HOME » NEWS » State » GOVINDAPURA DRUGS CASE POLICE SERVED NOTICE TO TOLLYWOOD ACTOR TARUN TO ATTENDED ENQUIRY AE

ಗೋವಿಂದಪುರ ಡ್ರಗ್ಸ್ ಪ್ರಕರಣ: ಟಾಲಿವುಡ್​ ನಟ ತರುಣ್ ವಿಚಾರಣೆ..!

ಟಾಲಿವುಡ್ ಹೀರೋ ತರುಣ್ ಸೇರಿದಂತೆ ಐವರು ಉದ್ಯಮಿ ಮಕ್ಕಳಿಗೆ ಗೋವಿಂದಪುರ ಪೊಲೀಸರು ನೊಟೀಸ್ ಕೊಟ್ಟಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ಈಗ ಈ ಟಾಲಿವುಡ್​ ನಟ ತರುಣ್​ ಸಹ ಆರೋಪಿಯಾಗಿದ್ದಾರೆ. ಸದ್ಯಕ್ಕೆ ಶಂಕರ್ ಗೌಡ ಅವರ ಮೊಬೈಲ್​ನಲ್ಲಿ ಡಿಲೀಟ್​ ಆಗಿರುವ ವಾಟ್ಸ್​ಆ್ಯಪ್​ ಚಾಟ್​ ಅನ್ನು ರಿಟ್ರೀವ್ ಮಾಡಲಾಗಿದ್ದು, ಮುಖ್ಯವಾದ ಮಾಹಿತಿಗಳು ಸಿಕ್ಕಿವೆಯಂತೆ. ಇದರ ಆಧಾರ ಮೇರೆಗೆ ಮುಂದಿನ ತನಿಖೆ ನಡೆಯುತ್ತಿದೆ ಎನ್ನಲಾಗುತ್ತಿದೆ.

Anitha E | news18-kannada
Updated:March 12, 2021, 4:46 PM IST
ಗೋವಿಂದಪುರ ಡ್ರಗ್ಸ್ ಪ್ರಕರಣ: ಟಾಲಿವುಡ್​ ನಟ ತರುಣ್ ವಿಚಾರಣೆ..!
ಪ್ರಾತಿನಿಧಿಕ ಚಿತ್ರ.
  • Share this:
ಗೋವಿಂದಪುರ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಚೆ ಚುರುಕುಗೊಳಿಸಿದ್ದಾರೆ. ಡ್ರಗ್ ಪೆಡ್ಲರ್ ಜಾನ್ ಸಂಪರ್ಕದಲ್ಲಿದ್ದ ಕಿಚ್ಚ ಸುದೀಪ್​ ಅಭಿನಯದ ಕೆಂಪೇಗೌಡ ಸಿನಿಮಾದ ನಿರ್ಮಾಪಕ ಶಂಕರ ಗೌಡ ಸೇರಿ ಜೊತೆಯಲ್ಲಿದ್ದ ಐವರಿಗೆ ಇಂದು ಮತ್ತೆ ವಿಚಾರಣೆ ಹಾಜರಾಗುವಂತೆ ತಿಳಿಸಿದ್ದಾರೆ. ಶಂಕರ್ ಗೌಡ, ಮಸ್ತಾನ್ ಚಂದ್ರ, ಶಂಕರ ಗೌಡ ಅವರ ಮ್ಯಾನೇಜರ್ ಭೀಮ, ಫಯೂಮ್, ವಿಕ್ಕಿ ಮಲ್ಹೋತ್ರ ಎಲ್ಲರ ವಿಚಾರಣೆಗೆ ಮುಂದಾಗಿದೆ ಖಾಕಿ ಪಡೆ. ಸ್ಯಾಂಡಲ್​ವುಡ್​ನ ಕೆಲ ನಟ- ನಟಿಯರು ಸೇರಿದಂತೆ ಉದ್ಯಮಿಗಳ ಮಕ್ಕಳಿಗೆ ಡ್ರಗ್ಸ್ ಸಪ್ಲೈ ಮಾಡಿರೋ ಬಗ್ಗೆ ಪೊಲೀಸ್ರರಿಗೆ ಮಾಹಿತಿ ಲಭ್ಯವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ವಿಚಾರಣೆ ಮಾಡ್ತಿರೋ ಗೋವಿಂದಪುರ ಪೊಲೀಸ್ರು, ಡ್ರಗ್ ಪೆಡ್ಲರ್ ಜಾನ್ ಅನ್ನೂ ವಿಚಾರಣೆಗೊಳಪಡಿಸಿದ್ದಾರೆ. ಶಂಕರ ಗೌಡ ಸಂಪರ್ಕದಲ್ಲಿದ್ದ ಹೈದರಾಬಾದಿನ ಐವರಿಗೆ ನೊಟೀಸ್ ಕೊಟ್ಟಿದ್ದಾರೆ ಗೋವಿಂದಪುರ ಪೊಲೀಸರು. 

ಶಂಕರ ಗೌಡ ಬಳಿ ಡ್ರಗ್ಸ್ ಖರೀದಿ ಮಾಡಿರೋ ಆರೋಪದ ಹಿನ್ನಲೆಯಲ್ಲಿ ಈಗಾಗಲೇ ಶಂಕರ ಗೌಡ ,ಮಸ್ತಾನ್ ಚಂದ್ರ ಹಾಗೂ ಜಾನ್ ಸೇರಿ ಮೂವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ. ಡಿಲೀಟ್ ಆಗಿದ್ದ ಮೊಬೈಲ್ ಡಾಟಾವನ್ನು ರಿಟ್ರೀವ್ ಮಾಡಿದ್ದು, ಕೆಲ ಸಂದೇಶಗಳ ಆಧಾರದ ಮೇಲೆ ಕೆಲವರಿಗೆ ನೊಟೀಸ್​ ನೀಡಲಾಗಿದೆಯಂತೆ.

drugs case, Kempegowda movie producer Shankar Gowda, ಶಂಕರ್​ ಗೌಡ, ಮಾದಕ ವಸ್ತು ಪ್ರಕರಣ, ಕೆಂಪೇಗೌಡ ನಿರ್ಮಾಪಕ, crime news, drugs case, drug mafia, mastan chandra, bigg boss kannada contestatn, big boss contestant, mastan chandra arrest, mastan and drug case, ಕ್ರೈಮ್ ಸುದ್ದಿ, ಡ್ರಗ್ಸ್ ಕೇಸ್, ಮಸ್ತಾನ್ ಚಂದ್ರ, ಬಿಗ್ ಬಾಸ್ ಸ್ಪರ್ಧಿ
ಕೆಂಪೇಗೌಡ ಸಿನಿಮಾದ ನಿರ್ಮಾಪಕ ಶಂಕರ ಗೌಡ


ಟಾಲಿವುಡ್ ಹೀರೋ ತರುಣ್ ಸೇರಿದಂತೆ ಐವರು ಉದ್ಯಮಿಗಳ ಮಕ್ಕಳಿಗೆ ಗೋವಿಂದಪುರ ಪೊಲೀಸರು ನೊಟೀಸ್ ಕೊಟ್ಟಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ಈಗ ಈ ಟಾಲಿವುಡ್​ ನಟ ತರುಣ್​ ಸಹ ಆರೋಪಿಯಾಗಿದ್ದಾರೆ. ಸದ್ಯಕ್ಕೆ ಶಂಕರ್ ಗೌಡ ಅವರ ಮೊಬೈಲ್​ನಲ್ಲಿ ಡಿಲೀಟ್​ ಆಗಿರುವ ವಾಟ್ಸ್​ಆ್ಯಪ್​ ಚಾಟ್​ ಅನ್ನು ರಿಟ್ರೀವ್ ಮಾಡಲಾಗಿದ್ದು, ಮುಖ್ಯವಾದ ಮಾಹಿತಿಗಳು ಸಿಕ್ಕಿವೆಯಂತೆ. ಇದರ ಆಧಾರ ಮೇರೆಗೆ ಮುಂದಿನ ತನಿಖೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಚಿತ್ರೀಕರಣಕ್ಕೆ ಮರಳಿದ ಆಲಿಯಾ ಭಟ್​: ಮಿಸ್ಸಿಂಗ್​ ಯೂ ಎಂದು ಫೋಟೋ ಹಂಚಿಕೊಂಡ ನಟಿ..!

ಜಾನ್ ಸಂಪರ್ಕವಿದ್ದ ಮಸ್ತಾನ್ ಮೂಲಕ ಡ್ರಗ್ಸ್ ತರಿಸಿಕೊಂಡು ಶಂಕರ ಗೌಡ ಪಾರ್ಟಿ ಆಯೋಜನೆ ಮಾಡ್ತಿದ್ದರು ಎನ್ನಲಾಗಿದೆ. ಹೀಗೆ ಪಾರ್ಟಿಗೆ ಬರ್ತಿದ್ದ ಕೆಲವರಿಗೆ ಡ್ರಗ್ಸ್ ಸಪ್ಲೈ ಮಾಡಲು ಶಂಕರ ಗೌಡ ಸೂಚಿಸುತ್ತಿದ್ದರು ಎಂಬ ಆರೋಪವಿದೆ. ಇದರಿಂದಾಗಿಯೇ ಇತ್ತೀಚೆಗಷ್ಟೆ ನಿರ್ಮಾಪಕ ಶಂಕರ್​ ಗೌಡ ಅವರ ಮನೆ ಮೇಲೆ ರೇಡ್​ ಮಾಡಲಾಗಿತ್ತು.

ಮಸ್ತಾನ್ ಚಂದ್ರ ಹಾಗೂ ನಿರ್ಮಾಪಕ ಶಂಕರ ಗೌಡ ಅವರಿಗೆ ಸಂಪರ್ಕವಿರುವ ಕುರಿತು ಮಾಹಿತಿ ಸಿಕ್ಕಿದೆ. ಈ ಹಿನ್ನಲೆ ತಡರಾತ್ರಿ ಶಂಕರ ಗೌಡ ನಿವಾಸದ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ನೋಟಿಸ್ ನೀಡಿದ ಹಿನ್ನಲೆ ಶಂಕರ ಗೌಡ ಇವತ್ತು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಮುಂದುವರೆದಿದ್ದು ತನಿಖೆವೇಳೆ ಸಾಕ್ಷಿ ಲಭ್ಯವಾದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.ಇದನ್ನೂ ಓದಿ: Roberrt First Day Collection: ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿರುವ ದರ್ಶನ್​:​ ಕೋಟಿ ಕೋಟಿ ಬಾಚಿದ ರಾಬರ್ಟ್

ಇನ್ನು, ವಿಚಾರಣೆ ವೇಳೆ ಒಬ್ಬರೊಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು, ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಬಹುತೇಕ ನಿರ್ಮಾಪಕ ಶಂಕರ್ ಗೌಡ ಮತ್ತು ಮಸ್ತಾನ್ ಚಂದ್ರನಿಗೆ ಡ್ರಗ್ಸ್ ಸುಳಿ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ ಕೆಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
Published by: Anitha E
First published: March 12, 2021, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories