ಕೆಲಸ ಮಾಡದ ಅಧಿಕಾರಿಗಳಿಗೆ ಚಾಟಿ ಬೀಸಿದ ಗೌಡರು; ರೋಹಿಣಿ ಸಿಂಧೂರಿ ಸೇರಿದಂತೆ ಹಲವರಿಗೆ ಫುಲ್​ ಕ್ಲಾಸ್​

news18
Updated:September 4, 2018, 4:48 PM IST
ಕೆಲಸ ಮಾಡದ ಅಧಿಕಾರಿಗಳಿಗೆ ಚಾಟಿ ಬೀಸಿದ ಗೌಡರು; ರೋಹಿಣಿ ಸಿಂಧೂರಿ ಸೇರಿದಂತೆ ಹಲವರಿಗೆ ಫುಲ್​ ಕ್ಲಾಸ್​
news18
Updated: September 4, 2018, 4:48 PM IST
-ಅಶೋಕ್​​, ನ್ಯೂಸ್​ 18 ಕನ್ನಡ

ಹಾಸನ,(ಸೆ.04): ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಪ್ರಥಮ ಬಾರಿಗೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ  ನೇತೃತ್ವದಲ್ಲಿ ಆಡಳಿತ ಯಂತ್ರಕ್ಕೆ ಚುರುಕು ನೀಡಲಾಯಿತು. ದೇವೇಗೌಡರು, ಜಿಲ್ಲೆಯ ಎಲ್ಲಾ ಶಾಸಕರೂ ಅಧಿಕಾರಿಗಳ ವಿರುದ್ದ ಆರೋಪಗಳ ಸುರಿಮಳೆ ಗೈದರು. ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ನೀಡಿದ್ದಾರೆ.

ಹಾಸನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಎಚ್​. ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ(ದಿಶಾ) ಯಲ್ಲಿ ಸಚಿವ ರೇವಣ್ಣ ಹಾಗೂ ಶಾಸಕರು ಅಧಿಕಾರಿಗಳಿಗೆ ಫುಲ್​ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಸನ ಅಂದರೆ ಮಾಜಿ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳ ಹುಟ್ಟೂರಾಗಿದೆ.  ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈಗಾಗಲೇ ನೆರೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಸಮರ್ಪಕವಾಗಿ ಸಾರ್ವಜನಿಕರಿಗೆ ಎಲ್ಲಾ ಸವಲತ್ತು ತಲುಪುವಂತೆ ಮಾಜಿ ಪ್ರಧಾನಿ ದೇವೇಗೌಡರು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಕೆಲಸ ಮಾಡದ ಅಧಿಕಾರಿಗಳಿಗೆ ಚಾಟಿ ಬೀಸಿದ  ಸಚಿವ ಎಚ್​.ಡಿ.ರೇವಣ್ಣ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಸನ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು  ಕಿಡಿಕಾರಿದ್ದಾರೆ. ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್​ ಇಂಜಿನಿಯರ್​ಗೆ 'ಹೇ, ನೀನು ಇರೋದಾದ್ರೆ ಇರು, ಇಲ್ಲಾಂದ್ರೆ ಬೇರೆ ಕಡೆ ಹೋಗು' ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನೀರು ಸರಬರಾಜು ನೈರ್ಮಲ್ಯ ಇಲಾಖೆ ವಿರುದ್ದ ಎಲ್ಲಾ ಶಾಸಕರು ಆರೋಪಿಸಿದ್ದಾರೆ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿಯೂ ಸಹ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಸಚಿವರು ಮತ್ತು ಶಾಸಕರ ತರಾಟೆಗೆ ತಬ್ಬಿಬ್ಬಾದ ಅಧಿಕಾರಿಗಳು ತಬ್ಬಿಬ್ಬಾದರು.

ಇನ್ನೂ ಮಳೆಯ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲವೆಂದು ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅರಸೀಕೆರೆಯಲ್ಲಿ ಮಳೆ ಬಾರದಿದ್ದರೂ ಉತ್ತಮ ಮಳೆಯಾಗಿದೆ ಎಂದು ಗಣಿ ಹಾಗೂ ಭೂ ವಿಜ್ಞಾನಿ ಅಧಿಕಾರಿಣಿ ಸುಧಾ ಮಾಹಿತಿ ನೀಡಿದ್ದಾರೆ. ಮಳೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎಂದು ಸುಧಾರ ಮೇಲೆ ಕಿಡಿಕಾರಿದ್ದಾರೆ. ನಿಮ್ಮಂಥ ಅಧಿಕಾರಿಗಳು ಇರುವುದರಿಂದ ದೇಶ ಹಾಳಾಗಿದೆ. ಮಳೆ ಬೀಳದಿದ್ದರೂ ಅಂತರ್ಜಲ ಹೇಗಿರುತ್ತದೆ? ನಿಮಗೆ ಸಾಮಾನ್ಯ ಜ್ಞಾನವಿಲ್ಲವೇ? ಎಂದು ಅಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಚಾಟಿ ಬೀಸಿದ್ದಾರೆ.

ಇತ್ತ ಕೃಷಿ ಇಲಾಖೆ ಅಧಿಕಾರಿ ಮಧುಸೂದನ್,​ ಅರಸೀಕೆರೆಯಲ್ಲಿ 23 ಸಾವಿರ ಹೆಕ್ಟೇರ್​​​​ನಲ್ಲಿ ಬಿತ್ತನೆ ಆಗಿದೆ ಎಂಬ ಮಾಹಿತಿ ನೀಡಿದ್ದಕ್ಕೆ, ನೀವು ಹೇಳುವ ಮಾಹಿತಿ ನಿಜವಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬನ್ನಿ ಸ್ಥಳಕ್ಕೆ ಈಗಲೇ ಹೋಗೋಣ, ಎಲ್ಲಿ ಬಿತ್ತನೆ ಮಾಡಿಸಿದ್ದಿರಾ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಶಾಸಕರ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಕೃಷಿ ಅಧಿಕಾರಿ ತಡವಡಿಸಿದ್ದಾರೆ.

ಇನ್ನೂ ಅರಣ್ಯ ಇಲಾಖೆ ಡಿಎಫ್​ಓ ಸಿವರಾಮ್​ ಬಾಬು ವಿರುದ್ಧ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಕಿಡಿಕಾರಿದ್ದಾರೆ. ಟ್ರ್ಯಾಕ್ಟರ್ ಹಾಗೂ ಎತ್ತಿನ ಗಾಡಿಯಲ್ಲಿ ಸೌದೆ ಸಾಗಾಣಿಕೆ ಮಾಡುವ ರೈತರ ಮೇಲೆ ಪ್ರಕರಣ ದಾಖಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ದಕ್ಷತೆ ಇದ್ದರೆ ಕಾಡಿನಲ್ಲಿ ಮರ ಕಡಿಯುವ ಕಳ್ಳರನ್ನು ಹಿಡಿಯಿರಿ. ತಂಬಾಕು ಬೇಯಿಸುವ ರೈತರಿಗೆ ಕಿರುಕುಳ ನೀಡುತ್ತಿದ್ದೀರಾ.. ಮತ್ತೆ ಅರಣ್ಯ ಸಿಬ್ಬಂದಿಗಳ ಕಿರುಕುಳ ಮುಂದುವರೆದರೆ ನಾನು ಸುಮ್ಮನಿರಲ್ಲ ಎಂದು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ಡಿಎಫ್​ಓ ಯಾವುದೇ ಉತ್ತರ ನೀಡದೆ, ಸ್ವಲ್ಪ ಸಮಯದ ಬಳಿಕ ತಮ್ಮ ಕಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸುವುದಾಗಿ ಸಮಜಾಯಿಷಿ ನೀಡಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ