• Home
  • »
  • News
  • »
  • state
  • »
  • Karnataka Politics: ಸಿದ್ದರಾಮಯ್ಯಗೆ ರಾಜ್ಯದಲ್ಲಿ ಯಾವ ಕ್ಷೇತ್ರನೂ ಸೇಫ್ ಅಲ್ಲ: ಮಾಜಿ ಸಿಎಂಗೆ ಬಿಜೆಪಿ ನಾಯಕನ ಗುದ್ದು

Karnataka Politics: ಸಿದ್ದರಾಮಯ್ಯಗೆ ರಾಜ್ಯದಲ್ಲಿ ಯಾವ ಕ್ಷೇತ್ರನೂ ಸೇಫ್ ಅಲ್ಲ: ಮಾಜಿ ಸಿಎಂಗೆ ಬಿಜೆಪಿ ನಾಯಕನ ಗುದ್ದು

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ಯಾವ ಕ್ಷೇತ್ರವೂ ಸೇಫ್ ಅಲ್ಲ. ಇದು ನಮ್ಮಿಂದ ಸಿಕ್ಕ ಹೊಡೆತ ಅಲ್ಲ, ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡುತ್ತಿದ್ದಾರೆ, ಯುವಕರು ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟಿದ್ದಾರೆ. ಇದೇ ಕಾರಣಕ್ಕರೆ ಸೇಫ್​ ಅಲ್ಲ ಎಂದಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bagalkot, India
  • Share this:

ಬಾಗಲಕೋಟೆ(n.15): ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ (Karnataka Elections 2023) ನಡೆಯಲಿದೆ. ಹೀಗಿರುವಾಗ ರಾಜಕೀಯ ನಾಯಕರು ಫುಲ್ ಅಲರ್ಟ್​ ಆಗಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನರ ಮನ ಗೆಲ್ಲುವ ಯತ್ನ ನಡೆಸುತ್ತಿದ್ದಾರೆ. ಈ ನಡುವೆ ಪರಸ್ಪರ ವಾಗ್ದಾಳಿಯೂ ಎಗ್ಗಿಲ್ಲದೆ ಸಾಗಿದೆ. ಸದ್ಯ ರಾಜಕೀಯ ವಲಯದಲ್ಲಿ ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ (Karnataka Former CM Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದೆಂಬ ಪ್ರಶ್ನೆಯೇ ಸದ್ದು ಮಾಡುತ್ತಿದೆ. ಬಾದಾಮಿಯಿಂದ ಸ್ಪರ್ಧಿಸುವುದು ಅನುಮಾನ ಎನ್ನಲಾಗಿದ್ದು, ಕೋಲಾರದಿಂದ ಕಣಕ್ಕಿಳಿಯಬಹುದೆಂಬ ಚರ್ಚೆ ಜೋರಾಗಿದೆ. ಈ ನಡುವೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಬಗ್ಗೆ ಕಿಡಿ ಕಾರಿದ್ದು, ಅವರಿಗೆ ರಾಜ್ಯದಲ್ಲಿ ಯಾವ ಕ್ಷೇತ್ರನೂ ಸೇಫ್ ಅಲ್ಲ ಎಂದಿದ್ದಾರೆ.


ಹೌದು ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ಯಾವ ಕ್ಷೇತ್ರವೂ ಸೇಫ್ ಅಲ್ಲ. ಇದು ನಮ್ಮಿಂದ ಸಿಕ್ಕ ಹೊಡೆತ ಅಲ್ಲ, ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡುತ್ತಿದ್ದಾರೆ, ಯುವಕರು ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟಿದ್ದಾರೆ. ಇದೇ ಕಾರಣಕ್ಕರೆ ಸೇಫ್​ ಅಲ್ಲ ಎಂದಿದ್ದಾರೆ.


ಕಾಂಗ್ರೆಸ್ ಪರಿಸ್ಥಿತಿ ನೆಟ್ಟಗೆ ಇಲ್ಲ


ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆಯೂ ಪ್ರತಿಕ್ರಿಯಿಸಿದ ಕಾರಜೋಳ ಕೋಲಾರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ನೆಟ್ಟಗೆ ಇಲ್ಲ, ಅಲ್ಲಿ ಭಿನ್ನಮತ ಜಾಸ್ತಿ ಇದೆ. ಅಲ್ಲಿ ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪನವರನ್ನ ಕಾಂಗ್ರೆಸ್​ನವರೇ ಸೋಲಿಸಿದ್ದಾರೆ. ಅದು ಎಲ್ಲರಿಗೂ ಪಾಳೆ ಬರಬಹುದು ಎಂದಿದ್ದಾರೆ.


Cabinet Expansion CM Basavaraj Bommai Likely To Meet high command leaders today
ಗೋವಿಂದ ಕಾರಜೋಳ


ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನ ತಳ್ಳುವ ಕೆಲಸ ಮಾಡಬಾರದು


ಅಲ್ಲದೇ ಚಾಮುಂಡಿಯಲ್ಲಿ ಜನ ಅವರನ್ನು ಕೈ ಬಿಟ್ಟಾಗ, ಬಾದಾಮಿ ಜನ ಅವರನ್ನು ಗೌರವದಿಂದ ಗೆಲ್ಲಿಸಿದ್ದರು. ಅವರ ಸೇವೆ ಮಾಡಿಕೊಂಡು ಅವರು ಇಲ್ಲೇ ಇರಬೇಕಿತ್ತು. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನ ತಳ್ಳುವ ಕೆಲಸ ಮಾಡಬಾರದು. ಇಲ್ಲೇ ಕಂಟಸ್ಟ್ ಮಾಡ್ತಾರೆ ಎಂದುಕೊಂಡಿದ್ವಿ, ಈಗ ಇಲ್ಲಿಂದ ಹೊರಗೆ ಹೋಗ್ತಿದ್ದಾರೆ. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನ ಮರೆಯಬಾರದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ:  Bengaluru: ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದ ಮಗು; ಶೋಧಕಾರ್ಯ ಮಾಡಿದ್ರು ಪತ್ತೆಯಾಗದ ಕಂದ


ಈ ದೇಶದ ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣವಿದೆ


ಇದೇ ಸಂದರ್ಭದಲ್ಲಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿವಾದದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಆರೋಪ‌ ಮಾಡಿದವರಿಗೆ ದೇಶದ ಇತಿಹಾಸ ಗೊತ್ತಿಲ್ಲ, ಈ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಶರಣರು, ಸಂತರು, ಸೂಫಿ ಸಂತರು ಕಾವಿ ಧರಿಸುತ್ತಿದ್ದರು. ಕಾವಿಯನ್ನೇ ಉಪಯೋಗ ಮಾಡುತ್ತಿದ್ದರು. ಆ ಕಾವಿಯ ಬಣ್ಣ ಸಾಧು ಸಂತರಿಗೆ ಮಾತ್ರ ಸೀಮಿತ ಆಗಿರಲಿಲ್ಲ. ಈ ದೇಶದ ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣವಿದೆ. ವಿನಾಕಾರಣ ವಿವಾದ ಸೃಷ್ಟಿ ಮಾಡೋದ್ರಲ್ಲಿ ಅರ್ಥ ಇಲ್ಲ. ಇದೊಂದು ಸಣ್ಣತನದ, ಕೀಳುಮಟ್ಟದ ರಾಜಕಾರಣ ಆಗುತ್ತದೆ, ಹಾಗಾಗಿ ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Published by:Precilla Olivia Dias
First published: