HOME » NEWS » State » GOVERNOR V R VALA SEEK REPORT FROM MYSORE UNIVERSITY ISSUE ON FREE KASHMIR BANNER RH

ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ; ವರದಿ ಕೇಳಿದ ರಾಜ್ಯಪಾಲರು‌

ವಿಶ್ವವಿದ್ಯಾಲಯದ ಕ್ಲಾಕ್ ಟವರ್ ಬಳಿಯಿಂದ ಕುವೆಂಪು ಪ್ರತಿಮೆಯವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಈ ವೇಳೆ, ಪ್ರತಿಭಟನಾಕಾರರ ಮಧ್ಯೆ ವಿದ್ಯಾರ್ಥಿನಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಫಲಕ ಹಿಡಿದು ನಿಂತಿದ್ದಳು. ಹಿಟ್ಲರ್ ವಿರುದ್ಧವೂ ಬರೆಯಲಾಗಿದ್ದ ಪೋಸ್ಟರ್​ಗಳು ಈ ಪ್ರತಿಭಟನೆಯಲ್ಲಿ ಕಂಡುಬಂದವು.

HR Ramesh | news18-kannada
Updated:January 9, 2020, 4:19 PM IST
ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ; ವರದಿ ಕೇಳಿದ ರಾಜ್ಯಪಾಲರು‌
ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಪ್ಲ ಕಾರ್ಡ್ ಪ್ರದರ್ಶಿಸುತ್ತಿರುವುದು.
  • Share this:
ಮೈಸೂರು: ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ​ ಪ್ರದರ್ಶಿಸಿದ ಘಟನೆ ಬಗ್ಗೆ ವಿವಿಯಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ವರದಿ ಕೇಳಿದ್ದಾರೆ. ಅಲ್ಲದೇ ವರದಿಯನ್ನು ಇಂದು ಸಂಜೆಯವರೆಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ಸೂಚನೆಯಂತೆ ಫ್ರೀ ಕಾಶ್ಮೀರ ಪ್ಲಕಾರ್ಡ್ ಪ್ರದರ್ಶನ ಸಂಬಂಧ ವಿವಿ ರಿಜಿಸ್ಟ್ರಾರ್​ ಪ್ರೊ. ಆರ್.ಶಿವಪ್ಪ ಅವರು ವರದಿ ನೀಡಲಿದ್ದಾರೆ. ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲ ಕಾರ್ಡ್ ಪ್ರದರ್ಶನ ವಿಚಾರವಾಗಿ ಭದ್ರತೆ ಲೋಪ ಎಸಗಿದ ಆರೋಪದ ಮೇಲೆ ವಿವಿಯಿಂದ ಭದ್ರತಾ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿಭಟನೆ ವೇಳೆ ಭದ್ರತಾ ಲೋಪ ಆಗಿರುವ ಬಗ್ಗೆ ಕಾರಣ ಕೇಳಿ ಭದ್ರತಾ ಸಿಬ್ಬಂದಿಗೆ ಪ್ರೊ. ಆರ್.ಶಿವಪ್ಪ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ಘಟನೆ ಸಂಬಂಧ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ  ಸೆಕ್ಷನ್ 124ಎ ಅಡಿಯಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲು ಮಾಡಲಾಗಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಮರಿದೇವಯ್ಯ ಹಾಗೂ ಇತರರ ವಿರುದ್ದ ಎಫ್​ಐಆರ್ ದಾಖಲಿಸಲಾಗಿದೆ.  ಸರ್ಕಾರದ ವಿರುದ್ದ ದ್ವೇಷ, ತಿರಸ್ಕಾರ ಹುಟ್ಟು ಹಾಕುವ ಪ್ರಯತ್ನ, ಪ್ರಚೋದನಾಕಾರಿ ನಾಮಫಲಕ ಪ್ರದರ್ಶನ ಆರೋಪದಡಿ ಎಫ್​ಐಆರ್ ದಾಖಲು ಮಾಡಲಾಗಿದೆ.

ಇದನ್ನು ಓದಿ: ಮುಂಬೈ ಆಯ್ತು ಮೈಸೂರು ವಿಶ್ವವಿದ್ಯಾಲಯದಲ್ಲೂ Free Kashmir ಕೂಗು

ಸಿಎಎ ವಿರುದ್ಧ ಹಾಗೂ ಜೆಎನ್​ಯು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ನೆನ್ನೆ ಸಂಜೆ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್), ಎಸ್​ಎಫ್​ಐ ಸಂಘಟನೆಗಳು ಹಾಗೂ ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಮೈಸೂರು ವಿವಿ ಆವರಣದಲ್ಲಿ ಪ್ರತಿಭಟನೆ ಆಯೋಜಿಸಿದ್ದವು. ವಿಶ್ವವಿದ್ಯಾಲಯದ ಕ್ಲಾಕ್ ಟವರ್ ಬಳಿಯಿಂದ ಕುವೆಂಪು ಪ್ರತಿಮೆಯವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಈ ವೇಳೆ, ಪ್ರತಿಭಟನಾಕಾರರ ಮಧ್ಯೆ ವಿದ್ಯಾರ್ಥಿನಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಫಲಕ ಹಿಡಿದು ನಿಂತಿದ್ದಳು. ಹಿಟ್ಲರ್ ವಿರುದ್ಧವೂ ಬರೆಯಲಾಗಿದ್ದ ಪೋಸ್ಟರ್​ಗಳು ಈ ಪ್ರತಿಭಟನೆಯಲ್ಲಿ ಕಂಡುಬಂದವು.
Published by: HR Ramesh
First published: January 9, 2020, 4:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories