ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕೇರಳ ಸರ್ಕಾರದ ನಿಯೋಗ

ಇದೀಗ ಮಂಗಳೂರು ಸಹಜ ಸ್ಥಿತಿಗೆ ಮರಳಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ತೆರಳಿ ಪೊಲೀಸರ ಗುಂಡೇಟಿಗೆ ಬಲಿಯಾದ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ ಬೆನ್ನಿಗೆ ಕೇರಳ ಸರ್ಕಾರದ ನಿಯೋಗವೂ ಸಹ ಮಂಗಳೂರಿಗೆ ಆಗಮಿಸಿದೆ.

ಮಂಗಳೂರಿಗೆ ಆಗಮಿಸಿರುವ ಕೇರಳ ಸರ್ಕಾರದ ನಿಯೋಗ.

ಮಂಗಳೂರಿಗೆ ಆಗಮಿಸಿರುವ ಕೇರಳ ಸರ್ಕಾರದ ನಿಯೋಗ.

  • Share this:
ಮಂಗಳೂರು (ಡಿಸೆಂಬರ್ 23); ಮಂಗಳೂರಿನಲ್ಲಿ ಪೊಲೀಸರ ಗೋಲಿಬಾರ್ಗೆ ಬಲಿಯಾದ ನೌಶಿನ್ ಮತ್ತು ಜಲೀಲ್ ಮನೆಗೆ ಇಂದು ಕೇರಳ ಸರ್ಕಾರದ ನಿಯೋಗ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. 

ಕಳೆದ ಗುರುವಾರ ರಾಜ್ಯಾದ್ಯಂತ ಆರಂಭವಾದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಮಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ನಗರದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆ ಕರ್ಫ್ಯೂ ವಿಧಿಸಿತ್ತು. ಆದರೆ, ಇದನ್ನೂ ಮೀರಿ ಪ್ರತಿಭಟನೆಗೆ ಮುಂದಾಗಿದ್ದ ಇಬ್ಬರು ಯುವಕರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಈ ಪ್ರಕರಣದ ನಂತರ ಇಡೀ ಮಂಗಳೂರು ಪ್ರಕ್ಷುಬ್ಧತೆಗೆ ಸಿಲುಕಿತ್ತು.

ಇದೀಗ ಮಂಗಳೂರು ಸಹಜ ಸ್ಥಿತಿಗೆ ಮರಳಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ತೆರಳಿ ಪೊಲೀಸರ ಗುಂಡೇಟಿಗೆ ಬಲಿಯಾದ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದ ಬೆನ್ನಿಗೆ ಕೇರಳ ಸರ್ಕಾರದ ನಿಯೋಗವೂ ಸಹ ಮಂಗಳೂರಿಗೆ ಆಗಮಿಸಿದೆ.

ಮಂಗಳೂರಿಗೆ ಆಗಮಿಸಿರುವ ನಾಲ್ವರು ಶಾಸಕರು ಮತ್ತು ಇಬ್ಬರು ಸಂಸದರನ್ನೊಳಗೊಂಡ ಕೇರಳದ ನಿಯೋಗ ಮೃತ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ : ಕೇಂದ್ರದ ನೂತನ ಮಸೂದೆಗೆ ಕೆಂಡವಾದ ಭಾರತ; ಏನಿದು ಪೌರತ್ವ ತಿದ್ದುಪಡಿ ಮಸೂದೆ? ಜನಾಕ್ರೋಶಕ್ಕೆ ಕಾರಣವೇನು? ಇಲ್ಲಿದೆ ಡೀಟೈಲ್ಸ್
Published by:MAshok Kumar
First published: