• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Lokayukta Raid: ಲೋಕಾಯುಕ್ತ ದಾಳಿಯಾಗುತ್ತಿದ್ದಂತೆ ನಡುರಸ್ತೆಯಲ್ಲೇ ಉರುಳಾಡಿ ಅಧಿಕಾರಿಯ ಹೈಡ್ರಾಮಾ!

Lokayukta Raid: ಲೋಕಾಯುಕ್ತ ದಾಳಿಯಾಗುತ್ತಿದ್ದಂತೆ ನಡುರಸ್ತೆಯಲ್ಲೇ ಉರುಳಾಡಿ ಅಧಿಕಾರಿಯ ಹೈಡ್ರಾಮಾ!

ಲೋಕಾಯುಕ್ತ ಅಧಿಕಾರಿಗಳ ದಾಳಿ

ಲೋಕಾಯುಕ್ತ ಅಧಿಕಾರಿಗಳ ದಾಳಿ

ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಆತಂಕಕ್ಕೆ ಒಳಗಾದ ಅಧಿಕಾರಿ ತನಿಖೆ ಹೃದಯ ಖಾಯಿಲೆ ಇದೇ ಎಂದು ಉರುಳಾಡಿ ಹೈಡ್ರಾಮಾ ಮಾಡಿ ಸೀನ್ ಕ್ರಿಯೇಟ್​ ಮಾಡಿದ್ದರು.

 • Share this:

ಕೋಲಾರ: ಕರ್ನಾಟಕ ರಾಜ್ಯ ವಿಧಾನಸಭಾ (Karnataka Elections 2023) ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜ್ಯದ ಹಲವು ಕಡೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ (Executive Officer) ವೆಂಕಟೇಶಪ್ಪ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಲೋಕಾಯುಕ್ತ ದಾಳಿಗೆ ವಿರೋಧ ವ್ಯಕ್ತಪಡಿಸಿದ ಇ.ಓ ಅಧಿಕಾರಿಗಳ ಎದುರೇ ಹೈಡ್ರಾಮಾ (High drama) ನಡೆಸಿದ್ದಾರೆ. ನಡು ರಸ್ತೆಯಲ್ಲೇ (Road) ಉರುಳಾಡಿ ಸುಮಾರು ಅರ್ಧ ಗಂಟೆಗಳ ಕಾಲ ಹೈಡ್ರಾಮಾ ಮಾಡಿದ್ದರು. ಆದರೆ ಇದ್ಯಾವುದಕ್ಕೂ ಜಗ್ಗದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.


ಅಧಿಕಾರಿಯ ಹೈಡ್ರಾಮಾಗೆ ಬೇಸ್ತು ಬಿದ್ದ ಲೋಕಾಯುಕ್ತ ಅಧಿಕಾರಿಗಳು 


ಲೋಕಾಯಕ್ತ ಅಧಿಕಾರಿಗಳು ವೆಂಕಟೇಶಪ್ಪ ಅವರು ಬಂಗಾರಪೇಟೆಯ ವಿವೇಕಾನಂದ ನಗರದ ಮನೆ ಎದುರು ಹೈಡ್ರಾಮಾ ನಡೆದಿದೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಇ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: Lokayukta Raid: ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಲಕ್ಷ ಲಕ್ಷ ಹಣ, ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆ


ಅಧಿಕಾರಿಗಳು ದಾಖಲೆಗಳ ಪರಿಶೀಲನೆ ವೇಳೆ ಮನೆ ಎದುರು ಉರುಳಾಡಿದ ಅಧಿಕಾರಿ ದಾಳಿಗೆ ಅಡ್ಡಿಪಡಿಸಲು ಯತ್ನಿಸಿದ್ದು, ಭ್ರಷ್ಟ ಅಧಿಕಾರಿಯ ಹೈಡ್ರಾಮಾಗೆ ಲೋಕಾಯುಕ್ತ ಅಧಿಕಾರಿಗಳು ಕೆಲ ಸಮಯ ಬೇಸತ್ತಿದ್ದರು. ಆ ಬಳಿಕ ಅವರನ್ನು ಮನೆಯವರು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು.
ಇನ್ನು, ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಆತಂಕಕ್ಕೆ ಒಳಗಾದ ಅಧಿಕಾರಿ ತನಿಖೆ ಹೃದಯ ಖಾಯಿಲೆ ಇದೇ ಎಂದು ಉರುಳಾಡಿ ಹೈಡ್ರಾಮಾ ಮಾಡಿ ಸೀನ್ ಕ್ರಿಯೇಟ್​ ಮಾಡಿದ್ದರು. ವೆಂಕಟೇಶಪ್ಪ ಹೈಡ್ರಾಮಾಗೆ ಮನೆಯವರು ಕೆಲ ಸಮಯ ಸಾಥ್ ನೀಡಿದ್ದರು. ವೆಂಕಟೇಶಪ್ಪನ ಡ್ರಾಮಾ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.
ಬಿಬಿಎಂಪಿ ಅಧಿಕಾರಿ ವಿರುದ್ಧವೂ ಲೋಕಾಯುಕ್ತ ದಾಳಿ

top videos


  ಇನ್ನು, ಬೆಂಗಳೂರಿನ ಯಲಹಂಕದಲ್ಲಿ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಅವರ ಮನೆ ಮೇಲೆ ಕೂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇರೆಗೆ ಲೋಕಾಯುಕ್ತ ದಾಳಿ ನಡೆಸಿದ್ದು, ಮನೆಯಲ್ಲಿ ₹ 3.65 ಕೋಟಿ ಮೌಲ್ಯದ ಮಲ್ಲೇಶ್ವರ ನಿವೇಶನ, ₹ 1 ಕೋಟಿ ಮೌಲ್ಯದ ಚಿನ್ನ ಅಥವಾ ಆಭರಣಗಳು (ಚಿನ್ನ ಮತ್ತು ವಜ್ರ), ₹ 1, 40,00,000/ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

  First published: