ಕುಮಾರಸ್ವಾಮಿ ಸರ್ಕಾರದ ಮೊದಲ ಜಂಟಿ ಅಧಿವೇಶನ; ಸಾಲಮನ್ನಾ ಬಗ್ಗೆ ತುಟಿ ಬಿಚ್ಚದ ರಾಜ್ಯಪಾಲ ವಜುಭಾಯ್​ ವಾಲ

news18
Updated:July 2, 2018, 5:15 PM IST
ಕುಮಾರಸ್ವಾಮಿ ಸರ್ಕಾರದ ಮೊದಲ ಜಂಟಿ ಅಧಿವೇಶನ; ಸಾಲಮನ್ನಾ ಬಗ್ಗೆ ತುಟಿ ಬಿಚ್ಚದ ರಾಜ್ಯಪಾಲ ವಜುಭಾಯ್​ ವಾಲ
ಸಾಂದರ್ಭಿಕ ಚಿತ್ರ
  • News18
  • Last Updated: July 2, 2018, 5:15 PM IST
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು (ಜು.01): ಸಾಲಮನ್ನಾ ಕುರಿತು ಏನಾದರೂ ಸುಳಿವು ನೀಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಮೂಡಿಸಿದ್ದ ರಾಜ್ಯಪಾಲರ ಭಾಷಣ ಜನರಲ್ಲಿ ನಿರಾಸೆಯನ್ನು ಮೂಡಿಸಿದೆ. ಸರ್ಕಾರದ ಕಾರ್ಯಗಳ ಶ್ಲಾಘನೆ ಮಾಡಿ ಅರ್ಧಗಂಟೆಗಳ ಕಾಲ 19 ಪುಟಗಳ ಭಾಷಣ ಮಾಡಿದರು.

ಇಂದಿನಿಂದ 10 ದಿನಗಳ ಕಾಲ ಆರಂಭವಾಗಿರುವ ಮೈತ್ರಿ ಸರ್ಕಾರದ ಮೊದಲ ದಿನ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರಾದ ವಿ ಆರ್​ ವಾಲಾ ಮಾತನಾಡಿದರು.

ರೈತರ ಸಾಲಮನ್ನಾದ ಕುರಿತು ಎಲ್ಲಿಯೂ ಪ್ರಸ್ತಾಪ ಮಾಡದ ಅವರು, ರೈತರಿಗೆ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದರು. ರೈತರ, ಗ್ರಾಮೀಣ ಪ್ರದೇಶದ ಹಿತಕ್ಕೆ ನಮ್ಮ ಸರ್ಕಾರ ಬದ್ದವಾಗಿದ್ದು, ಅವರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಇನ್ನು ಕುಮಾರಸ್ವಾಮಿ ಕನಸಿನ ಕೂಸಾಗಿರುವ ಇಸ್ರೇಲ್​ ಮಾದರಿ ಕೃಷಿ ಪದ್ಧತಿ ಕುರಿತು ಪ್ರಸ್ತಾಪಿಸಿದ ಅವರು, ಈ ಪದ್ದತಿ ಜಾರಿಗೆ ಬರುವ ಮೂಲಕ ರೈತರಿಗೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.

ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಅವರು ಎಲ್ಲಿಯೂ ಕೂಡ ಸಾಲಮನ್ನಾ ಕುರಿತು ಗುಟ್ಟು ಬಿಟ್ಟುಕೊಡಲಿಲ್ಲ.ಕರ್ನಾಟಕವನ್ನು ನಂ 1 ಮಾಡುವ ಗುರಿ ಸರ್ಕಾರಕ್ಕೆ ಇದೆ. ಜನರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಸೇವೆ, ಶಿಕ್ಷಣ ಸೇವೆಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸಲಾಗುವುದು.ಇನ್ನು ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದ್ದು ಪ್ರತಿ ಜಿಲ್ಲಾಕೇಂದ್ರಗಳಲ್ಲಿ ನಿರ್ಭಯಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು.  ಪ್ರತಿತಾಲೂಕು ಕೇಂದ್ರಗಳಲ್ಲಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ ಜನರ ಆರೋಗ್ಯ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ಸರ್ಕಾರ ತೃಪ್ತಿಕರ ಕಾನೂನು ವ್ಯವಸ್ಥೆ ಕಾಯ್ದುಕೊಂಡಿದ್ದು, ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗುವುದುನಾಡಕಚೇರಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಡಿಜಿ ಲಾಕರ್​ ಅಳವಡಿಕೆ ಮಾಡಲಾಗುವುದು. ಹೈದ್ರಾಬಾದ್​ ಕರ್ನಾಟಕ ಪ್ರದೇಶ  ಅಭಿವೃದ್ಧಿ, ಅಲ್ಪಸಂಖ್ಯಾತ ಜನರಿರುವ ಪ್ರದೇಶಗಳ ಅಭಿವೃದ್ಧಿ ಸರ್ಕಾರ ಬದ್ಧ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು
First published:July 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading