• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Property Dispute: ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ್ದ ಮೊಮ್ಮಗನಿಗೆ ತಕ್ಕ ಶಾಸ್ತಿ; 80ರ ವೃದ್ಧೆಗೆ ಮತ್ತೆ ಸಿಕ್ತು ಆಸ್ತಿ!

Property Dispute: ಆಸ್ತಿಗಾಗಿ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ್ದ ಮೊಮ್ಮಗನಿಗೆ ತಕ್ಕ ಶಾಸ್ತಿ; 80ರ ವೃದ್ಧೆಗೆ ಮತ್ತೆ ಸಿಕ್ತು ಆಸ್ತಿ!

ವೃದ್ಧೆಗೆ ಮನೆ ವಾಪಸ್​ ಕೊಡಿಸಿದ ಅಧಿಕಾರಿ

ವೃದ್ಧೆಗೆ ಮನೆ ವಾಪಸ್​ ಕೊಡಿಸಿದ ಅಧಿಕಾರಿ

ತಾಯಿಯೊಂದಿಗೆ ಆಶ್ರಯ ಪಡೆದುಕೊಳ್ಳಲು ಬಂದಿದ್ದ ಮೊಮ್ಮಗ ಕೊನೆಗೆ 80ರ ವೃದ್ಧೆಯನ್ನೇ ಮನೆಯಿಂದ ಹೊರ ಹಾಕಿದ್ದ. ಮನೆಯನ್ನು ಮಾರಾಟ ಮಾಡಿ ಹಣ ಉಡಾಯಿಸಲು ಸಂಚು ರೂಪಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

  • News18 Kannada
  • 4-MIN READ
  • Last Updated :
  • Tumkur, India
  • Share this:

ತುಮಕೂರು: ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕೇವಲ ಆಸ್ತಿ (Property) ಸಿಗುವವರೆಗೂ ಮಾತ್ರ ಅಜ್ಜಿ ಇದ್ದರೆ ಸಾಕು ಎಂದುಕೊಂಡಿದ್ದ ಮೊಮ್ಮಗ ಆಸ್ತಿಗಾಗಿ ಅಸಹಾಯಕ ಅಜ್ಜಿಯನ್ನೇ (Grandmother) ಮೊಮ್ಮಗ ಹೊರದಬ್ಬಿದ್ದ. ಆದರೆ ಪಾಪಿ ಮೊಮ್ಮಗನಿಗೆ ಉಪವಿಭಾಗಾಧಿಕಾರಿ (Sub-Divisional Officer) ತಕ್ಕ ಶಾಸ್ತಿ ಮಾಡಿ ಮತ್ತೆ ಆಸ್ತಿಯನ್ನು ವೃದ್ಧೆಗೆ ವಾಪಸ್​ ಕೊಡಿಸಿದ್ದಾರೆ. ಆಸ್ತಿ ಕೊಡುವವರೆಗೂ ಅಜ್ಜಿಯನ್ನು ನೋಡಿಕೊಳ್ಳುವ ನಾಟಕವಾಡಿದ್ದ ಮೊಮ್ಮಗನನ್ನು (Grandson) ಮನೆಯಿಂದ ಹೊರ ಹಾಕಿರುವ ಅಧಿಕಾರಿಗಳು, ಸದ್ಯ ವೃದ್ಧೆ ಕಳೆದುಕೊಂಡ ಆಸ್ತಿಯನ್ನು ವಾಪಸ್ ಕೊಡಿಸಿದ್ದಾರೆ. ಆ ಮೂಲಕ ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಜೀವನ ಕಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.


ಏನಿದು ಪ್ರಕರಣ?


ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 3ನೇ ವಾರ್ಡ್​ನ ನಿವಾಸಿಯಾಗಿದ್ದ 80 ವರ್ಷದ ವೃದ್ದೆ ಕಾವಲಮ್ಮ ಅವರನ್ನು ಮೊಮ್ಮಗ ಮಾರುತಿ ಮನೆಯಿಂದ ದಬ್ಬಿ, ಮನೆಯನ್ನು ಆಕ್ರಮಿಸಿಕೊಂಡಿದ್ದ. ಕಳೆದ 8 ತಿಂಗಳ ಹಿಂದೆ ಘಟನೆ ನಡೆದಿತ್ತು. ವೃದ್ಧೆ ಕಾವಲಮ್ಮ ಅವರ ಮಗಳು ಲಕ್ಷ್ಮಮ್ಮ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದರು. ಅಮ್ಮ ಸಾವನ್ನಪ್ಪುತ್ತಿದ್ದಂತೆ ತನ್ನ ಆಸಲಿ ಮುಖ ತೋರಿಸಿದ್ದ ಮೊಮ್ಮಗ 80ರ ವೃದ್ಧೆ ಅಂತಲು ನೋಡದೆ ಮನೆಯಿಂದ ಹೊರ ಹಾಕಿದ್ದನಂತೆ. ಅಲ್ಲದೆ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದನಂತೆ.


ಮನೆಯಿಂದ ವೃದ್ಧೆಯನ್ನ ಹೊರ ಹಾಕಿದ ಮೊಮ್ಮಗ


ಇದನ್ನೂ ಓದಿ: Crime News: ಆಸ್ತಿಗಾಗಿ ಹೆತ್ತವ್ವನ ಕತ್ತು ಸೀಳಿ ಕೊಂದ ಸುಪುತ್ರ: ಅತ್ತೆ ಸಾಯಿಸಲು ಸೊಸೆಯ ಸಾಥ್!


ಅಂದಿನಿಂದಲೂ ಕಾವಲಮ್ಮ ಅವರಿಗೆ ಸಂಬಂಧಿಕರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರಂತೆ. ಮೊಮ್ಮಗನ ಕುತಂತ್ರ ತಿಳಿದ ಬಳಿಕ ಎಚ್ಚೆತ್ತುಕೊಂಡಿದ್ದ ವೃದ್ಧೆ ತನಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಿವಂತೆ ಸಂಬಂಧಿಗಳ ನೆರವು ಪಡೆದುಕೊಂಡು ಹಿರಿಯ ನಾಗರೀಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದಂತೆ.


ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿ ಎಸಿ ರಿಶಿ ಆನಂದ್ ಅವರು, ಪ್ರಕರಣದ ಬಗ್ಗೆ ಕೂಲಂಕುಶವಾಗಿ ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೆ ಬಳಿಕ ಆಸ್ತಿಯನ್ನು ಆಕ್ರಮಿಸಿಕೊಂಡಿದ್ದ ಆಸ್ತಿಯನ್ನು ವೃದ್ದೆಗೆ ಬಿಡಿಸಿಕೊಂಡುವಂತೆ ಆದೇಶ ನೀಡಿದ್ದರು. ಇದರಂತೆ ಇಂದು ತಹಶೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ವೃದ್ದೆ ಕಾವಲಮ್ಮ ಅವರು ಮನೆಯನ್ನು ಮತ್ತೆ ವಾಪಸ್ ಪಡೆದುಕೊಂಡಿದ್ದಾರೆ. ಈ ನಡುವೆ ವಂಚನೆ ಮಾಡಿ ವೃದ್ಧೆಯನ್ನು ಮನೆಯಿಂದ ಮೊಮ್ಮನಿಗೆ ತಕ್ಕ ಪಾಠ ಕಲಿಸಿ ಆದೇಶ ನೀಡಿದ್ದ ಎಸಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.


ವೃದ್ಧೆಗೆ ಮನೆ ವಾಪಸ್​ ಕೊಡಿಸಿದ ಅಧಿಕಾರಿಗಳು


ಈ ಕುರಿತು ಪ್ರತಿಕ್ರಿಯೆ ನೀಡಿರುವ  ಅಧಿಕಾರಿಗಳು, ಕೊರಟಗೆರೆ ಟೌನ್​ ಮೂರನೇ ವಾರ್ಡ್​ನಲ್ಲಿ ಎರಡು ಮನೆ ಕಟ್ಟಿ ಬಾಡಿಗೆ ಕೊಟ್ಟಿದ್ದರು. ಆದರೆ ಮಾರುತಿ ಎನ್ನುವವರು ಇವರನ್ನು ಮನೆಯಿಂದ ಹೊರಹಾಕಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ವಿತರಣೆ ನಡೆಸಿ, ಮನೆಯನ್ನು ವೃದ್ಧೆಯ ವಶಕ್ಕೆ ನೀಡುವಂತೆ ಆದೇಶ ಮಾಡಿದ್ದರು. ಇದರಂತೆ ನಾವು ಇಂದು ಅವರ ಮನೆಯ ಬಳಿ ಮನೆಯನ್ನು ಅವರ ಸ್ವಾಧೀನಕ್ಕೆ ಕೊಟ್ಟಿದ್ದೇವೆ.


ಇದನ್ನೂ ಓದಿ: Property Issue: ಆಸ್ತಿಗಾಗಿ ಮರ್ಡರ್ ಪ್ಲಾನ್! ಗಂಡ-ಹೆಂಡ್ತಿ ಸೇರಿ ಕುಟುಂಬದ ನಾಲ್ವರನ್ನು ಕೊಂದೇ ಬಿಟ್ರು


ವೃದ್ಧೆಗೆ ಮನೆ ವಾಪಸ್​ ಕೊಡಿಸಿದ ಅಧಿಕಾರಿಗಳು


ಪಾಲಕರ ಪೋಷಣೆ ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ ಅನ್ವಯ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಮಹಿಳೆಗೆ ವಯಸ್ಸಾಗಿದ್ದು, ಮನೆ ಅವರ ಹೆಸರಿನಲ್ಲೇ ಇದೆ. ಆದ್ದರಿಂದ ಅದನ್ನು ಅವರ ವಶಕ್ಕೆ ನೀಡಲು ಆದೇಶ ನೀಡಲಾಗಿತ್ತು. ವೃದ್ಧೆಗೆ 80 ವರ್ಷ ವಯಸ್ಸಾಗಿದ್ದು, ಅವರು ಈಗ ಸಂತಸಗೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ಎಲ್ಲಾ ಅಧಿಕಾರ ಸಮ್ಮುಖದಲ್ಲಿ ಮನೆಯನ್ನು ಅವರ ಸ್ವಾಧೀನಕ್ಕೆ ಕೊಟ್ಟಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Published by:Sumanth SN
First published: