6ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಿದ್ಧವಿದೆ; ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ; ಡಿಸಿಎಂ ಲಕ್ಷ್ಮಣ್ ಸವದಿ

6ನೇ ವೇತನ ಪರಿಷ್ಕರಣೆ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ಜಾರಿಗೆ ತರುವ ನಿರ್ಣಯ ಹಂತದಲ್ಲಿದ್ದೇವೆ. ಅಲ್ಲದೇ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಚಿತ್ರದುರ್ಗ(ಮಾ.22):  ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ 6ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಿದ್ಧವಿದೆ. ಯಾವುದೇ ಕಾರಣಕ್ಕೂ ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆ ಸರ್ಕಾರದ ಆಲೋಚನೆಯಲ್ಲಿ ಇಲ್ಲ. 6ನೇ ವೇತನ ಪರಿಷ್ಕರಣೆ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ಜಾರಿಗೆ ತರುವ ನಿರ್ಣಯ ಹಂತದಲ್ಲಿದ್ದೇವೆ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ  ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗೇಟ್ ಬಳಿಯ ಕೆಎಸ್​ಆರ್​​ಟಿಸಿ ಚಾಲಕರ ತರಬೇತಿ ಕೆಂದ್ರ,ಹಾಗೂ ಬಸ್ ಘಟಕ ಶಂಕು ಸ್ಥಾಪನೆ ಉದ್ಘಾಟನೆ ಮಾಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡಿಸಿಎಂ, ದೇಶದಲ್ಲಿ ಪ್ರತಿವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಚಾಲಕರಿಗೆ ಉತ್ತಮ ತರಬೇತಿ ನೀಡಿದರೆ ಅಪಘಾತ ಸಂಖ್ಯೆ ಕಡಿಮೆಯಾಗಲು ಅನುಕೂಲವಾಗಲಿದೆ. ಚಾಲಕರ ತರಬೇತಿ ಕೇಂದ್ರಗಳನ್ನು ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮಾಡಲಾಗಿದೆ ಎಂದು ಹೇಳಿದರು.

ಕೊರೋನಾದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಹಳಷ್ಟು ತೊಂದರೆಯಾಯಿತು. ಅದರಲ್ಲೂ ವಿಶೇಷವಾಗಿ ಸಾರಿಗೆ ಇಲಾಖೆಗೆ ಹೆಚ್ಚಿನ ತೊಂದರೆಯಾಯಿತು. ಎರಡು ತಿಂಗಳು ಲಾಕ್‍ಡೌನ್ ನಿಂದ ಬಸ್ ಸಂಚಾರ ಸ್ಥಗಿತಕೊಂಡು ತೀವ್ರ ಸಂಕಷ್ಟ ಎದುರಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

Nail Free Tree - ‘ಮೊಳೆಮುಕ್ತ ಮರ’ ಅಭಿಯಾನ; ಬೆಂಗಳೂರು ಹುಡುಗರಿಂದ ಕಾಲ್ನಡಿಗೆ ಜಾಥಾ

ಅಲ್ಲದೇ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ನಾಲ್ಕು ನಿಗಮಗಳಲ್ಲಿ, 1.30ಲಕ್ಷ ಸಿಬ್ಬಂದಿ ಇದ್ದಾರೆ. ಇಲಾಖೆ ವತಿಯಿಂದ ಒಂದು ವರ್ಷಕ್ಕೆ ನಾಲ್ಕು ಸಾವಿರ ಕೋಟಿ ಆದಾಯದ ನಿರೀಕ್ಷೆ ಇತ್ತು. ಇದು ಸಂಪೂರ್ಣ ನಿಂತು ಹೋಯಿತು. ಸುಮಾರು ಮೂರು ಸಾವಿರ ಕೋಟಿಯಷ್ಟು ಹಾನಿ ಅನುಭವಿಸಬೇಕಾಯಿತು. ಅಂತಹ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿಯವರು ಆತಂಕಕ್ಕೆ ಒಳಗಾದರು. ಆದರೆ ಸರ್ಕಾರದ ವತಿಯಿಂದ ರೂ.1900 ಕೋಟಿ ಹಣ ಪಡೆದು ಎಲ್ಲಾ ಸಿಬ್ಬಂದಿಗಳಿಗೆ ಒಂದು ರೂಪಾಯಿಯನ್ನು ಕಡಿತ ಮಾಡದಂತೆ ವೇತನ ನೀಡಿದ್ದೇವೆ, ಆದರೆ ಕೊರೊನಾ ನಂತರದ ದಿನಗಳಲ್ಲಿ ಇಲಾಖೆಗೆ ಬರುವಂತಹ ಆದಾಯವು ಇಂಧನ ಮತ್ತು ಸಂಬಂಳಕ್ಕೂ ಸರಿದೂಗುತ್ತಿಲ್ಲ ಎಂದರು.

ಇನ್ನು, ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾದ 6ನೇ ವೇತನ ಆಯೋಗ ಜಾರಿಗೆ ಸರ್ಕಾರ ಸಿದ್ಧವಿದೆ. ಯಾವುದೇ ಕಾರಣಕ್ಕೂ ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. 6ನೇ ವೇತನ ಪರಿಷ್ಕರಣೆ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ಜಾರಿಗೆ ತರುವ ನಿರ್ಣಯ ಹಂತದಲ್ಲಿದ್ದೇವೆ. ಅಲ್ಲದೇ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇಲಾಖೆಯ ನಾಲ್ಕು ನಿಗಮಗಳನ್ನು ಇನ್ನಷ್ಟು ಸದೃಢ ಮಾಡುವ ಅಗತ್ಯವಿದೆ. ನಿಗಮದ ನೌಕರರು ಯಾರು ಕೂಡ ಆತಂಕಕ್ಕೆ ಒಳಗಾಗಬಾರದು.ಮುಂದಿನ ದಿನಮಾನಗಳಲ್ಲಿ ನಾಲ್ಕು ನಿಗಮಗಳನ್ನು ಹಾನಿಯಿಂದ ಹೊರಗಡೆ ತಂದು ಲಾಭದಾಯಕ ನಿಗಮಗಳನ್ನಾಗಿ ಮಾಡುವುದರ ಜೊತೆಗೆ ಸಾರಿಗೆ ನೌಕರರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
Published by:Latha CG
First published: