಅವರ ಮಾತಿಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ತಿಳಿಸಿದರು.

ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ :

15ನೇ ಹಣಕಾಸಿನ ಆಯೋಗದಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. 14ನೇ ಹಣಕಾಸಿನ ಆಯೋಗದ ಪ್ರಕಾರವೇ ಈ ವರ್ಷ 9 ಸಾವಿರ ಕೋಟಿ ಕಡಿಮೆಯಾಗಿದೆ. ಮುಂದಿನ ವರ್ಷ 11,258 ಕೋಟಿ ಕಡಿಮೆಯಾಗಲಿದೆ. 15ನೇ ಹಣಕಾಸು ಆಯೋಗದ ಪ್ರಕಾರ 5 ವರ್ಷದಲ್ಲಿ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ರೂಪಾಯಿ ಅನುದಾನ ನಷ್ಟವಾಗಲಿದೆ. ತೆರಿಗೆ ಹಣ ಹಂಚಿಕೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ಇಷ್ಟೆಲ್ಲ ಅನ್ಯಾಯವಾದರೂ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರು, 25 ಜನ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರಾದರೂ ಧ್ವನಿ ಎತ್ತುತ್ತಿದ್ದಾರಾ? ನಮಗೆ ಪ್ರವಾಹ ಬಂದಾಗಲು ಹೆಚ್ಚಿನ ಪರಿಹಾರ ನೀಡಲಿಲ್ಲ. ಸಿಎಂ ಯಡಿಯೂರಪ್ಪ ನಿಯೋಗ ಕರೆದುಕೊಂಡು ಹೋಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಸಿಎಂ  ಯಡಿಯೂರಪ್ಪ ಅವರು ಹೆದರುತ್ತಿರುವುದು ಇಷ್ಟೆಲ್ಲಕ್ಕೂ ಕಾರಣ. ಹೀಗಾಗಿ ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಇವರಿಂದ ಏನೂ ಮಾಡಲು ಆಗೋದಿಲ್ಲ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಅಸಮಾಧಾನ ಯಾವಾಗ ಸ್ಫೋಟಗೊಳ್ಳುತ್ತೋ ಗೊತ್ತಿಲ್ಲ

ಸಚಿವ ಸ್ಥಾನ ಸಿಗಲಿಲ್ಲವೆಂದು ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಅದು ಯಾವಾಗ ಸ್ಫೋಟಗೊಳ್ಳುತ್ತೋ ಗೊತ್ತಿಲ್ಲ. ಕೆಲ ಶಾಸಕರು ಬಿಜೆಪಿ ತೊರೆದು ಬೇರೆ ಪಕ್ಷ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ವಿಪಕ್ಷ ನಾಯಕರೂ ಆದ ಅವರು ಹೇಳಿದರು.

ಇದನ್ನೂ ಓದಿ : Namaste Trump : ಟ್ರಂಪ್​ ಔತಣಕೂಟಕ್ಕೆ ಬಿಎಸ್​ವೈಗೂ ಆಹ್ವಾನ; ಬಜೆಟ್​ ಹಿನ್ನೆಲೆ ಸಿಎಂ ದೆಹಲಿ ಪ್ರವಾಸ ಅನುಮಾನ

ಬಿಜೆಪಿಯ 32 ಶಾಸಕರು ಕಾಂಗ್ರೆಸ್​ಗೆ ಬರುತ್ತಾರೆ ಎಂಬ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, 32 ಜನ ಬರುತ್ತಾರೆ ಎನ್ನುವುದು ಅವರಿಗೆ ಗೊತ್ತು. ಇಬ್ರಾಹಿಂ ಹೇಳಿಕೆ ಸತ್ಯನೂ ಆಗಬಹುದು ಅಥವಾ ಆಗದೇ ಇರಬಹುದು. ಆದರೆ ಕೆಲ ಶಾಸಕರಂತೂ ಪಕ್ಷ ಬಿಡುವ ತಯಾರಿಯಲ್ಲಿರುವುದು ಮಾತ್ರ ಸತ್ಯ. ಇದರಿಂದ ಕಾಂಗ್ರೆಸ್ ಪಕ್ಷಕ್ಕೇನೂ ಲಾಭವಿಲ್ಲವಾದರೂ, ಬಿಜೆಪಿಗೆ ನಷ್ಟವಾಗುವುದು ಖಚಿತ ಎಂದರು.

 
First published: