ಯಾರೋ‌ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಪರಿಹಾರ ಹೆಚ್ಚಳ ಮಾಡೋದಕ್ಕೆ ಆಗಲ್ಲ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಅನ್ಯಾಯವಾಗಿದ್ದರೇ ಮೇಲಧಿಕಾರಿಗಳ ಗಮನಕ್ಕೆ ತರಬೇಕಿತ್ತು. ನೆರೆಯಿಂದ ಮನೆ ಕಳೆದುಕೊಂಡ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಇರುತ್ತದೆ. ವಿಕಲಚೇತನ ಹಾಗೂ ಸಾಮಾನ್ಯರು ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಅನ್ವಯವಾಗುತ್ತವೆ. 50 ಸಾವಿರ ಕಡಿಮೆ ಆಗಿದ್ದರೆ ಅದಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಬಹುದಿತ್ತು ಎಂದು ಜೋಶಿ ಹೇಳಿದರು.

news18-kannada
Updated:February 22, 2020, 6:44 PM IST
ಯಾರೋ‌ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಪರಿಹಾರ ಹೆಚ್ಚಳ ಮಾಡೋದಕ್ಕೆ ಆಗಲ್ಲ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ.
  • Share this:
ಧಾರವಾಡ; ಇತ್ತೀಚೆಗೆ ರಮೇಶ ಜಾರಕಿಹೊಳಿ ನನ್ನ ಭೇಟಿ ಕೂಡ ಆಗಿದ್ದಾರೆ. ಯಾವುದೇ ಉಹಾಪೋಹಗಳಿಗೆ ಅರ್ಥವಿಲ್ಲ. ಪಕ್ಷಕ್ಕೆ ಬದ್ಧರಾಗಿ ಇರುವುದಾಗಿ ನಮಗೆ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ‌ ಜೋಶಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿ.ಟಿ. ರವಿ ಕ್ಯಾಸಿನೋ ಆರಂಭ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಯಾವ ಹಿನ್ನೆಲೆಯಲ್ಲಿ ಅವರು ಹಾಗೇ ಹೇಳಿದ್ದಾರೆ ಗೊತ್ತಿಲ್ಲ. ನೀರಾ ಬಾರ್‌ ನಂತಹ ಹೊಸ ಚಟ ಹಚ್ಚಿಸುವ ಕೆಲಸ ಮಾಡಬಾರದು. ಕ್ಯಾಸಿನೋ ನಮ್ಮಲ್ಲಿ ಬರೋದು ಬೇಡ. ಅದು ಗೋವಾದಲ್ಲಿ ಇರಲಿ.  ಪ್ರವಾಸೋದ್ಯಮಕ್ಕಾಗಿ ಯಾರನ್ನೂ ಚಟಗಾರರನ್ನಾಗಿ ಮಾಡಬಾರದು. ನಾನು ಅವರಿಗೆ ತಿಳಿವಳಿಕೆ ಹೇಳುವೆ ಎಂದರು.

ನೆರೆ ಪರಿಹಾರ ಸಿಗದ ಕಾರಣಕ್ಕೆ ಧಾರವಾಡದಲ್ಲಿ ವಿಕಲಚೇತನ ಯುವತಿ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಜೋಶಿ, ಮಹಿಳೆ ಆತ್ಮಹತ್ಯೆ ಬಗ್ಗೆ ನನಗೂ ಅನುಕಂಪ‌ ಇದೆ. ಆ ರೀತಿ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಅನ್ಯಾಯವಾಗಿದ್ದರೇ ಮೇಲಧಿಕಾರಿಗಳ ಗಮನಕ್ಕೆ ತರಬೇಕಿತ್ತು. ನೆರೆಯಿಂದ ಮನೆ ಕಳೆದುಕೊಂಡ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಇರುತ್ತದೆ. ವಿಕಲಚೇತನ ಹಾಗೂ ಸಾಮಾನ್ಯರು ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಅನ್ವಯವಾಗುತ್ತವೆ. 50 ಸಾವಿರ ಕಡಿಮೆ ಆಗಿದ್ದರೆ ಅದಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಬಹುದಿತ್ತು. ಆದರೆ, ಸಾಯುವಂತಹ ಮಹಾಪ್ರಮಾದಕ್ಕೆ ಮುಂದಾಗಬಾರದಿತ್ತು. ಯಾರೋ‌ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಪರಿಹಾರ ಹೆಚ್ಚಳ ಮಾಡೋದಕ್ಕೆ ಆಗೋದಿಲ್ಲ. ಇದರಿಂದ ಅಧಿಕಾರಿಗಳು ಹೆದರಿ ಕೆಲಸ ಮಾಡಬೇಕಾಗುತ್ತದೆ.  ಎಲ್ಲ ರೀತಿಯ ಅನುಕಂಪ ವ್ಯಕ್ತಪಡಿಸಿ ನಾನು ಈ ರೀತಿ ಹೇಳುತ್ತಿದ್ದೇನೆ ಎಂದು ಹೇಳಿದರು.

ಇದನ್ನು ಓದಿ: ಮಡಿವಂತರಂತೆ ಮಾತನಾಡುವವರು ವಿದೇಶಕ್ಕೆ ಹೋಗಿ ಕ್ಯಾಸಿನೊದಲ್ಲಿ ದುಡ್ಡು ಸುರಿಯುತ್ತಾರೆ: ಸಿಟಿ ರವಿ

ಸಿಎಎ ಇಟ್ಟುಕೊಂಡು ಒಂದು ಕೋಮಿನ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.  ಇದರಿಂದ ಪಾಕ್ ಜಿಂದಾಬಾದ್ ಅಂದರೂ ನಡೆಯುತ್ತೆ ಅನಿಸುತ್ತಿದೆ. ನಕ್ಸಲ್‌ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ತೃಣಮೂಲ ಕಾಂಗ್ರೆಸ್ ನಕ್ಸಲ್ ಜೊತೆ ಹೊಂದಾಣಿಕೆ ಮಾಡಿಕೊಂಡೇ ಚುನಾವಣೆ ಗೆದ್ದಿದೆ. ಇದೇ ಕಾರಣಕ್ಕೆ ಡಿಕೆಶಿಯಂತಹವರು ಇದನ್ನು ಬೆಂಬಲಿಸಿರಬೇಕು. ಪಾಕ್‌ ಜಿಂದಾಬಾದ್ ಎನ್ನುವವರನ್ನು ಈಗ ಯಾರೂ ಮುಕ್ತವಾಗಿ ಬೆಂಬಲಿಸುತ್ತಿಲ್ಲ ಎಂದು ಟೀಕಿಸಿದರು.
First published:February 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ