ರಾಜ್ಯ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ರಾಜ್ಯಪಾಲರು; ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತಿಗೆ ಗಡುವು ನಿಗದಿ

ಆರ್ಟಿಕಲ್ 175(2)ರ ಪ್ರಕಾರ ಬಹುಮತ ಸಾಬೀತು ಮಾಡಿ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ಸ್ಪೀಕರ್​ಗೆ ಸೂಚನೆ ನೀಡಿದ್ದಾರೆ.

HR Ramesh
Updated:July 19, 2019, 9:13 AM IST
ರಾಜ್ಯ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ರಾಜ್ಯಪಾಲರು; ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತಿಗೆ ಗಡುವು ನಿಗದಿ
ರಾಜ್ಯಪಾಲ ವಿ.ಆರ್.ವಾಲಾ
  • Share this:
ಬೆಂಗಳೂರು: ಆರೋಪ-ಪ್ರತ್ಯಾರೋಪಗಳ ಗದ್ದಲಕ್ಕೆ ಇಂದಿನ ಕಲಾಪ ಬಲಿಯಾಗಿದ್ದರಿಂದ ಸದನವನ್ನು ನಾಳೆಗೆ ಮುಂದೂಡಲಾಯಿತು. ಇದರಿಂದ ಇಂದು ನಡೆಯಬೇಕಿದ್ದ ವಿಶ್ವಾಸಮತ ಯಾಚನೆಯೂ ಮುಂದೂಡಿಕೆಯಾಯಿತು. ಆಡಳಿತ ಪಕ್ಷದವರು ಬೇಕೆಂದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ನಡುವೆ ಶುಕ್ಮರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲ ವಿ.ಆರ್.ವಾಲಾ ಅವರು ಸರ್ಕಾರಕ್ಕೆ ಮತ್ತು ಸ್ಪೀಕರ್​ಗೆ ಸೂಚನೆ ನೀಡಿದ್ದಾರೆ.

ಆರ್ಟಿಕಲ್ 175(2)ರ ಪ್ರಕಾರ ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಮಾಡುವಂತೆ ಗಡುವು ನಿಗದಿ ಮಾಡಿ ರಾಜ್ಯಪಾಲ ವಿ.ಆರ್.ವಾಲಾ ಅವರು ಸ್ಪೀಕರ್​ಗೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ವಿಶ್ವಾಸಮತ ಯಾಚನೆಗೆ ಸಮಯ ನಿಗದಿಗೊಳಿಸುವಂತೆ ನಾಳೆ ಸುಪ್ರೀಂಕೊರ್ಟ್​ಗೆ ಅರ್ಜಿ ಸಲ್ಲಿಸಲು ಬಿಜೆಪಿ ನಿರ್ಧಾರ

ನಿನ್ನೆ ಸದನದಲ್ಲಿ ಶಾಸಕರು ತಮ್ಮ ಹಕ್ಕುಗಳ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಜಗದೀಶ್ ಶೆಟ್ಟರ್​ ನೇತೃತ್ವದ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ, ಬಹುಮತ ಸಾಬೀತು ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿತ್ತು. ಇದೀಗ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಅಖಾಡಕ್ಕೆ ರಾಜ್ಯಪಾಲರು ದುಮುಕ್ಕಿದ್ದಾರೆ. ನಾಳೆ ಮಧ್ಯಾಹ್ನ 1.30ರೊಳಗೆ ಸರ್ಕಾರ ಬಹುಮತ ಸಾಬೀತು ಮಾಡುವಂತೆ ಗಡುವು ನಿಗದಿ ಮಾಡಿದ್ದಾರೆ.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ