ಬೆಂಗಳೂರು (ಫೆಬ್ರವರಿ 08); ಸಚಿವ ಆನಂದ್ ಸಿಂಗ್ ಅವರ ಮನವಿಗೆ ಕೊನೆಗೂ ಮನ್ನಣೆ ನೀಡಿರುವ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸ ವಿಜಯನಗರ ಜಿಲ್ಲೆಯನ್ನು ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಘೋಷಿಸಿದೆ. ಆ ಕುರಿತು ಅಧಿಕೃತ ಆದೇಶವನ್ನೂ ಸಹ ರಾಜ್ಯ ಸರ್ಕಾರ ಹೊರಡಿಸಿದೆ. ಹೊಸಪೇಟೆಯನ್ನು ಕಾರ್ಯಸ್ಥಾನವನ್ನಾಗಿಸಿ ವಿಜಯನಗರ ಎಂಬ ಹೊಸ ಜಿಲ್ಲೆಯನ್ನು ಘೋಷಿಸಬೇಕು ಎಂಬ ಕೂಗು ಬಹುದಿನಗಳಿಂದಲೂ ಇದೆ. ಕೊಪ್ಪಳವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ ಸಂದರ್ಭದಲ್ಲೇ ಈ ಕೂಗು ಜೋರಾಗಿ ಕೇಳಿ ಬಂದಿತ್ತು. ಹೋರಾಟಗಳೂ ಸಹ ನಡೆದಿದ್ದವು. ಆದರೆ, ಸರ್ಕಾರ ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಸಚಿವ ಆನಂದ್ ಸಿಂಗ್ ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಬಿಜೆಪಿ ಸೇರ್ಪಡೆಯಾಗಿದ್ದರು.
ಸಚಿವ ಆನಂದ್ ಸಿಂಗ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವಾಗಲೇ ಬಳ್ಳಾರಿಯನ್ನು ಒಡೆದು ವಿಜಯನಗರವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟೆ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಹೀಗಾಗಿ ಆನಂದ್ ಸಿಂಗ್ ಗೆ ಕೊಟ್ಟ ಮಾತಿನ ಮೇರೆಗೆ ಸಿಎಂ ಯಡಿಯೂರಪ್ಪ ಕೊನೆಗೂ ವಿಜಯನಗರ ಜಿಲ್ಲೆಯನ್ನು ಇಂದು ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ