ಸರ್ಕಾರಕ್ಕೆ ಎರಡನೇ ಬಾರಿ ಡೆಡ್​ಲೈನ್ ಕೊಟ್ಟ ಗವರ್ನರ್; ಸಂಜೆ 6 ಗಂಟೆಯೊಳಗೆ ಆಗುತ್ತಾ ವಿಶ್ವಾಸ ಮತಯಾಚನೆ?

ರಾಜ್ಯ ಸರ್ಕಾರದ ನಡೆಯಿಂದ ಬೇಸರಗೊಂಡಿರುವ ರಾಜ್ಯಪಾಲ ವಜುಭಾಯ್ ವಾಲಾ ಈ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ನೀಡಿದ್ದಾರೆ. ಅಲ್ಲದೆ, ಬಹುಮತ ಸಾಬೀತುಪಡಿಸಲು ಮತ್ತೆ ಇಂದೇ ಸಂಜೆ 6 ಗಂಟೆಗೆ ಹೊಸ ಡೆಡ್​ಲೈನ್ ಕೊಟ್ಟಿದ್ದಾರೆ.

MAshok Kumar | news18
Updated:July 19, 2019, 3:57 PM IST
ಸರ್ಕಾರಕ್ಕೆ ಎರಡನೇ ಬಾರಿ ಡೆಡ್​ಲೈನ್ ಕೊಟ್ಟ ಗವರ್ನರ್; ಸಂಜೆ 6 ಗಂಟೆಯೊಳಗೆ ಆಗುತ್ತಾ ವಿಶ್ವಾಸ ಮತಯಾಚನೆ?
ಹೆಚ್​.ಡಿ. ಕುಮಾರಸ್ವಾಮಿ, ವಜುಭಾಯ್ ವಾಲಾ.
  • News18
  • Last Updated: July 19, 2019, 3:57 PM IST
  • Share this:
ಬೆಂಗಳೂರು (ಜುಲೈ.19); ಪ್ರಸ್ತುತ ರಾಜ್ಯ ರಾಜಕಾರಣ, ಸಾಂವಿಧಾನಿಕ ಬಿಕ್ಕಟ್ಟು ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದ ಬೆನ್ನಿಗೆ ರಾಜ್ಯಪಾಲ ವಜುಭಾಯ್ ವಾಲಾ ಬಹುಮತ ಸಾಬೀತುಪಡಿಸಲು ಮೈತ್ರಿ ಸರ್ಕಾರಕ್ಕೆ ಎರಡನೇ ಬಾರಿ ಡೆಡ್​ಲೈನ್ ಕೊಟ್ಟಿದ್ದಾರೆ. ಶುಕ್ರವಾರ ಸಂಜೆ 6 ಗಂಟೆಗೆ ಡೆಡ್ಲೈನ್ ಕೊಟ್ಟಿದ್ದು ಈ ಬಾರಿಯಾದರೂ ಸರ್ಕಾರ ಬಹುಮತ ಸಾಬೀತುಮಾಡುತ್ತಾ? ಎಂಬ ಪ್ರಶ್ನೆ ಹುಟ್ಟಿದೆ.

ಬಿಜೆಪಿ ನಾಯಕರ ಒತ್ತಾಯದ ಮೇರೆಗೆ ರಾಜ್ಯಪಾಲ ವಜುಭಾಯ್ ವಾಲಾ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹುಮತ ಸಾಬೀತಿಗೆ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನದಂತೆ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಹುಮತ ಸಾಬೀತುಪಡಿಸುವ ಹೊಣೆಗಾರಿಕೆ ಮೈತ್ರಿ ಸರ್ಕಾರದ ಮೇಲಿತ್ತು. ಆದರೆ, ಮೈತ್ರಿ ಸರ್ಕಾರ ರಾಜ್ಯಪಾಲರ ಈ ನಿರ್ದೇಶನವನ್ನು ಗಾಳಿಗೆ ತೂರಿದೆ. ಗುರುವಾರ ಮೊದಲ ಅವಧಿಯ ಅಧಿವೇಶನ ಮುಗಿದರೂ ಸಹ ಕೊನೆಯವರೆಗೆ ಬಹುಮತ ಸಾಬೀತುಪಡಿಸಲು ಮುಂದಾಗಿರಲಿಲ್ಲ.

ಈ ನಡುವೆ ರಾಜ್ಯ ಸರ್ಕಾರದ ನಡೆಯಿಂದ ಬೇಸರಗೊಂಡಿರುವ ರಾಜ್ಯಪಾಲ ವಜುಭಾಯ್ ವಾಲಾ ಈ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ನೀಡಿದ್ದಾರೆ. ಅಲ್ಲದೆ, ಬಹುಮತ ಸಾಬೀತುಪಡಿಸಲು ಮತ್ತೆ ಇಂದೇ ಸಂಜೆ 6 ಗಂಟೆಗೆ ಹೊಸ ಡೆಡ್​ಲೈನ್ ಕೊಟ್ಟಿದ್ದಾರೆ. ಆದರೆ, ಬಹುಮತದ ಮಂಡನೆ ಮೇಲಿನ ಚರ್ಚೆ ಇನ್ನೂ ಮುಂದುವರೆಯುತ್ತಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಬಹುಮತ ಸಾಬೀತುಪಡಿಸುತ್ತಾರ? ಅಥವಾ ಸದನ ಸೋಮವಾರಕ್ಕೆ ಮುಂದೂಲ್ಪಡುತ್ತದೆಯಾ? ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ರಾಜ್ಯ ರಾಜಕಾರಣ; ರಾಜ್ಯಪಾಲರ ಡೆಡ್​ಲೈನ್ ಉಲ್ಲಂಘಿಸಿದ ಸರ್ಕಾರ; ಮುಂದಿನ ಆಯ್ಕೆಗಳೇನು?

First published:July 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...