ನೆರೆ ಸಂತ್ರಸ್ತರಿಗೆ ಬಂದ 21 ಕೋಟಿ ರೂ. ಪರಿಹಾರ ಹಣ ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಹಾಕಿಕೊಂಡ ಅಧಿಕಾರಿ

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಪರಿಹಾರ ಹಣವನ್ನು ಅಧಿಕಾರಿಯೊಬ್ಬ ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಬೆನ್ನಲ್ಲೇ ಆ ಅಧಿಕಾರಿಯನ್ನು ಅಮಾನತು ಮಾಡಿ ಸಚಿವರು ಆದೇಶಿಸಿದ್ದಾರೆ

news18-kannada
Updated:November 7, 2019, 12:52 PM IST
ನೆರೆ ಸಂತ್ರಸ್ತರಿಗೆ ಬಂದ 21 ಕೋಟಿ ರೂ. ಪರಿಹಾರ ಹಣ ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಹಾಕಿಕೊಂಡ ಅಧಿಕಾರಿ
ನೆರೆ ಸಂತ್ರಸ್ತರ ಸಾಂದರ್ಭಿಕ ಚಿತ್ರ
  • Share this:
ಮಡಿಕೇರಿ: ರಾಜ್ಯ ಕಂಡುಕೇಳರಿಯದ ಅತೀವೃಷ್ಟಿಗೆ ಈ ವರ್ಷ ಸಾಕ್ಷಿಯಾಗಿದೆ. ಸಾವಿರಾರು ಜನ ಮನೆ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಅಕ್ಷರಷಃ ಬೀದಿಗೆ ಬಂದಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಇದುವರೆಗೂ ಅಗತ್ಯವಿರುವಷ್ಟು ಪರಿಹಾರ ನೀಡಿಲ್ಲ. ಕೇವಲ ನೆಪಮಾತ್ರಕ್ಕೆ 1,200 ಕೋಟಿ ರೂ. ನೀಡುವ ಮೂಲಕ ಮೂಗಿಗೆ ತುಪ್ಪ ಸವರಿದೆ ಎಂಬ ಆರೋಪ ರಾಜ್ಯವ್ಯಾಪಿಯಾಗಿ ಕೇಳಿ ಬಂದಿತ್ತು. ಇದೆಲ್ಲದರ ನಡುವೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಪರಿಹಾರ ಹಣವನ್ನು ಅಧಿಕಾರಿಯೊಬ್ಬ ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. 

ಕೊಡಗಿನ ಜಿಲ್ಲಾ ಪಂಚಾಯತಿ ಕಾರ್ಯಪಾಲಕ ಇಂಜಿನಿಯರ್​ ಒಬ್ಬ ನೆರೆ ಪರಿಹಾರಕ್ಕೆಂದು ಬಂದ 21 ಕೋಟಿ ರೂ. ಹಣವನ್ನು ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಹಾಕಿಕೊಂಡಿದ್ದರು. ಶ್ರೀಕಂಠಯ್ಯ ಎಂಬುವವರೇ ಆ ಮಹಾನುಭಾವ. ಈ ಸುದ್ದಿ ತಿಳಿಯುತ್ತಲೇ ಪಂಚಾಯತ್​ ರಾಜ್​ ಸಚಿವ ಕೆ.ಎಸ್​. ಈಶ್ವರಪ್ಪ ಮತ್ತು ಮೈಸೂರು - ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಕ್ಷಣ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳಿಗೆ ಒಟ್ಟು 28 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಪೈಕಿ 21 ಕೋಟಿ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾ ಪಂಚಾಯಿತಿ ರಾಜ್ ಇಲಾಖೆಗೆ ಹಸ್ತಾಂತರಿಸಿ, ಬೇರೆ ಖಾತೆಯಲ್ಲಿ ಹಣ ಜಮೆ ಮಾಡುವಂತೆ ತಿಳಿಸಿದ್ದರು. ಇದಕ್ಕೆ ಕಾರ್ಯಪಾಲಕ ಇಂಜಿನಿಯರ್​ ಶ್ರೀಕಂಠಯ್ಯ ಅವರು ಕೋಟಕ್ ಮಹೇಂದ್ರ ಬ್ಯಾಂಕ್‌ನಲ್ಲಿರುವ ತಮ್ಮ ಖಾಸಗಿ ಖಾತೆಗೆ ಆ 21 ಕೋಟಿ ರೂ.ಗಳನ್ನು ಜಮೆ ಮಾಡಿದ್ದರು. ಆ ನಂತರ ಹಣವನ್ನು ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಅವರ ಖಾತೆಯಲ್ಲಿ 21 ಲಕ್ಷ ರೂ.ಗಳು ಮಾತ್ರ ಉಳಿದಿದೆ.

Government servant transfers 21 crore rupees flood relief fund to his personal bank account in Kodagu
ಅಮಾನತಾದ ಅಧಿಕಾರಿ ಶ್ರೀಕಂಠಯ್ಯ


ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅಲ್ಲಿ ಹಣ ಜಮೆ ಮಾಡುವುದಾದರೆ ಅದಕ್ಕೆ ಹಣಕಾಸು ಇಲಾಖೆ ಮತ್ತು ಜಿಲ್ಲಾಡಳಿತದ ಆಡಳಿತಾತ್ಮಕ ಅನುಮತಿ ಮತ್ತು ಅನುಮೋದನೆ ಪಡೆಯಬೇಕು. ಆದರೆ ಶ್ರೀಕಂಠಯ್ಯ, ಯಾವುದೇ ಅನುಮತಿ ಪಡೆಯದೇ ನಿಯಮವನ್ನು ಉಲ್ಲಂಘಿಸಿದ್ದರು. ಜತೆಗೆ ಖಾಸಗಿ ಖಾತೆಯಿಂದ ಸರ್ಕಾರಿ ಹಣವನ್ನು ವ್ಯವಹರಿಸುವುದು ಮತ್ತು ಸರ್ಕಾರಿ ಕಾಮಗಾರಿಗಳಿಗೆ ಬಳಕೆ ಮಾಡುವುದು ಕಾನೂನಿಗೆ ವಿರೋಧವಾಗಿದೆ.

ಇದನ್ನೂ ಓದಿ: ದೇವರಿಗೇ ಉಸಿರುಗಟ್ಟಿಸಿದ ಮಾಲಿನ್ಯ; ರಕ್ಷಣೆಗಾಗಿ ಮಾಸ್ಕ್​ ತೊಟ್ಟ ಭಗವಂತ

ಈ ವಿಚಾರವನ್ನು ಮೊದಲಿಗೆ ಬೆಳಕಿಗೆ ತಂದಿದ್ದ ಜಿಲ್ಲಾ ಪಂಚಾಯತ್​ ಸದಸ್ಯ ಶಿವು ಮಾದಪ್ಪ ತನಿಖೆಗೆ ಒತ್ತಾಯಿಸಿದ್ದರು. ಇದಕ್ಕೆ ಪಕ್ಷಾತೀತ ಬೆಂಬಲ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಲಕ್ಷಿಪ್ರಿಯ ಅವರು ಮುಖ್ಯ ಲೆಕ್ಕಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ತನಿಖೆಯ ಸಂದರ್ಭ ಅಧಿಕಾರಿ ಶ್ರೀಕಂಠಯ್ಯ, ಕೋಟಕ್ ಮಹೇಂದ್ರ ಬ್ಯಾಂಕಿನಲ್ಲಿ ಒಟ್ಟು 21 ಕೋಟಿ ರೂ.ಗಳನ್ನು ಜಮೆ ಮಾಡಿರುವುದು ಕಂಡು ಬಂದಿತ್ತು. ಜತೆಗೆ ಜಿಲ್ಲಾಡಳಿತ ಮತ್ತು ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಜಮೆ ಮಾಡಿರುವುದು ಸಾಬೀತಾಗಿತ್ತು.ಇದನ್ನೂ ಓದಿ: ಜಾತಿಯೇ ಮುಳ್ಳಾಯಿತು ಬದುಕಿಗೆ; ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಬರ್ಬರ ಕೊಲೆ
First published: November 7, 2019, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading