Vijayapura ಜಿಲ್ಲೆಯ ಎರಡು ತಾಲ್ಲೂಕುಗಳ ಮರು ಸೇರ್ಪಡೆಗೆ ಸರ್ಕಾರ ಆದೇಶ

Vijayapura: ಇದೀಗ ಎರಡೂ ಗ್ರಾಮಗಳನ್ನು ವಿಜಯಪುರ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶಕ್ಕೆ ಶಾಸಕ ಎಂಬಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.  ಸಧ್ಯ ಗೋವಾ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿರುವ ಎಂಬಿ‌ ಪಾಟೀಲ್, ಗೋವಾದಿಂದಲೇ ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಜಯಪುರ ಜಿಲ್ಲೆ (Vijayapura District) ಬಬಲೇಶ್ವರ ತಾಲ್ಲೂಕಿನ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮ ವಿಜಯಪುರ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಲು ಸರ್ಕಾರ (Government) ಆದೇಶ ನೀಡಿದ್ದು, ತಾಲ್ಲೂಕಿನ ಜನರಿಗೆ ಸಂತಸ ನೀಡಿದೆ. ಈ‌ ಹಿಂದೆ ವಿಜಯಪುರ ತಾಲ್ಲೂಕಿನಲ್ಲಿದ್ದ ಗ್ರಾಮಗಳನ್ನು ಕ್ಷೇತ್ರ ವಿಂಗಡಣೆ ಬಳಿಕ ಬಬಲೇಶ್ವರ ತಾಲೂಕಿಗೆ ಸೇರ್ಪಡೆ ಮಾಡಲಾಗಿತ್ತು, ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.  ಆದರೆ, ಸರ್ಕಾರದ ಈ ನಿರ್ಧಾರದಿಂದಾಗಿ ಎರಡೂ ಗ್ರಾಮಗಳ ಜನರಿಗೆ ತೊಂದರೆಯಾಗಿತ್ತು. ತಮ್ಮ ದೈನಂದಿನ ಕಚೇರಿ ಕೆಲಸಗಳಿಗಾಗಿ ಬಬಲೇಶ್ವರಕ್ಕೆ ತೆರಳಲು ಅನಾನುಕೂಲವಾಗಿತ್ತು. ವಿಜಯಪುರ ನಮಗೆ ಹತ್ತಿರವಾಗಲಿದ್ದು, ನಮ್ಮನ್ನು ವಿಜಯಪುರ ತಾಲ್ಲೂಕಿನಲ್ಲೇ ಮುಂದುವರೆಸುವಂತೆ ಮನವಿಯನ್ನು ಕೂಡ ಮಾಡಿದ್ದರು.

ಇದೀಗ ಎರಡೂ ಗ್ರಾಮಗಳನ್ನು ವಿಜಯಪುರ ತಾಲ್ಲೂಕಿಗೆ ಮರು ಸೇರ್ಪಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶಕ್ಕೆ ಶಾಸಕ ಎಂಬಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.  ಸಧ್ಯ ಗೋವಾ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿರುವ ಎಂಬಿ‌ ಪಾಟೀಲ್, ಗೋವಾದಿಂದಲೇ ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜನರ ಹೊಟ್ಟೆ ಮೇಲೆ ತಣ್ಣೀರು ಹಾಕಿದೆ ಈ ಬಜೆಟ್ - HDK ಕಿಡಿ

ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇ,  ಸರ್ಕಾರ ಜನರ ಆಶಯದಂತೆ ಈ ಗ್ರಾಮಗಳನ್ನು ಮರಳಿ ವಿಜಯಪುರಕ್ಕೆ ಸೇರಿಸಿದ್ದು, ನಿಜಕ್ಕೂ ಸಂತೋಷವಾಗಿದೆ ಎಂದಿದ್ದಾರೆ. ದಿ. 30.09.2021ರಂದು ಕಂದಾಯ ಸಚಿವ ಆರ್. ಅಶೋಕ ಅವರನ್ನು ಭೇಟಿ ಮಾಡಿ, ಅವರಿಗೆ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲ್ಲೂಕಿನಿಂದ ಬೇರ್ಪಡಿಸಿ, ಈ ಹಿಂದೆ ಇದ್ದಂತೆ ವಿಜಯಪುರ ತಾಲ್ಲೂಕಿನಲ್ಲಿಯೇ ಮುಂದುವರೆಸುವಂತೆ ಪತ್ರ ಬರೆದು, ಕೋರಿದ್ದೆ. ಕಂದಾಯ ಸಚಿವ ಆರ್.ಅಶೋಕ ಅವರೊಂದಿಗೆ ಚರ್ಚಿಸಿ, ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೆ, ಈ ಸಮಸ್ಯೆಯನ್ನು ಮನದಟ್ಟು ಮಾಡಿದ ಪರಿಣಾಮ ಇಂದಿನ ಈ ಆದೇಶ ಹೊರಬಂದಿದೆ ಎಂದಿದ್ದಾರೆ.

ಹೊನಗನಹಳ್ಳಿ ಗ್ರಾಮಗಳು ನೂತನವಾಗಿ ರಚನೆಯಾದ ಬಬಲೇಶ್ವರ ತಾಲ್ಲೂಕಿನಲ್ಲಿ ಸೇರ್ಪಡೆಯಾಗಿರುತ್ತವೆ. ಹೊನಗನಹಳ್ಳಿ ಮತ್ತು ಸವನಹಳ್ಳಿ ಎರಡೂ ಗ್ರಾಮಗಳು ಕೂಡಿ ಹೊನಗನಹಳ್ಳಿ ಗ್ರಾಮ ಪಂಚಾಯತಿಕೇಂದ್ರಸ್ಥಾನವಾಗಿರುತ್ತದೆ. ಎರಡೂ ಗ್ರಾಮಗಳೂ ಅಕ್ಕಪಕ್ಕದಲ್ಲಿದ್ದು, ಅಂದಾಜು ಸಾವಿರ ಜನಸಂಖ್ಯೆಹೊಂದಿರುತ್ತವೆ.

ಹೊನಗನಹಳ್ಳಿಯಿಂದ ವಿಜಯಪುರ ನಗರವು 17ಕಿ.ಮೀ ದೂರ ಇದೆ, ಅದೇ ಬಬಲೇಶ್ವರತಾಲ್ಲೂಕು ಕೇಂದ್ರವು 37ಕಿ.ಮೀ ದೂರವಾಗುತ್ತಿದೆ. ಪ್ರತಿಯೊಂದು ತಾಲ್ಲೂಕಿನ ಸೌಲಭ್ಯಗಳನ್ನು ಪಡೆಯಬೇಕಾದರೆ 37ಕಿ.ಮೀ ಸಂಚಾರ ಮಾಡಬೇಕು.

ಸೌಲಭ್ಯ ಪಡೆಯಲು ಈ ಎರಡೂ ಗ್ರಾಮಸ್ಥರಿಗೆ ಬಹಳ ತೊಂದರೆಯಾಗಿದ್ದು, ಎರಡೂ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಹಲವು ಬಾರಿ ಹೋರಾಟ ಮಾಡಿ ಮನವಿಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದರೂ ಸಹ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.ಇದನ್ನೂ ಓದಿ: ಮಾಜಿ ಸಂಸತ್ ಸದಸ್ಯ,ಕಾಂಗ್ರೆಸ್​ ಮುಖಂಡ H.B. Patil ಹೃದಯಾಘಾತದಿಂದ ನಿಧನ

ಆದರೆ ಈಗ ಸದರಿ ಗ್ರಾಮಗಳನ್ನುಸಾರ್ವಜನಿಕ ಹಿತದೃಷ್ಟಿಯಿಂದ ನೂತನ ಬಬಲೇಶ್ವರ ತಾಲ್ಲೂಕಿನಿಂದ ಬೇರ್ಪಡಿಸಿ ವಿಜಯಪುರ ತಾಲ್ಲೂಕಿನಲ್ಲಿಯೇಮೊದಲಿನಂತೆ ಸೇರ್ಪಡಿಸಿ ಮುಂದುವರೆಸಿದರೆ ಗ್ರಾಮಸ್ಥರಿಗೆ ತಾಲ್ಲೂಕಿನಲ್ಲಿ ಸಿಗುವ ಮೂಲಭೂತ ಸೌಲಭ್ಯಗಳನ್ನುಪಡೆಯಲು ಅನುಕೂಲವಾಗುತ್ತದೆ ಮತ್ತು ಸೂಕ್ತವಾಗಿರುತ್ತದೆ ಎಂದು ಈ ನಿರ್ಧಾರ ಮಾಡಲಾಗಿದೆ.
Published by:Sandhya M
First published: