Hijab v/s ಕೇಸರಿ ಸಮರದ ನಡುವೆ ಹೀಗೊಂದು ಚರ್ಚೆ: 197 ಜಾತಿಗಳಿಗೆ ಈಗಲೂ ಸಿಗುತ್ತಿಲ್ಲ ಸರ್ಕಾರಿ ಸೌಲಭ್ಯ!

ಸುಮಾರು 197 ಜಾತಿಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ ಎನ್ನಲಾಗಿದೆ. ಅನಾದಿಕಾಲದಿಂದ ಬೆಳೆದು ಉಳಿದಿರುವ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆ ಹಾಗೂ ತಾರತಮ್ಯವನ್ನು ಅಳಿಸಲು ಈ ಮೀಸಲಾತಿ, ಸೌಲಭ್ಯಗಳು ಈ ಜಾತಿಗಳಿಗೂ ಬೇಕಾಗಿದೆ. ಆದರೆ ಆ ಮುಗ್ಧ ಜನರಿಗೆ ತಮ್ಮ ಹಕ್ಕುಗಳೇನು ಎನ್ನುವುದೇ ತಿಳಿದಿಲ್ಲ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಒಂದೆಡೆ ಕಾಲೇಜುಗಳಲ್ಲಿ (College) ಸಮವಸ್ತ್ರ (Uniform) ಬಿಟ್ಟು, ಧಾರ್ಮಿಕ ಉಡುಪಿನ (Religious Dress) ಬಗ್ಗೆ ಭಾರೀ ವಿವಾದಗಳಾಗುತ್ತಿವೆ. ಮತ್ತೊಂದೆಡೆ ಜಾತಿ-ಜಾತಿಗಳ (Caste) ನಡುವೆ, ಧರ್ಮ-ಧರ್ಮಗಳ ನಡುವೆ ಒಡಕು ಮೂಡುತ್ತಿದೆ. ಇಂತಹ ಹೊತ್ತಿನಲ್ಲೇ ಸರ್ಕಾರದಿಂದ (Government) ಮೀಸಲಾತಿಗಾಗಿ (Reservation) ಕೆಲವು ಜಾತಿ, ಸಮುದಾಯಗಳು (Community) ಹೋರಾಟದ ಎಚ್ಚರಿಕೆ ನೀಡಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಅದೆಷ್ಟೋ ಜಾತಿಗಳಿಗೆ ತಮ್ಮ ತಮ್ಮ ಜಾತಿ ಯಾವುದು, ಸಮುದಾಯ ಯಾವುದು, ಸರ್ಕಾರದಿಂದ ನಮಗೆ ಏನೇನು ಸೌಲಭ್ಯ (Facility) ಸಿಗುತ್ತವೆ ಎನ್ನುವುದೇ ಗೊತ್ತಿಲ್ಲವಂತೆ. ಈ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ ಓದಿ…

ಕರ್ನಾಟಕದಲ್ಲಿ ಇರುವುದು ಬರೋಬ್ಬರಿ 1236 ಜಾತಿಗಳು!

ಸರ್ಕಾರದ ಅಧಿಕೃತ ದಾಖಲೆಯ ಪ್ರಕಾರ ಕರ್ನಾಟಕದಲ್ಲಿ ಬರೋಬ್ಬರಿ 1,216 ಜಾತಿಗಳಿವೆ ಎನ್ನಲಾಗಿದೆ. ಹಿಂದೂಗಳಲ್ಲಿ ಮಾತ್ರ ಹಲವು ಜಾತಿಗಳಿವೆ ಎಂಬ ನಂಬಿಕೆ ಇದುವರೆಗೆ ಸಾಮಾನ್ಯವಾಗಿತ್ತು. ಆದರೆ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳಲ್ಲೂ ನೂರಾರು ಜಾತಿ, ಉಪ ಜಾತಿಗಳನ್ನು ಗುರುತಿಸಲಾಗಿದೆ. ಹಿಂದೂಗಳಲ್ಲಿ ಕಾಣುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ವರ್ಗೀಕರಣದಲ್ಲೂ ಹಲವು ಉಪ ಜಾತಿಗಳಿವೆ.

ಸರಕಾರದ ಹಲವು ಸೌಲಭ್ಯ ಪಡೆಯಲು ಜಾತಿ ಶ್ರೇಣೀಕರಣದಲ್ಲಿ ಮೇಲಿರುವ ಕೆಲ ಜಾತಿಗಳು, ಕೆಳಗಿನ ಸಾಲು ಸೇರಲು ಮುಂದಾಗಿವೆ. ಸರಕಾರ, ಜಾತಿ ಆಧರಿಸಿ, ಸೌಲಭ್ಯ ನೀಡಲು ತೊಡಕಾಗಿದೆ. ನಿರ್ದಿಷ್ಟ ಸಂಖ್ಯೆಯ ಜಾತಿಗಳು ಲಭ್ಯವಾಗದೇ ಇರುವುದು ಈ ಗೊಂದಲಕ್ಕೆ ಕಾರಣವಾಗಿದೆ.

197 ಜಾತಿಗಳಿಗೆ ಸಿಕ್ಕಿಲ್ಲ ಮಾನ್ಯತೆ

ಭಾರತದಲ್ಲಿ ಅದೆಷ್ಟೋ ಜಾತಿ, ಸಮುದಾಯ, ಧರ್ಮಗಳಿವೆ. ಒಂದೊಂದು ಪ್ರದೇಶದಲ್ಲೂ ಅನೇಕ ಬೇರೆ ಬೇರೆ ಜಾತಿಗಳು ಕಂಡು ಬರುತ್ತದೆ. ಕರ್ನಾಟಕದಲ್ಲೂ ಸುಮಾರು 197 ಜಾತಿಗಳಿಗೆ ಇನ್ನೂ ಸರ್ಕಾರದ ಮಾನ್ಯತೆ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಈ ಸಮುದಾಯಗಳಿಗೆ ಯಾವುದೇ ಸೌಲಭ್ಯಗಳೂ ಸಹ ಸಿಗದಂತಾಗಿದೆ.

ಪ್ರಮುಖವಾಗಿ ಹಿಂದುಳಿದ ವರ್ಗಗಳಲ್ಲಿ 197 ಮುಖ್ಯ ಜಾತಿಗಳು ಮತ್ತು 550 ಉಪಜಾತಿಗಳಿವೆ. ಇವುಗಳಲ್ಲಿ ಕುರುಬ, ದೇವಾಡಿಗ, ಬಲಿಜ, ಈಡಿಗ, ರಜಪೂತ್‌, ಹಿಂದೂಸಾದರು, ಗಾಣಿಗ, ಕ್ಷತ್ರಿಯ, ಅರಸು, ತಿಗಳ, ರಾಮಕ್ಷತ್ರಿಯ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ, ಪದ್ಮಸಾಲಿ, ಗೊಲ್ಲ, ಮೊಗವೀರ, ಮರಾಠಾ, ಉಪ್ಪಾರ, ಕುರುಹಿನಶೆಟ್ಟಿ, ಭಾವಸಾರಕ್ಷತ್ರಿಯ, ಹಾಲಕ್ಕಿ ಒಕ್ಕಲ್, ಕುಂಬಾರ, ಮಡಿವಾಳ, ಸವಿತಾ ಮತ್ತು ದೇವಾಂಗ ಸಮುದಾಯಗಳಿಗಷ್ಟೇ ಸೌಲಭ್ಯಗಳು ಸಿಗುತ್ತಿದ್ದು, ಇನ್ನು ಉಳಿದ ಜಾತಿಗಳಿಗೆ ಯಾವುದೇ ಸೌಲಭ್ಯ ಇಲ್ಲದಾಗಿದೆ.

ಇದನ್ನೂ ಓದಿ:  CM Meeting: ಸೋಮವಾರದಿಂದ ಶಾಲೆ ಓಪನ್, ಅಹಿತಕರ ಘಟನೆ ನಡೆಯದಂತೆ ಹೈ ಅಲರ್ಟ್​, ಸಿಎಂ ಸೂಚನೆ

ಹಿಂದುಳಿದ ವರ್ಗಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿರುವ ಸತಾನಿ, ತಮ್ಮಡಿ, ಹೆಳವ, ದೊಂಬಿದಾಸ, ಗೋಣಿಗಮನ, ಗೋಂಧಳಿ, ಖಾಟಿಕ್, ಕಣಿಯಾ, ರಾಜಪುರಿ ಮುಂತಾದ ಇನೂ ನೂರಾರು ಜಾತಿಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ.

ಸರ್ಕಾರದಿಂದ ಮೀಸಲಾತಿ ನೀಡುವಂತೆ ಮನವಿ

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಗಿದೆ. 2022ರ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳ  ಪ್ರತಿಯೊಂದು ಅಭಿವೃದ್ದಿ ನಿಗಮಗಳಿಗೆ ಹೆಚ್ಚಿನ ಮೊತ್ತದ ಅನುದಾನ ನೀಡುವಂತೆ  ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಇದೇ ಫೆಬ್ರವರಿ 9, 2022ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ  ಭೇಟಿ ಮಾಡಿ ಮನವಿ ಸಲ್ಲಿಸಿತು.

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸದಂತೆ ಮನವಿ

ಇದೇ ವೇಳೆ ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸಬಾರದು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕು. ಹೆಚ್. ಕಾಂತರಾಜ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಜಾರಿಗೊಳಿಸಬೇಕು, ಸುಭಾಷ್ ಅಡಿ ಸಮಿತಿಯನ್ನು ರದ್ದು ಪಡಿಸಬೇಕು. ಹಿಂದುಳಿದ ವರ್ಗಗಳ ಕೇಂದ್ರ ಸರ್ಕಾರದ ಮೀಸಲಾತಿ  ಪಟ್ಟಿಗೆ ಕರ್ನಾಟಕದ 70 ಜಾತಿ - ಉಪಜಾತಿಗಳನ್ನು  ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯ್ತು.

ಇದನ್ನೂ ಓದಿ: Hijab controversy: ರಾಜ್ಯಾದ್ಯಂತ ಫೆ.16ರ ವರೆಗೆ ಕಾಲೇಜಿಗೆ ರಜೆ ವಿಸ್ತರಣೆ, ಉನ್ನತ ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ಮನವಿಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದನೆ

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಹಿಂದುಳಿದ ವರ್ಗದ ಆಯೋಗ ವರದಿ ನೀಡುವ ತನಕ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಮ್. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
Published by:Annappa Achari
First published: