news18-kannada Updated:December 29, 2020, 7:10 AM IST
ಗೋಕಾಕ್ ಫಾಲ್ಸ್
ಚಿಕ್ಕೋಡಿ(ಡಿಸೆಂಬರ್. 29): ರಾಜ್ಯದಲ್ಲಿ ಗಮನ ಸೆಳೆಯುವ ಎರಡೇ ಎರಡು ಜಲಪಾತಗಳು ಅಂದ್ರೆ ಅದು ಜೋಗ ಜಲಪಾತ. ಇನ್ನೊಂದು ಗೋಕಾಕ್ ಜಲಪಾತ ಸದ್ಯ ಗೋಕಾಕ್ ಫಾಲ್ಸ್ಗೆ ಸಂಬಂಧಪಟ್ಟ ಹಾಗೆ ಹೊಸ ಯೋಜನೆಯೊಂದು ರೂಪುಗೊಂಡಿದ್ದು, ಪೃಕೃತಿ ಪ್ರೀಯರಿಗೆ ಈ ಸುದ್ದಿ ಸಖತ್ ಖುಷಿ ಕೊಟ್ಟಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 350 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮತಿ ನೀಡಿದ್ದು, ಪ್ರಕೃತಿ ಪ್ರಿಯರಿಗೆ ಹೊಸ ಪ್ರವಾಸೋದ್ಯಮಕ್ಕೆ ಶಕ್ತಿ ತುಂಬಿದಂತಾಗಿದೆ. ಗೋಕಾಕ್ ಫಾಲ್ಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕೈಲಿ ಖಾರ ಖಾರವಾಗಿರುವ ಮಂಡಕ್ಕಿ ತಿಂತಾ ಕಲ್ಲು ಬಂಡೆಯ ಮೇಲಿಂದ ದುಮುಕುವ ನೀರನ್ನು ನೋಡುವುದೇ ಎಷ್ಟು ಚಂದ ಅಲ್ವಾ. ದೂರದಿಂದ ನೋಡಿ ಕಣ್ತುಂಬಿಕೊಂಡು ಖುಷಿಪಡುವ ಪ್ರಕೃತಿ ಪ್ರೇಮಿಗಳಿಗೆ ಸಧ್ಯ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿಯವರ ಸ್ವಂತ ಮತಕ್ಷೇತ್ರ ವ್ಯಾಪ್ತಿಗೆ ಬರುವ ಗೋಕಾಕ್ ಜಲಪಾತದ ಅಭಿವೃದ್ದಿಗೆ ಮನಸ್ಸು ಮಾಡಿದ್ದಾರೆ.
ಈಗಾಗಲೆ ಸರ್ಕಾರ ಫಾಲ್ಸ್ ಅಭಿವೃದ್ಧಿ ಕಾರ್ಯಕ್ಕೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೆ ಕೆಲಸ ಶುರು ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಹೇಳಿದ್ದಾರೆ.
ನಯಾಗಾರ ಫಾಲ್ಸ್ಗೆ ಹೋಲಿಕೆಯಾಗುವ ಗೋಕಾಕ್ ಜಲಪಾತಕ್ಕೆ ಈಗ ಕಾಯಕಲ್ಪ ಸಿಗುತ್ತಿದೆ. ಸುಮಾರು 350 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರ ಗಾಜಿನ ಸೇತುವೆ ನಿರ್ಮಾಣ ಮಾಡಲು ಮುಂದಾಗಿದೆ. ಅದೂ ಸಹ ನೀರು ದುಮ್ಮಿಕ್ಕುವ ಜಾಗದಿಂದ ಕೇವಲ 20 ರಿಂದ 30 ಮೀಟರ್ ಅಂತರದಲ್ಲಿ ಈ ಸೇತುವೆ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದು, ಇದು ಅಲ್ಲದೆ ಘಾಟ್ ನಿರ್ಮಾಣ ಹಾಗೂ ಯಾತ್ರಿ ನಿವಾಸ ನಿರ್ಮಿಸುವುದಾಗಿಯೂ ಸಚಿವ ರಮೇಶ್ ಜಾರಕಿಹೋಳಿ ಹೇಳಿದ್ದಾರೆ.
ಇನ್ನು ಈಗಾಗಲೆ ಜಲಪಾದ ಮೇಲೆ ಒಂದು ತಂತಿಯ ತೂಗು ಸೇತುವೆ ಇದ್ದು ತುಂಬಾ ಹಳೆಯದಾಗಿದೆ. 2019 ರಲ್ಲಿ ಬಂದ ಪ್ರವಾಹ ಸಂದರ್ಭದಲ್ಲಿ ಸಾಕಷ್ಟು ಹಾನಿ ಕೂಡ ಈ ಸೇತುಗೆ ಆಗಿತ್ತು. ಸದ್ಯ ಪ್ರವಾಸಿಗರಿಗೆ ಈ ಸೇತುವೆಯ ಸಂಚಾರವನ್ನ ಬಂದ್ ಮಾಡಲಾಗಿತ್ತು ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಬೇಸರ ಕೂಡ ಮುಡಿಸಿತ್ತು. ಬರುವ ಪ್ರವಾಸಿಗರು ದೂರದಿಂದಲೇ ಜಲಪಾತ ವೀಕ್ಷಣೆ ಮಾಡಿ ತೆರಳ ಬೇಕಾಗಿತ್ತು. ಆದರೆ, ಈ ಯೋಜನೆ ಪೂರ್ಣಗೊಂಡರೆ ಪ್ರವಾಸಿಗರು ಇನ್ನು ಮುಂದೆ ದೂರದ ಸೆಲ್ಫಿಗಿಂತ ನೀರು ಬೀಳುವ ಸನಿಹದಿಂದಲೇ ಸೆಲ್ಪಿ ಕ್ಲಿಕ್ಕಿಸಿಕೊಳ್ಳಬಹುದಾದಿದೆ.
ಒಟ್ಟಿನಲ್ಲಿ ತನ್ನ ನೈಸರ್ಗಿಕ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಲಪಾತಕ್ಕೆ ಈಗ ಗಾಜಿನ ಸೇತುವೆ ಮುಕುಟಮನಿಯಂತೆ ಸೇರುತ್ತಿರುವುದು ಪ್ರಕೃತಿ ಪ್ರೀಯರಲ್ಲಿ ಹೊಸ ಆಶಾಭಾವ ಹುಟ್ಟಿಸಿದೆ. ಹೀಗಾಗಿ ಸರ್ಕಾರ ಹಾಗೂ ಸಚಿವರು ಗಾಜಿನ ಸೇತುವೆ ಕೆಲಸ ಬೇಗ ಪ್ರಾರಂಭಿಸಲಿ ಎನ್ನುವುದು ಪ್ರಕೃತಿ ಪ್ರಿಯರಿಗೆ ಒತ್ತಾಯ.
Published by:
G Hareeshkumar
First published:
December 29, 2020, 7:10 AM IST