ಐಎಂಎ ಪ್ರಕರಣ: ‘ಪ್ರಮುಖ ಸಾಕ್ಷಿ ರೋಷನ್ ಬೇಗ್ಗೆ ರಕ್ಷಣೆ ನೀಡಿ‘ ಎಂದು ಎಸ್ಐಟಿಗೆ ಪತ್ರ ಬರೆದಿದ್ದ ಗವರ್ನರ್
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಬಳಿಕ ಮರುದಿನ ಮಧ್ಯಾಹ್ನ ಬಿಡುಗಡೆ ಮಾಡಿದ್ದರು. ಈ ಬೆನ್ನಲ್ಲೇ ರವಿಕಾಂತೇಗೌಡರಿಗೆ ರಾಜ್ಯಪಾಲರು ಬರೆದ ಪತ್ರವೀಗ ವಿವಾದಕ್ಕಿಡಾಗಿದೆ.
news18 Updated:September 15, 2019, 8:38 AM IST

ರೋಷನ್ ಬೇಗ್
- News18
- Last Updated: September 15, 2019, 8:38 AM IST
ಬೆಂಗಳೂರು(ಸೆ.15): ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ರಕ್ಷಣೆ ನೀಡುವಂತೆ ಎಸ್ಐಟಿ ತಂಡಕ್ಕೆ ಗವರ್ನರ್ ಪತ್ರ ಬರೆದಿದ್ದರು. ರಾಜ್ಯಪಾಲ ವಜುಭಾಯಿ ವಾಲಾ ಅವರೇ ಖುದ್ದು, ಎಸ್ಐಟಿ ಮುಖ್ಯಸ್ಥ ಬಿ.ಆರ್ ರವಿಕಾಂತೇಗೌಡರಿಗೆ ಪತ್ರದ ಮೂಲಕ ಹೀಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಮಾಜಿ ಸಚಿವ ರೋಷನ್ ಬೇಗ್ ಅವರು ಐಎಂಎ ಪ್ರಕರಣದ ಪ್ರಮುಖ ಸಾಕ್ಷಿ. ಹೀಗಾಗಿ ಮಾಜಿ ಸಚಿವ ರೋಷನ್ ಬೇಗ್ಗೆ ರಕ್ಷಣೆ ನೀಡಬೇಕು. ಸ್ವಾತಂತ್ರ್ಯ ಮತ್ತು ಮುಕ್ತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂರು ತಿಂಗಳ ಹಿಂದೆಯೇ ಜುಲೈ 17ರಂದು ರವಿಕಾಂತೇಗೌಡರಿಗೆ ಗವರ್ನರ್ ಪತ್ರ ಬರೆದು ಸೂಚಿಸಿದ್ದರು.
ಇತ್ತೀಚೆಗೆ ಜುಲೈ 16ರಂದು ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್ಐಟಿ ಡಿಸಿಪಿ ಗಿರೀಶ್ ವಶಕ್ಕೆ ಪಡೆದಿದ್ದರು. ಬಳಿಕ ಮರುದಿನ ಮಧ್ಯಾಹ್ನ ಬಿಡುಗಡೆ ಮಾಡಿದ್ದರು. ಈ ಬೆನ್ನಲ್ಲೇ ರವಿಕಾಂತೇಗೌಡರಿಗೆ ರಾಜ್ಯಪಾಲರು ಬರೆದ ಪತ್ರವೀಗ ವಿವಾದಕ್ಕಿಡಾಗಿದೆ. ಅಲ್ಲದೇ ಈ ಪತ್ರ ಕಾನೂನು ತಜ್ಞರ ವಲಯದಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ. ಐಎಂಎ ಪ್ರಕರಣವನ್ನು ಸದ್ಯ ಸಿಬಿಐ ತನಿಖೆಗೆ ನಡೆಸುತ್ತಿದ್ದು, ಈ ಪತ್ರದ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.ಸುಮಾರು ದಿನಗಳಿಂದ ಅತೃಪ್ತ ಶಾಸಕರ ಕಾರಣಕ್ಕೆ ರಾಜ್ಯ ರಾಜಕೀಯ ದೇಶದ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಶಾಸಕ ರೋಷನ್ ಬೇಗ್ ಅವರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದರಿಂದ ಮತ್ತೊಮ್ಮೆ ಕರ್ನಾಟಕದತ್ತ ಎಲ್ಲರ ಕಣ್ಣು ನೆಟ್ಟಿತ್ತು.
ಇದನ್ನೂ ಓದಿ: IMA Scam: ಜು.31ಕ್ಕೆ ರೋಷನ್ ಬೇಗ್, ಜಮೀರ್ ಅಹಮ್ಮದ್ ವಿಚಾರಣೆ
ಐಎಂಎ ಜ್ಯುವೆಲ್ಸ್ ಹಗರಣದ ಆರೋಪಿಯಾಗಿದ್ದ ರೋಷನ್ ಬೇಗ್ ಅಂದು ತಡರಾತ್ರಿ ಅತೃಪ್ತ ಶಾಸಕರ ಜೊತೆ ಸೇರಿಕೊಳ್ಳಲು ಮುಂಬೈಗೆ ಪರಾರಿಯಾಗುವ ಪ್ಲ್ಯಾನ್ ಮಾಡಿದ್ದರು. 24 ಗಂಟೆಗಳಲ್ಲಿ ಬೆಂಗಳೂರಿಗೆ ಬರುವುದಾಗಿ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ವಿಡಿಯೋ ಮೂಲಕ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೋಷನ್ ಬೇಗ್ ಮೇಲೆ ಕಣ್ಣಿಟ್ಟಿದ್ದ ಎಸ್ಐಟಿ ಪೊಲೀಸರಿಗೆ ರೋಷನ್ ಬೇಗ್ ವಿಮಾನದಲ್ಲಿ ಮುಂಬೈಗೆ ಹಾರಲಿರುವ ಖಚಿತ ಮಾಹಿತಿ ಸಿಕ್ಕಿತ್ತು. ಮೂರ್ನಾಲ್ಕು ಬಾರಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರೂ ಒಂದಿಲ್ಲೊಂದು ನೆಪ ಹೇಳಿ ರೋಷನ್ ಬೇಗ್ ಹಾಜರಾಗಿರಲಿಲ್ಲ. ಹೀಗಾಗಿ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ ಡಿಸಿಪಿ ಗಿರೀಶ್ ರೋಷನ್ ಬೇಗ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಡಿಯೋದಲ್ಲಿ ರೋಷನ್ ಬೇಗ್ ತನ್ನಿಂದ 400 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದ. ಅಲ್ಲದೇ ಜಮೀರ್ ಅಹಮ್ಮದ್ ಕೂಡ ಮನ್ಸೂರ್ ಜತೆಗೆ ವ್ಯಾಪರ ವಹಿವಾಟು ಮಾಡುತ್ತಿದ್ದರು ಎಂಬ ಸುಳಿವೂ ಸಿಕ್ಕಿತ್ತು. ಈ ಸಂಬಂಧ ಎಸ್ಐಟಿ ಮುಖ್ಯಸ್ಥರು ವಿಚಾರಣೆಯೂ ನಡೆಸಿದ್ದರು. ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
-----------
ಮಾಜಿ ಸಚಿವ ರೋಷನ್ ಬೇಗ್ ಅವರು ಐಎಂಎ ಪ್ರಕರಣದ ಪ್ರಮುಖ ಸಾಕ್ಷಿ. ಹೀಗಾಗಿ ಮಾಜಿ ಸಚಿವ ರೋಷನ್ ಬೇಗ್ಗೆ ರಕ್ಷಣೆ ನೀಡಬೇಕು. ಸ್ವಾತಂತ್ರ್ಯ ಮತ್ತು ಮುಕ್ತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂರು ತಿಂಗಳ ಹಿಂದೆಯೇ ಜುಲೈ 17ರಂದು ರವಿಕಾಂತೇಗೌಡರಿಗೆ ಗವರ್ನರ್ ಪತ್ರ ಬರೆದು ಸೂಚಿಸಿದ್ದರು.
ಇತ್ತೀಚೆಗೆ ಜುಲೈ 16ರಂದು ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್ಐಟಿ ಡಿಸಿಪಿ ಗಿರೀಶ್ ವಶಕ್ಕೆ ಪಡೆದಿದ್ದರು. ಬಳಿಕ ಮರುದಿನ ಮಧ್ಯಾಹ್ನ ಬಿಡುಗಡೆ ಮಾಡಿದ್ದರು. ಈ ಬೆನ್ನಲ್ಲೇ ರವಿಕಾಂತೇಗೌಡರಿಗೆ ರಾಜ್ಯಪಾಲರು ಬರೆದ ಪತ್ರವೀಗ ವಿವಾದಕ್ಕಿಡಾಗಿದೆ. ಅಲ್ಲದೇ ಈ ಪತ್ರ ಕಾನೂನು ತಜ್ಞರ ವಲಯದಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ. ಐಎಂಎ ಪ್ರಕರಣವನ್ನು ಸದ್ಯ ಸಿಬಿಐ ತನಿಖೆಗೆ ನಡೆಸುತ್ತಿದ್ದು, ಈ ಪತ್ರದ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.ಸುಮಾರು ದಿನಗಳಿಂದ ಅತೃಪ್ತ ಶಾಸಕರ ಕಾರಣಕ್ಕೆ ರಾಜ್ಯ ರಾಜಕೀಯ ದೇಶದ ಗಮನ ಸೆಳೆದಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಶಾಸಕ ರೋಷನ್ ಬೇಗ್ ಅವರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದರಿಂದ ಮತ್ತೊಮ್ಮೆ ಕರ್ನಾಟಕದತ್ತ ಎಲ್ಲರ ಕಣ್ಣು ನೆಟ್ಟಿತ್ತು.
ಇದನ್ನೂ ಓದಿ: IMA Scam: ಜು.31ಕ್ಕೆ ರೋಷನ್ ಬೇಗ್, ಜಮೀರ್ ಅಹಮ್ಮದ್ ವಿಚಾರಣೆ
ಐಎಂಎ ಜ್ಯುವೆಲ್ಸ್ ಹಗರಣದ ಆರೋಪಿಯಾಗಿದ್ದ ರೋಷನ್ ಬೇಗ್ ಅಂದು ತಡರಾತ್ರಿ ಅತೃಪ್ತ ಶಾಸಕರ ಜೊತೆ ಸೇರಿಕೊಳ್ಳಲು ಮುಂಬೈಗೆ ಪರಾರಿಯಾಗುವ ಪ್ಲ್ಯಾನ್ ಮಾಡಿದ್ದರು. 24 ಗಂಟೆಗಳಲ್ಲಿ ಬೆಂಗಳೂರಿಗೆ ಬರುವುದಾಗಿ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ವಿಡಿಯೋ ಮೂಲಕ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೋಷನ್ ಬೇಗ್ ಮೇಲೆ ಕಣ್ಣಿಟ್ಟಿದ್ದ ಎಸ್ಐಟಿ ಪೊಲೀಸರಿಗೆ ರೋಷನ್ ಬೇಗ್ ವಿಮಾನದಲ್ಲಿ ಮುಂಬೈಗೆ ಹಾರಲಿರುವ ಖಚಿತ ಮಾಹಿತಿ ಸಿಕ್ಕಿತ್ತು. ಮೂರ್ನಾಲ್ಕು ಬಾರಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರೂ ಒಂದಿಲ್ಲೊಂದು ನೆಪ ಹೇಳಿ ರೋಷನ್ ಬೇಗ್ ಹಾಜರಾಗಿರಲಿಲ್ಲ. ಹೀಗಾಗಿ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ ಡಿಸಿಪಿ ಗಿರೀಶ್ ರೋಷನ್ ಬೇಗ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಡಿಯೋದಲ್ಲಿ ರೋಷನ್ ಬೇಗ್ ತನ್ನಿಂದ 400 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದ. ಅಲ್ಲದೇ ಜಮೀರ್ ಅಹಮ್ಮದ್ ಕೂಡ ಮನ್ಸೂರ್ ಜತೆಗೆ ವ್ಯಾಪರ ವಹಿವಾಟು ಮಾಡುತ್ತಿದ್ದರು ಎಂಬ ಸುಳಿವೂ ಸಿಕ್ಕಿತ್ತು. ಈ ಸಂಬಂಧ ಎಸ್ಐಟಿ ಮುಖ್ಯಸ್ಥರು ವಿಚಾರಣೆಯೂ ನಡೆಸಿದ್ದರು.
Loading...
-----------
Loading...