ಮೈಸೂರು ಅರಮನೆ ನೋಡಿ ಪುಳಕಿತರಾದ ರಾಜ್ಯಪಾಲರು

news18
Updated:September 5, 2018, 4:37 PM IST
ಮೈಸೂರು ಅರಮನೆ ನೋಡಿ ಪುಳಕಿತರಾದ ರಾಜ್ಯಪಾಲರು
news18
Updated: September 5, 2018, 4:37 PM IST
-ಪುಟ್ಟಪ್ಪ, ನ್ಯೂಸ್​ 18 ಕನ್ನಡ

ಮೈಸೂರು,(ಸೆ.05): ಎರಡು ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸದಲ್ಲಿರುವ ರಾಜ್ಯಪಾಲ ವಜೂಭಾಯಿ ವಾಲ ಕುಟುಂಬ ಇಂದು ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ.ಮಗ, ಸೊಸೆಯ ಸಮೇತವಾಗಿ ಆಗಮಿಸಿದ ಅವರು ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯನ್ನು ನೋಡಿ ಕಣ್ತುಂಬಿಕೊಂಡರು. ರಾಜವಂಶಸ್ಥರ ಕಾಲದ ಮೈಸೂರು ಅರಮನೆ ಕಂಡು ಪುಳಕಿತರಾದರು. 

ನಿನ್ನೆ ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಮಾಡಿದ್ದ ರಾಜ್ಯಪಾಲರ ಕುಟುಂಬ ಇಂದು ಅರಮನೆಯ ವೈಭವ ನೋಡಿ ಪುಳಕಿತರಾದರು. ಇದೇ ವೇಳೆ ರಾಜ್ಯಪಾಲರು ಅರಮನೆ ಉಪನಿರ್ದೇಶಕ ಟಿ.ಎಸ್​. ಸುಬ್ರಹ್ಮಣ್ಯ ಜೊತೆ ಮನದಾಳದ ಮಾತುಗಳನ್ನು ಹಂಚಿಕೊಂಡರು.
Loading..."ದಸರೆಯಲ್ಲಿ ಪಂಜಿನ ಕವಾಯತಿಗೆ ಮಾತ್ರ ಬರುತ್ತಿದ್ದೆ. ಇದೀಗ ಜಂಬೂ ಸವಾರಿಗೂ ಬರಬೇಕೆಂಬ ಆಸೆಯಾಗಿದೆ. ಈ ಬಾರಿ ಆದರೆ ಸಿಂಹಾಸನ ನೋಡಲು ಮೊದಲಿಗೆ ಬರುತ್ತೇನೆ. ಸಮಯ ಸಿಕ್ಕರೆ ನಂತರ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತೇನೆ. ದೇಶದ ಅರಮನೆಗಳಿಗಿಂತ ಅತ್ಯಂತ ಸುಂದರವಾದ ಅರಮನೆ ಮೈಸೂರಿನದ್ದು. ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ" ಎಂದು ಪ್ರಶಂಸೆಯ ಮಾತುಗಳನ್ನಾಡಿದರು.  ಇದೇ ವೇಳೆ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...