ಭಾರತ ಮಾತೆಗೆ ಜೈಕಾರ ಕೂಗದವರು ಗಂಡಸರೇ ಅಲ್ಲ; ರಾಜ್ಯಪಾಲ ವಜುಭಾಯಿ ವಾಲಾ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಬಿ ಮತ್ತು ಸಿ ಗ್ರೇಡ್ ಪಡೆಯುವ ವಿದ್ಯಾರ್ಥಿಗಳನ್ನು ಹಿಂದುಳಿದವರು ಎಂದು ಗುರುತಿಸುತ್ತಾರೆ. ಶಿಕ್ಷಣ ಸಂಸ್ಥೆಗಳಿಗೂ ಇದೇ ಮಾನದಂಡ ಅನ್ವಯವಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಬೇಕು‌ ಎಂದರು.

news18-kannada
Updated:January 7, 2020, 12:35 PM IST
ಭಾರತ ಮಾತೆಗೆ ಜೈಕಾರ ಕೂಗದವರು ಗಂಡಸರೇ ಅಲ್ಲ; ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಿ.ಆರ್.ವಾಲಾ
  • Share this:
ಬೆಂಗಳೂರು(ಜ.07):ಯಾರಿಗೆ ಭಾರತ ಮಾತೆಯ ಜೈಕಾರ ಕೂಗಲ ಸಾಧ್ಯವಿಲ್ಲವೋ, ಯಾರಿಗೆ ಜೈಕಾರ ಕೂಗಲು ಗಂಟಲಲ್ಲಿ ಧ್ವನಿ ಇಲ್ಲವೋ ಅವರೆಲ್ಲಾ ಗಂಡಸರೇ ಅಲ್ಲ. ಭಾರತ ಮಾತಾಕಿ ಜೈ ಎನ್ನುವುದು ಗಂಡಸ್ತನದ ಸಂಕೇತ ಎಂದು ರಾಜ್ಯಪಾಲ ವಜುಭಾಯಿ ಆರ್​ ವಾಲಾ ಹೇಳಿದ್ದಾರೆ.

ರಾಜಭವನದಲ್ಲಿ ಮಾತನಾಡಿದ ಅವರು, ಭಾರತ ಮಾತೆಗೆ ಯಾಕೆ ಜೈಕಾರ ಕೂಗಲ್ಲ? ಜೈಕಾರ ಕೂಗದವರು ಗಂಡಸರೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಶಿಕ್ಷಣ ಸಂಸ್ಥೆಗಳಿಗೆ ಮೌಲ್ಯಾಂಕನ ನೀಡುವ ನ್ಯಾಕ್​ ಕಮಿಟಿ ಬಗ್ಗೆ ವಜುಭಾಯಿ ಮಾತನಾಡಿದರು. "ನ್ಯಾಕ್ ಇಂದು 25 ವರ್ಷಗಳನ್ನು ಪೂರೈಸಿದೆ.  ಹಲವು ಸಂಸ್ಥೆ 25 ವರ್ಷ, 50 ವರ್ಷ ,75 ವರ್ಷ ಪೂರೈಸುತ್ತವೆ. ಆದರೆ ದೇಶಕ್ಕೆ ಏನು ಕೊಡುಗೆ ಕೊಟ್ಟಿವೆ ಎಂಬುದು ಮುಖ್ಯ. ನ್ಯಾಕ್ ಶಿಕ್ಷಣ ಸಂಸ್ಥೆಗಳ ಮೌಲ್ಯಾಂಕನ ಮಾಡುತ್ತದೆ. ಬಿ ಮತ್ತು ಸಿ ಗ್ರೇಡ್ ನೀಡುತ್ತದೆ. ನನ್ನ ಪ್ರಕಾರ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಎ ಗ್ರೇಡ್ ಬರಬೇಕು. ಇಲ್ಲವಾದರೆ ಆ ಸಂಸ್ಥೆಗಳನ್ನು ಮುಚ್ಚಿಬಿಡುವುದು ಸೂಕ್ತ," ಎಂದು ಹೇಳಿದರು.

ಎರಡನೇ ಕಂತಿನಲ್ಲಿ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ; ಪ್ರಧಾನಿಗೆ ಬಿಎಸ್​ವೈ ಅಭಿನಂದನೆ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಬಿ ಮತ್ತು ಸಿ ಗ್ರೇಡ್ ಪಡೆಯುವ ವಿದ್ಯಾರ್ಥಿಗಳನ್ನು ಹಿಂದುಳಿದವರು ಎಂದು ಗುರುತಿಸುತ್ತಾರೆ. ಶಿಕ್ಷಣ ಸಂಸ್ಥೆಗಳಿಗೂ ಇದೇ ಮಾನದಂಡ ಅನ್ವಯವಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಬೇಕು‌ ಎಂದರು.

ಕಾಲೇಜು ಉಪನ್ಯಾಸಕರಿಗೆ ತಿಂಗಳ ಒಂದನೇ ತಾರೀಖು ವೇತನ ಪಡೆಯುವುದಷ್ಟೇ ಸಾಧನೆಯಾಗಬಾರದು.  ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಷ್ಟು ಕಲಿಯುತ್ತಿದ್ದಾನೆ ಯಾವ ಸಂಶೋಧನೆ ಮಾಡುತ್ತಿದ್ದಾನೆ ಎಂಬುದನ್ನು ಗಮನಿಸಬೇಕು.  ಯಾವ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಿಕಸನಕ್ಕೆ ಸೂಕ್ತವಾದ ರೀತಿಯಲ್ಲಿ ಶಿಕ್ಷಣ ನೀಡುವುದಿಲ್ಲವೋ ಅಂತಹ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಬಿಡಲು ನ್ಯಾಕ್ ಶಿಫಾರಸ್ಸು ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಇಂದು ಪಟಿಯಾಲಾ ಹೌಸ್ ಕೋರ್ಟ್​ನಲ್ಲಿ ವಿಚಾರಣೆ; ಅಂತಿಮ ತೀರ್ಪು ಸಾಧ್ಯತೆ
Published by: Latha CG
First published: January 7, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading