News18 India World Cup 2019

ಎಕರೆಗೆ ಕನಿಷ್ಠ 20 ಮರಗಳನ್ನು ನೆಡಲು ಕಡ್ಡಾಯ ಕಾನೂನು ತರಲು ಸರ್ಕಾರದ ಚಿಂತನೆ - ಸಚಿವ ವಿ.ಶಂಕರ್

news18
Updated:September 6, 2018, 3:12 PM IST
ಎಕರೆಗೆ ಕನಿಷ್ಠ 20 ಮರಗಳನ್ನು ನೆಡಲು ಕಡ್ಡಾಯ ಕಾನೂನು ತರಲು ಸರ್ಕಾರದ ಚಿಂತನೆ - ಸಚಿವ ವಿ.ಶಂಕರ್
ಬೆಂಗಳೂರಿನ ವಿಧಾನಸೌಧ
news18
Updated: September 6, 2018, 3:12 PM IST
- ಕೃಷ್ಣ ಜಿ.ವಿ, ನ್ಯೂಸ್ ಕನ್ನಡ

ಬೆಂಗಳೂರು ( ಸೆ. 06) :  ಒಂದು ಎಕರೆ ಜಮೀನಿನಲ್ಲಿ ಕನಿಷ್ಠ 20 ಮರಗಳನ್ನು ನೆಡುವ ಕಡ್ಡಾಯ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಅರಣ್ಯ ಸಚಿವ ವಿ.ಶಂಕರ್ ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಮಾತನಾಡಿದ ಸಚಿವರು ಈ ಕಾನೂನಿನಿಂದ ರೈತರಿಗೂ ಅನುಕೂಲವಾಗಲಿದೆ ಜತೆಗೆ ಹಸಿರೀಕರಣವೂ ಹೆಚ್ಚಾಗಲಿದೆ. ರಾಜ್ಯದಲ್ಲಿ ಹಸಿರು ಕರ್ನಾಟಕ ಯೋಜನೆಗೆ ರಾಜ್ಯಾದ್ಯಂತ 10 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದು ಹೇಳಿದರು.

ಹಿಂದೆ ಸರ್ಕಾರ  ವರದಿಯನ್ನು ವಿರೋಧಿಸಿತ್ತು 

ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಈ ಹಿಂದೆ ರಾಜ್ಯ ಸರಕಾರ ವಿರೋಧಿಸಿತ್ತು. ರಾಜ್ಯದ ವಿರೋಧವನ್ನು ಕೇಂದ್ರ ಸರಕಾರಕ್ಕೂ ತಿಳಿಸಲಾಗಿತ್ತು. ಆದರೆ  ಈಗ ಕೇಂದ್ರ ಸರಕಾರ ಮತ್ತೊಮ್ಮೆ ರಾಜ್ಯದ ನಿರ್ಧಾರ ಪರಿಶೀಲಿಸುವಂತೆ ಕೇಳಿದೆ.  ಹೀಗಾಗಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಮತ್ತೊಮ್ಮೆ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚೆ ನಡೆಸುತ್ತೇವೆ. ಎಂದು ತಿಳಿಸಿದರು.

ಪಿಒಪಿ ಗಣೇಶ ಮೂರ್ತಿಗಳ ಕಡಿವಾಣಕ್ಕೆ ಪ್ರಯತ್ನ - ಲಕ್ಷ್ಮಣ್
Loading...

ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಜನರಲ್ಲಿ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಮಾರಾಟಗಾರರ ಅಂಗಡಿಗಳ ಮೇಲೂ ದಾಳಿ ಮಾಡಲಾಗುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದರು. 

ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಪ್ರಯತ್ನ ಮುಂದುವರೆದಿದ್ದು,  ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸಲು ಅವಕಾಶ ಕೊಡಲ್ಲ. ಪೂಜೆ ಬಳಿಕ ಅವುಗಳನ್ನು ಬೇರೆಡೆ ವಿಸರ್ಜಿಸಲಾಗುತ್ತದೆ ಇದು ಧರ್ಮ ಸೂಕ್ಷ್ಮ ವಿಚಾರವಾಗಿದೆ ಎಂದು ಹೇಳಿದರು.

ಹಾಗಾಗಿ ಒಮ್ಮೆಲೆ ಪಿಒಪಿ ಗಣೇಶ ಮೂರ್ತಿಗಳ ಕಡಿವಾಣ ಕಷ್ಟ ಬೇರೆ ರಾಜ್ಯಗಳಿಂದ ಪಿಒಪಿ ಗಣೇಶ ಮೂರ್ತಿಗಳ ಸರಬರಾಜಿಗೂ ಜಿಲ್ಲಾ ಹಂತದಲ್ಲಿ ಕಡಿವಾಣ ಹಾಕಲಾಗುವುದು  ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

 

 
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...