Madikeri Dasara: ಮಡಿಕೇರಿ ದಸರಾಕ್ಕೆ ಒಂದು ಕೋಟಿ ಅನುದಾನ ಘೋಷಿಸಿದ ಸರ್ಕಾರ

ಕೋವಿಡ್ ಸೋಂಕು ಅಬ್ಬರಿಸಿದ್ದರಿಂದ ಕಳೆದ ವರ್ಷ ದಸರಾ ನಡೆಯಿತಾದರೂ ಅತ್ಯಂತ ಸರಳವಾಗಿ ನಡೆದಿತ್ತು. ದಶ ಮಂಟಪಗಳು ಕೂಡ ಸ್ಥಬ್ಧ ಮಂಟಪಗಳನ್ನು ಮಾಡಿ ಬೆರಳೆಣಿಕೆಯಷ್ಟು ಜನರು ಮಾತ್ರ ದಸರಾದಲ್ಲಿ ಭಾಗವಹಿಸಿದ್ದರು

ಮಡಿಕೇರಿ ದಸರಾ

ಮಡಿಕೇರಿ ದಸರಾ

  • Share this:
ಕೊಡಗು (ಸೆ. 29) : ಕೋವಿಡ್ ಸೋಂಕಿನ ಆತಂಕ ಇದ್ದಿದ್ದರಿಂದ ಮಂಜಿನ ನಗರಿಯ ಮಡಿಕೇರಿ ದಸರಾ( madikeri dasara) ನಡೆಯೋದೆ ಡೌಟ್ ಎನ್ನುವಂತೆ ಆಗಿತ್ತು. ಆದರೆ ಮಡಿಕೇರಿ ದಸರಾಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಜಿಲ್ಲೆಯ ಜನರಿಗೆ ಒಂದಷ್ಟು ಸಂತಸ ಮೂಡಿಸಿದೆ. ಅಲ್ಲದೆ ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಒಂದಷ್ಟು ಅನುಕೂಲ ಆಗಲಿದೆ ಎನ್ನಲಾಗುತ್ತಿದೆ. ಆ ಮೂಲಕ ಮಡಿಕೇರಿಯಲ್ಲಿ ದಸರಾ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಎಳೆದಂತೆ ಆಗಿದೆ. 

ಮೈಸೂರು ದಸರಾ ನಂತರ ಮಡಿಕೇರಿ ದಸರಾ ಬಲು ಫೇಮಸ್ಸು

ಹೌದು ವಿಶ್ವ ವಿಖ್ಯಾತ ಮೈಸೂರಿನ ದಸರಾ ಬಿಟ್ಟರೆ ಮಡಿಕೇರಿಯಲ್ಲಿ ನಡೆಯುವ ದಸರಾಕ್ಕೆ ಎರಡನೆ ಖ್ಯಾತಿ. ಹಗಲು ಮೈಸೂರಿನಲ್ಲಿ ಚಿನ್ನದ ಅಂಬಾರಿ, ಜಂಬೂ ಸವಾರಿಗಳನ್ನು ದೇಶ ವಿದೇಶಗಳ ಲಕ್ಷಾಂತರ ಜನರು ಕಣ್ತುಂಬಿಕೊಳ್ಳುತ್ತಿದ್ದರು. ಮೈಸೂರಿನಲ್ಲಿ ಜಂಬೂ ಸವಾರಿ, ಮುಗಿಸುತ್ತಿದ್ದ ಲಕ್ಷಾಂತರ ಜನರು ರಾತ್ರಿ ಬೆಳಕಿನ ಚಿತ್ತಾರದಲ್ಲಿ ವಿವಿಧ ಕಥಾಹಂದರಗಳಿಗೆ ಆರ್ಭಟಿಸುತ್ತಿದ್ದ ಸುರಾಸುರರ ಯುದ್ಧಗಳನ್ನು ನೋಡಿ ಖುಷಿ ಪಡುತ್ತಿದ್ದರು. ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದರು. ಹೀಗಾಗಿ ಇದು ದಸರಾ ಜನೋತ್ಸವವೆಂದೇ ಖ್ಯಾತಿ ಆಗಿ ದಸರಾ ಜನೋತ್ಸವ ನೋಡೋದಕ್ಕೆ ಮುಗಿಬೀಳುತ್ತಿದ್ದರು.

ಕಳೆದ ಬಾರಿ ಸರಳವಾಗಿ ನಡೆದಿದ್ದ ದಸರಾ

ಮಡಿಕೇರಿಯ ಶಕ್ತಿ ದೇವತೆಗಳು ಸೇರಿದಂತೆ 10 ಮಂಟಪಗಳು ಶೋಭಾಯಾತ್ರೆ ನಡೆಸುತ್ತಿದ್ದವು. ಇಡೀ ರಾತ್ರಿ ಲಕ್ಷಾಂತರ ಜನರು ಈ ಜನೋತ್ಸವದಲ್ಲಿ ಮಿಂದೇಳುತ್ತಿದ್ದರು.  ಆದರೆ ಕೋವಿಡ್ ಸೋಂಕು ಅಬ್ಬರಿಸಿದ್ದರಿಂದ ಕಳೆದ ವರ್ಷ ದಸರಾ ನಡೆಯಿತಾದರೂ ಅತ್ಯಂತ ಸರಳವಾಗಿ ನಡೆದಿತ್ತು. ದಶ ಮಂಟಪಗಳು ಕೂಡ ಸ್ಥಬ್ಧ ಮಂಟಪಗಳನ್ನು ಮಾಡಿ ಬೆರಳೆಣಿಕೆಯಷ್ಟು ಜನರು ಮಾತ್ರ ದಸರಾದಲ್ಲಿ ಭಾಗವಹಿಸಿದ್ದರು. ಆದರೆ ಈಗ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಒತ್ತಡ ಹಾಕಿ 1 ಕೋಟಿ ರೂಪಾಯಿಯನ್ನು ಮಡಿಕೇರಿ ದಸರಾಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಅದರಲ್ಲಿ 25 ಲಕ್ಷ ರೂಪಾಯಿ ದಸರಾಕ್ಕೆ ಮೀಸಲಾಗಿದ್ದರೆ, ಉಳಿದ 75 ಲಕ್ಷ ರೂಪಾಯಿಯನ್ನು ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿ ಮತ್ತು ಇತರೆ ಮೂಲಸೌಕರ್ಯದ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನು ಓದಿ: ದಸರಾ ಬಳಿಕ 3ರಿಂದ5ನೇ ತರಗತಿ ಶಾಲೆ ಆರಂಭ; 6ರಿಂದ 12ನೇ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ

ಕೋವಿಡ್ ಆತಂಕ

ಇದರ ನಡುವೆಯೂ ಜಿಲ್ಲೆಯಲ್ಲಿ ಕೋವಿಡ್ ಆತಂಕ ಇದ್ದೇ ಇದೆ. ಆದರೂ ಜನರ ಅಭಿಪ್ರಾಯ ಎರಡು ವರ್ಷಗಳ ಬಳಿಕವಾದರೂ ಈ ಬಾರಿ ಅದ್ಧೂರಿ ಅಲ್ಲದಿದ್ದರೂ ತಕ್ಕಮಟ್ಟಿಗಾದರೂ ಉತ್ತಮವಾಗಿ ದಸರಾ ಆಚರಿಸಬೇಕು ಎಂದುಕೊಂಡಿದ್ದೇವೆ ಎಂದು ದಸರಾ ಸಮಿತಿ ಅಧ್ಯಕ್ಷ ರಮೇಶ್, ಹೇಳಿದ್ದಾರೆ.

ಇದನ್ನು ಓದಿ: ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್​ ಶಿಕ್ಷಣ; ಸಚಿವ ಅಶ್ವತ್ಥ್​ ನಾರಾಯಣ

ಕೋವಿಡ್ ಮುನ್ನೆಚ್ಚರಿಕಾ​ ಕ್ರಮಗಳೊಂದಿಗೆ ದಸರಾ ಆಚರಣೆ

ದಸರಾ ಉತ್ಸವವನ್ನು ಅದ್ದೂರಿಯಾಗಿ ಮಾಡಿ ಎಂದು ಜನರು ಒತ್ತಾಯ ಹಾಕುತ್ತಿದ್ದಾರೆ. ಈ ಕುರಿತು ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಚರ್ಚಿಸಲಾಗುವುದು. ಆ ಬಳಿಕ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತ್ರ ನಾವು ಕೋವಿಡ್ ನಿಯಮವನ್ನು ಪಾಲಿಸಿಕೊಂಡೇ ದಸರಾ ಆಚರಿಸಬೇಕು. ಈ ಕುರಿತು ಸಚಿವರೊಂದಿಗೆ ಸಭೆ ನಡೆಸಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಗಣೇಶ ಉತ್ಸವಕ್ಕೂ  ಸರ್ಕಾರವೇ ಅವಕಾಶ ನೀಡಿತ್ತು. ಹೀಗಾಗಿ ದಸರಾಕ್ಕೂ ಸರ್ಕಾರವೇ ಮಾರ್ಗಸೂಚಿ ನೀಡಲಿದೆ ಎಂದಿದ್ದಾರೆ.
Published by:Seema R
First published: