ಬೆಂಗಳೂರು: ಕೋವಿಡ್ ಮೊದಲನೇ ಅಲೆ (Corona First Wave) ಬಂದಾಗ ಅದನ್ನು ಹೇಗೆ ಟ್ರೀಟ್ ಮಾಡಬೇಕು ಅಂತ ಯಾರಂದ್ರೆ ಯಾರಿಗೂ ಗೊತ್ತಿರಲಿಲ್ಲ. ಆದರೆ 2ನೇ ಅಲೆ (Second Wave) ಅಷ್ಟೊತ್ತಿಗೆ ಟ್ರೀಟ್ಮೆಂಟ್ ಹಾಗೂ ವ್ಯಾಕ್ಸಿನ್ (Corona Vaccine) ಲಭ್ಯವಿದ್ರೂ ಕೋವಿಡ್ನ ಅಬ್ಬರ ತಾರಕಕ್ಕೇರಿತ್ತು. ಆಗ ಖಾಸಗಿ ಆಸ್ಪತ್ರೆಗಳ ಸಹಾಯವನ್ನ ಸರ್ಕಾರ (Government) ಪಡೆದುಕೊಂಡಿತ್ತು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈ ಜೋಡಿಸಿತ್ತು. ಆಗ ನೀಡಿದ್ದ ಚಿಕಿತ್ಸೆಯ ಹಣವನ್ನು (Treatment Bill) ಇಂದಿಗೂ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ (Private Hospital) ನೀಡಿಲ್ಲ ಅನ್ನೋದೇ ವಿಪರ್ಯಾಸ.
ಬರಬೇಕಿದೆ ಕೋಟಿ ಕೋಟಿ ಬಾಕಿ
ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಕೋಟಿ ಕೊಟ್ರೂ ಸೋಂಕಿತರ ಚಿಕಿತ್ಸೆಗೆ ಬೆಡ್ಗಳು ಸಿಗುತ್ತಿರಲಿಲ್ಲ. ಹೀಗಿರೋವಾಗ ಸರ್ಕಾರ ಖಾಸಗಿ ಆಸ್ಪತ್ರೆಗಳ ಸಹಾಯ ಹಸ್ತ ಕೋರಿತ್ತು. ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು ಬೆಡ್ಗಳನ್ನು ಲೆಕ್ಕ ಹಾಕಿತ್ತು. ಕೆಲ ಬೆಡ್ಗಳನ್ನು ಆಸ್ಪತ್ರೆಯ ಖೋಟಾದಲ್ಲೇ ಚಿಕಿತ್ಸೆ ನೀಡಲು ಹಾಗೂ ಉಳಿದ ಬೆಡ್ಗಳನ್ನು ಸರ್ಕಾರದ ಖೋಟಾದಲ್ಲೂ ದಾಖಲು ಮಾಡಿಕೊಳ್ಳುವಂತೆ ಸೂಚಿಸಿತ್ತು.
ಚಿಕಿತ್ಸೆಯ ವೆಚ್ಚದ ಭಾಗವನ್ನು ಸರ್ಕಾರ ಭರಿಸೋದಾಗಿ ತಿಳಿಸಿತ್ತು. ಇದರ ಅನ್ವಯ ನಗರದಲ್ಲಿರೋ ಅಷ್ಟೂ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಖೋಟಾದಡಿ ಚಿಕಿತ್ಸೆ ನೀಡಿತ್ತು. ಆದ್ರೆ ಚಿಕಿತ್ಸೆ ನೀಡಿ ವರ್ಷಗಳಾಗ್ತಾ ಬಂದಿದ್ರೂ ಇಂದಿಗೂ ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಬಿಲ್ ಬಿಡುಗಡೆ ಆಗಿಲ್ಲ.
ಸರ್ಕಾರ, ಆರೋಗ್ಯ ಸಚಿವರ ಮುಂದೆ ಬೇಡಿಕೆಯಿಟ್ಟ PHANA
ಇನ್ನು ಬಾಕಿ ಇರೋ ಬಿಲ್ಗಳನ್ನು ಕ್ಲಿಯರ್ ಮಾಡಿ ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ (Private Hospitals & Nursing Homes Association) ಸರ್ಕಾರ ಹಾಗೂ ಆರೋಗ್ಯ ಸಚಿವರ ಮುಂದೆ ಬೇಡಿಕೆ ಇರಿಸಿದೆ.
ಒಂದೋ ಎರಡೋ ಕೋಟಿಯಾಗಿದ್ರೆ ಪರವಾಗಿಲ್ಲ. ಆದ್ರೆ ಸರ್ಕಾರದಿಂದ ನಗರದಲ್ಲಿರೋ ಖಾಸಗಿ ಆಸ್ಪತ್ರೆಗಳಿಗೆ ಬರೋಬ್ಬರಿ 150 ಕೋಟಿ ರೂಪಾಯಿಗೂ ಅಧಿಕ ಬಾಕಿ ಬಿಲ್ ಬರಬೇಕಿದೆ. ಇದು ಸಣ್ಣಪುಟ್ಟ ಆಸ್ಪತ್ರೆಗಳ ಪಾಲಿಗೆ ತೀವ್ರ ಪೆಟ್ಟಾಗಿ ಪರಿಣಮಿಸಿದೆ.
ಬಿಲ್ ಪಾವತಿಗೆ ವಿಳಂಬ ಯಾಕೆ?
ಕೆಲ ನರ್ಸಿಂಗ್ ಹೋಂಗಳು ಇಂದಿಗೂ ಆರ್ಥಿಕ ಹೊಡೆತದಿಂದ ಕುಂಟುತ್ತಿದೆ ಎನ್ನಲಾಗಿದೆ.
ದಾಖಲೆಗಳಲ್ಲಾಗಿರೋ ಸಣ್ಣ ಪುಟ್ಟ ಎಡವಟ್ಟುಗಳು, ಪ್ರಿಂಟಿಂಗ್ ಎರರ್ಗಳು, ಫೈಲಿಂಗ್ ಫಾರ್ಮಾಟ್ನಲ್ಲಾಗಿರೋ ದೋಷಗಳನ್ನು ಮುಂದಿಟ್ಟು ಸರ್ಕಾರ ಇಂದಿಗೂ ಬಿಲ್ ರಿಲೀಸ್ ಮಾಡಿಲ್ಲ ಎಂದು ತಿಳಿದು ಬಂದಿದೆ.
ಬಿಲ್ ಕ್ಲಿಯರ್ ಮಾಡಲು ಆಸ್ಪತ್ರೆಗಳ ಆಗ್ರಹ
ಹೀಗಿರುವಾಗಲೇ ಕೋವಿಡ್ 4ನೇ ಅಲೆಯ ಭೀತಿ ಈಗಾಗಲೇ ಎದುರಾಗಿದ್ದು, ಸರ್ಕಾರಕ್ಕೆ ನಾವು ಸಾಥ್ ನೀಡಬೇಕು ಅಂದ್ರೆ ಮೊದಲು ಬಿಲ್ ಕ್ಲಿಯರ್ ಮಾಡಿ ಅಂತ ಒಂದಿಷ್ಟು ಆಸ್ಪತ್ರೆಗಳು ಡಿಮ್ಯಾಂಡ್ ಮಾಡಿವೆ. ಅದೇನೇ ಇರಲಿ, ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವಿನ ಹಗ್ಗಜಗ್ಗಾಟದಿಂದ ಜನರಿಗೆ ಸಮಸ್ಯೆ ಆಗದಿರಲಿ ಅನ್ನೋದೇ ನಮ್ಮ ಆಶಯ.
ಇದನ್ನೂ ಓದಿ: Corona Virus: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ? ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ
ಆರೋಗ್ಯ ಮಂತ್ರಿಗಳ ಕೋವಿಡ್ ಸಭೆ
ಭಾರತಕ್ಕೆ ಕೊರೊನಾ ಭೀತಿ ಎದುರಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಕೂಡಾ ಟಫ್ ರೂಲ್ಸ್ ಮಾಡಿವೆ. ಸಾಧ್ಯವಾದಷ್ಟು ಮಾಸ್ಕ್ ಧರಿಸಿ ಎನ್ನುತ್ತಿವೆ. ಇತ್ತ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು.
ಆರೋಗ್ಯ ಮಂತ್ರಿ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾ ತಡೆ ಹೇಗೆ? ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅಂತ ಚರ್ಚೆ ನಡೀತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ