ಎಲ್ಲದಕ್ಕೂ ಕಾಲ ಕೂಡಿಬಂದಿದೆ, ಬೆಳಗಾವಿ ಅಧಿವೇಶನದ ನಂತರ ಸರ್ಕಾರ ಬಿದ್ದೇ ಬೀಳುತ್ತೆ; ಸದಾನಂದ ಗೌಡ ವಿಶ್ವಾಸ

ಈಗಾಗಲೇ ಬೆಳಗಾವಿ ಮತ್ತು ಚಿಕ್ಕಬಳ್ಳಾಪುರದ ತೋಳಗಳು ಬಿಜೆಪಿಗೆ ಬಂದಾಗಿದೆ. ಅವು ಗುಹೆಯಿಂದ ಹೊರಬರುವವರೆಗೆ ಕಾಯಬೇಕು. ಬೆಳಗಾವಿ ಅಧಿವೇಶನದ ವೇಳೆಗೆ ಸರ್ಕಾರ ಉರುಳೋದು ಖಚಿತ ಎಂದು ಡಿವಿಎಸ್​ ಭವಿಷ್ಯ ನುಡಿದಿದ್ದಾರೆ.

sushma chakre | news18
Updated:December 5, 2018, 3:39 PM IST
ಎಲ್ಲದಕ್ಕೂ ಕಾಲ ಕೂಡಿಬಂದಿದೆ, ಬೆಳಗಾವಿ ಅಧಿವೇಶನದ ನಂತರ ಸರ್ಕಾರ ಬಿದ್ದೇ ಬೀಳುತ್ತೆ; ಸದಾನಂದ ಗೌಡ ವಿಶ್ವಾಸ
ಸದಾನಂದಗೌಡ
  • Advertorial
  • Last Updated: December 5, 2018, 3:39 PM IST
  • Share this:
ಧರಣೀಶ್​ ಬೂಕನಕೆರೆ

ನವದೆಹಲಿ (ಡಿ. 5): ಬೆಳಗಾವಿ ಅಧಿವೇಶನದವರೆಗೆ ಮಾತ್ರ ಈಗಿನ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರಲಿದೆ. ಅಧಿವೇಶನದ ವೇಳೆ ಸರ್ಕಾರ ಉರುಳುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿ ಅಧಿವೇಶನ ಪೂರ್ತಿ ಮುಗಿಯುವುದಿಲ್ಲ. ಅಷ್ಟರೊಳಗೆ ಸರ್ಕಾರ ಪತನವಾಗಿರುತ್ತದೆ. ಶಾಸಕರ ಒಂದು ತಂಡ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ. ಸರ್ಕಾರ ಅಲುಗಾಡುತ್ತಿದೆ ಎನ್ನುವುದು ಸತ್ಯ. ಅದರಲ್ಲಿ ಅನುಮಾನವೇ ಇಲ್ಲ. ಮುಂದೇನಾಗಲಿದೆ ಎಂಬುದನ್ನು ಅಧಿವೇಶದನವರೆಗೆ ಕಾದು ನೋಡಿ ಎಂದು ಕಾಂಗ್ರೆಸ್​-ಜೆಡಿಎಸ್​ ನಾಯಕರಿಗೆ ಶಾಕ್​ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿನ ಬದಲು ಸಗಣಿ ತುಂಬಿಕೊಂಡಿದೆ; ಈಶ್ವರಪ್ಪ ವಾಗ್ದಾಳಿ

ಬಿಜೆಪಿಯವರು ಆಪರೇಷನ್​ ಕಮಲ ಮೂಲಕ ಜೆಡಿಎಸ್​-ಕಾಂಗ್ರೆಸ್​ ಅತೃಪ್ತ ಶಾಸಕರನ್ನು ತಮ್ಮತ್ತ ಸೆಳೆಯಲು ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪಗಳು ಕೆಲ ದಿನಗಳಿಂದ ಹೆಚ್ಚಾಗಿ ಹೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಇಷ್ಟು ದಿನ 'ತೋಳ ಬಂತು ತೋಳ' ಎಂಬ ಕತೆಯಾಗಿತ್ತು.  ತೋಳ ಬಂತು ಎಂಬ ಕತೆಗೂ ತೋಳವೇ ಬರುವುದಕ್ಕೂ ಬಹಳ ವ್ಯತ್ಯಾಸವಿದೆ. ಈಗಾಗಲೇ ಬೆಳಗಾವಿ ಮತ್ತು ಚಿಕ್ಕಬಳ್ಳಾಪುರದ ತೋಳಗಳು ಬಂದಾಗಿದೆ. ಈಗಾಗಲೇ ಬಂದು ಗುಹೆಯಲ್ಲಿರುವ ತೋಳಗಳು ಹೊರಬರುವುದಷ್ಟೇ ಬಾಕಿಯಿದೆ. ಅದಕ್ಕೆ ಸ್ವಲ್ಪ ದಿನ ಕಾಯಬೇಕು ಎನ್ನುವ ಮೂಲಕ ಡಿವಿಎಸ್​ ರಾಜ್ಯ ಸರ್ಕಾರದ ನಾಯಕರಿಗೆ ತಲೆನೋವು ತಂದಿಟ್ಟಿದ್ದಾರೆ.

ಇದನ್ನೂ ಓದಿ: '6 ತಿಂಗಳಿನಿಂದ ಭೂಕಂಪ ಆಗ್ತಾನೇ ಇದೆ'; ಜಾವಡೇಕರ್ ಧಮಾಕಾ ಹೇಳಿಕೆಗೆ ಎಚ್ಡಿಕೆ ಸೇರಿ ಮೈತ್ರಿ ನಾಯಕರ ತಿರುಗೇಟು

ಕಾಲ ಕೂಡಿ ಬಂದಿದೆ:ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ಹೊಂದಾಣಿಕೆಯಿಲ್ಲ. ಒಬ್ಬರು ಒಂದು ಮಾತನಾಡಿದರೆ ಇನ್ನೊಬ್ಬರು ಇನ್ನೇನೋ ಹೇಳುತ್ತಾರೆ. 25 ಕೋಟಿ ರೂ. ಕೊಟ್ಟು ಆಪರೇಷನ್​ ಕಮಲ ಮಾಡುವ ಶಕ್ತಿ ಬಿಜೆಪಿಗಿಲ್ಲ. ಈಗಾಗಲೇ ತಾನಾಗೇ ತೋಳಗಳು ಬರತೊಡಗಿವೆ. ಈ ಬಾರಿ ಎಲ್ಲವೂ ಲಾಜಿಕಲ್ ಅಂತ್ಯ ಕಾಣಲಿದೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂಬ ಮಾತಿದೆ. ಆ ಮಾತಿನಂತೆ ಈಗ ಕಾಲ ಕೂಡಿಬಂದಿದೆ. ಶೀಘ್ರದಲ್ಲೇ  ಸರ್ಕಾರ ತಾನಾಗೇ ಬೀಳಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

  
First published:December 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ