ಮೈಸೂರು ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ಗೆ ಅಧಿಕೃತ ಆಹ್ವಾನ ನೀಡಿದ ಸರ್ಕಾರ

ಮೈಸೂರು ಅರಮನೆಯ ಖಾಸಗಿ ನಿವಾಸಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಾಲತಾ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಹಲವರು ರಾಜವಂಶಸ್ಥರಿಗೆ ಆಹ್ವಾನ ನೀಡಿದರು. ಇದೇ ಸಂದರ್ಭದಲ್ಲಿ ಪ್ರಮೋದಾದೇವಿ ಒಡೆಯರ್‌ಗೆ ಸನ್ಮಾನ ಮಾಡಿ, ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್​ ನೀಡಿದರು.

HR Ramesh | news18-kannada
Updated:September 23, 2019, 12:02 PM IST
ಮೈಸೂರು ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ಗೆ ಅಧಿಕೃತ ಆಹ್ವಾನ ನೀಡಿದ ಸರ್ಕಾರ
ಮೈಸೂರು ದಸರಾಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್​ಗೆ ಸರ್ಕಾರದ ವತಿಯಿಂದ ಆಹ್ವಾನ ನೀಡಿದ ಉಸ್ತುವಾರಿ ಸಚಿವ ವಿ.ಸೋಮಣ್ಣ.
  • Share this:
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ರಾಜಮನೆತನಕ್ಕೆ ರಾಜ್ಯ ಸರ್ಕಾರ ಇಂದು ಅಧಿಕೃತ ಆಹ್ವಾನ ನೀಡಿತು.

ಮೈಸೂರು ಒಡೆಯರ್​ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ಸರ್ಕಾರದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನ ನೀಡಿದರು.

ಮೈಸೂರು ಅರಮನೆಯ ಖಾಸಗಿ ನಿವಾಸಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಾಲತಾ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಹಲವರು ರಾಜವಂಶಸ್ಥರಿಗೆ ಆಹ್ವಾನ ನೀಡಿದರು. ಇದೇ ಸಂದರ್ಭದಲ್ಲಿ ಪ್ರಮೋದಾದೇವಿ ಒಡೆಯರ್‌ಗೆ ಸನ್ಮಾನ ಮಾಡಿ, ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್​ ನೀಡಿದರು.

ಇದನ್ನು ಓದಿ: ಮೈಸೂರು ದಸರಾ2019: ಸೆ.24ರಿಂದ ಅರಮನೆಯಲ್ಲಿ ರಾಜಮನೆತದಿಂದ ದಸರಾ ಕಾರ್ಯಕ್ರಮ ಆರಂಭ

ಬಳಿಕ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಸರ್ಕಾರದಿಂದ ಇವತ್ತು ನಮಗೆ ದಸರೆಗೆ ಆಹ್ವಾನ ಕೊಟ್ಟಿದ್ದಾರೆ. ಸರ್ಕಾರಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ. ಪ್ರತಿ ಬಾರಿಯು ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ. ನಮ್ಮ ಸಹಕಾರವನ್ನು ಅವರು ಕೇಳಿದ್ದಾರೆ. ನಾವು ಕೂಡ ಅವರ ಸಹಕಾರವನ್ನು ಕೇಳಿದ್ದೇವೆ. ಖಾಸಗಿ ದಸರಾ ಅರಮನೆ ಸಂಪ್ರದಾಯದಂತೆ ನಡೆಯುತ್ತದೆ. 22, 23ಕ್ಕೆ ಈ ಬಾರಿ ಖಾಸಗಿ ದಸರಾದ ವೇಳಾ ಪಟ್ಟಿ ನಿಗದಿಯಾಗಲಿದೆ. 24ರಿಂದ ನಮ್ಮ ಕಾರ್ಯಕ್ರಮಗಳು ಶುರುವಾಗಲಿದೆ. ಜಯಚಾಮರಾಜೇಂದ್ರ ಒಡೆಯರ್ ಅವರ ಶತಮಾನೋತ್ಸವವನ್ನು ಸರ್ಕಾರ ಮಾಡುತ್ತಿದೆ.
ಈ ವಿಚಾರದಲ್ಲಿ ನಾನು ಯಾವುದೇ ರೀತಿಯ ಸಲಹೆ ನೀಡುವ ಅಗತ್ಯ ಇಲ್ಲ. ದಸರಾ ಕಾರ್ಯಕ್ರಮಗಳ ವೇದಿಕೆಗೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡುವುದಾಗಿ ಹೇಳಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲೂ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ನಿರ್ಮಿಸುವುದಾಗಿ ಹೇಳಿದ್ದಾರೆ. ಹಾಗಾಗಿ ದಸರಾ ಕಾರ್ಯಕ್ರಮಗಳು ಎಲ್ಲವು ಚೆನ್ನಾಗೆ ನಡೆಯುತ್ತಿವೆ ಎಂದು ಹೇಳಿದರು.

First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ