ಹುಬ್ಬಳ್ಳಿ - ದೇಶದೆಲ್ಲೆಡೆ ಅಮೃತ ಮಹೋತ್ಸವ (Azadi Ka Amrit Mahotsava) ಸಂಭ್ರಮ ಇದ್ದು, ಮನೆ ಮನೆಯ ಮೇಲೂ ತಿರಂಗ ಹಾರಾಡುತ್ತಿದೆ. ಆದರೆ ಸ್ವಾತಂತ್ರ್ಯ ಸೇನಾನಿಗಳನ್ನು (Freedom Fighters) ಮಾತ್ರ ಕೇಳೋರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರ ಸ್ಮಾರಕಗಳನ್ನು ಕೇಳುವವರೇ ಇಲ್ಲದಂತಾಗಿದೆ. 14ನೇ ವಯಸ್ಸಿಗೆ ಬ್ರಿಟಿಷರ ಗುಂಡೇಟಿಗೆ ಬಲಿಯಾದ ನಾರಾಯಣ ಡೋಣಿ ಸ್ಮಾರಕ ಹುಬ್ಬಳ್ಳಿಯಲ್ಲಿ (Hubballi) ಅನಾಥವಾಗಿದೆ. ಇದೇ ವೇಳೆ ಬಿಜೆಪಿ ನಾಯಕರೊಬ್ಬರು (BJP leader) ರಾಷ್ಟ್ರಧ್ವಜಕ್ಕೆ (National Flag) ಅಪಮಾನ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದೇಶದೆಲ್ಲೆಡೆ ಅಮೃತ ಮಹೋತ್ಸವ ಸಂಭ್ರಮ ಮನೆಮಾಡಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನ ನಾವು ನೆನಪು ಮಾಡಿಕೊಳ್ಳುವ ಸುಸಮಯವಾಗಿದೆ. ಆದ್ರೆ ಸ್ವಾತಂತ್ರ್ಯ (Independence Day) ಸಿಗಲು ಪ್ರಾಣ ತೆತ್ತವರನ್ನೇ ನಮ್ಮ ಸರ್ಕಾರ ಮರೆತಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಾತಂತ್ರ್ಯ ಸೇನಾನಿಗೆ ಘೋರ ಅಪಮಾನ ಮಾಡಿದ ಆರೋಪ ಕೇಳಿಬಂದಿದೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಲಕ್ಷಾಂತರ ಜನರು ಹೋರಾಡಿ, ಪ್ರಾಣಾರ್ಪಣೆಗೈದಿದ್ದಾರೆ. ಆದ್ರೆ, ಲಕ್ಷಾಂತರ ಹೋರಾಟಗಾರರಲ್ಲಿ ಬಾಲಕರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ. ಇವರಲ್ಲಿ ಹುಬ್ಬಳಿಯ ನಾರಾಯಣ ಮಹದೇವ ಡೋಣಿ ಕೂಡ ಒಬ್ಬರಾಗಿದ್ದಾರೆ. ಬಾಲ ಹೋರಾಟಗಾರನ ಮೂರ್ತಿ ವ್ಯಾಪಾರ ವಸ್ತುಗಳ ಮಧ್ಯೆ ಕಣ್ಮರೆಯಾಗಿದೆ.
ಗುಂಡೇಟಿಗೆ ಬಲಿಯಾದಾಗ 14 ವರ್ಷ
ಇನ್ನೊಂದೆಡೆ, ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ನಿರ್ಮಿಸಲಾದ ವೀರ ಸ್ಮಾರಕವು ಮಹಾನಗರ ಪಾಲಿಕೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ನಾರಾಯಣ ಡೋಣಿ ಅವರು ಬ್ರಿಟಿಷರ್ ಗುಂಡೇಟಿಗೆ ಬಲಿಯಾದಾಗ ಅವರ ವಯಸ್ಸು ಕೇವಲ 14 ವರ್ಷಗಳಿದ್ದವು. ಇವರು ಹುಬ್ಬಳಿಯವರೇ ಎನ್ನುವುದು ಉತ್ತರ ಕರ್ನಾಟಕದ ಜನರಿಗೆ ದೊಡ್ಡ ಹೆಮ್ಮೆ.
ಇದನ್ನೂ ಓದಿ; Independence Day: ಚಿತ್ರದುರ್ಗ ಈ ಗ್ರಾಮದಲ್ಲಿರೋ ಮಹಾತ್ಮ ಗಾಂಧೀಜಿ ದೇಗುಲದಲ್ಲಿ ನಿತ್ಯ ನಡೆಯುತ್ತೆ ಪೂಜೆ
ಇಂಥ ವೀರ ಬಾಲಕನ ಸ್ಮರಣೆಗಾಗಿ ನಗರದ ಕಲಾದಗಿ ಓಣಿಯ ಬ್ರಾಡ್‌ವೇದಲ್ಲಿ 2000 ರಲ್ಲಿ ಮೂರ್ತಿ ನಿರ್ಮಾಣ ಮಾಡಲಾಗಿದೆ. ನಾರಾಯಣ ಡೋಣಿಯ ಚರಿತ್ರೆ ಪಠ್ಯದಲ್ಲಿಯೂ ಅಳವಡಿಕೆ ಮಾಡಲಾಗಿದೆ.
ಅಂಗಡಿಗಳ ಮಧ್ಯೆ ಮುಚ್ಚಿ ಹೋದ ಮೂರ್ತಿ
ಬ್ರಾಡ್ ವೇದಲ್ಲಿನ ಮೂರ್ತಿಯು ಅಂಗಡಿಗಳ ಮಧ್ಯೆ ಮುಚ್ಚಿ ಹೋಗಿದೆ. ಮೂರ್ತಿಯ ಹಿಂಭಾಗ ಮುಂಭಾಗ ಅಂಗಡಿಗಳ ಭರಾಟೆ ಜೋರಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಅನತಿ ದೂರದಲ್ಲಿ ನಿರ್ಮಿಸಿರುವ ವೀರ ಸ್ಮಾರಕ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.
ಸ್ಮಾರಕ ಸುತ್ತಲೂ ಅಳವಡಿಸಿರುವ ಕಬ್ಬಿಣದ ಗ್ರಿಲ್ ಗಳಲ್ಲಿ ಒಂದು ಭಾಗ ಕಿತ್ತು ಹೋಗಿದೆ. ಹಲವು ವರ್ಷಗಳಿಂದ ಹೀಗೆಯೇ ಇದ್ದು, ಪಾಲಿಕೆಯ ಅಧಿಕಾರಿಗಳು ನಿತ್ಯವೂ ಇದರ ಮುಂದೆಯೇ ಓಡಾಡುತ್ತಿದ್ದರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಸ್ಮಾರಕವನ್ನು ಹಲವು ವರ್ಷಗಳಿಂದ ಶುಚಿಗೊಳಿಸಿಲ್ಲ. ಮಹಾತ್ಮ ಗಾಂಧೀಜಿ ಕರೆಯ ಮೇರೆಗೆ 1942ರಲ್ಲಿ ಜರುಗಿದ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ಸ್ಮಾರಕ ಅಭಿವೃದ್ಧಿಗೆ ಒತ್ತಾಯ
ನಾರಾಯಣ ಡೋಣಿ ಅಂದು ಬ್ರಿಟಷ್ ಪೊಲೀಸರ ಬೆದರಿಕೆಗೆ ಬಗ್ಗದೇ ಕೆಚ್ಚೆದೆಯಿಂದ ಹೋರಾಟದಲ್ಲಿ ಮುನ್ನುಗ್ಗಿದ್ದರು. ಆಗಸ್ಟ್ 9 ರಂದು ನಾರಾಯಣ ಅವರು ಹೋರಾಟದಲ್ಲಿ ತೊಡಗಿದ್ದಾಗ ಬ್ರಿಟಿಷರು ಹಾರಿಸಿದ ಗುಂಡಿಗೆ ನಾರಾಯಣ ಡೋಣಿ ಹುತಾತ್ಮರಾಗಿದ್ದರು. ಸರ್ಕಾರಗಳು ಅಮೃತ ಮಹೋತ್ಸವಕ್ಕೆ ಹರ ಘರ್ ತಿರಂಗಾ ಮಾಡಿದ್ರೆ ಮಾತ್ರ ಸಾಲದು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕಳೆದುಕೊಂಡವರನ್ನ ಇಂದು ನೆನಪು ಮಾಡಿಕೊಳ್ಳಬೇಕಿದೆ. ಅಲ್ಲದೇ ಸ್ಮಾರಕಗಳನ್ನ ಅಭಿವೃದ್ಧಿಪಡಿಸಿ ಅವರ ಹೋರಾಟಕ್ಕೆ ನ್ಯಾಯ ಕೊಡಿಸಬೇಕಿದೆ.
ಈ ಕುರಿತು ಪ್ರತಿಕ್ರಿಯಿಸಿರೊ ಪಾಲಿಕೆ ಆಯುಕ್ತ ರಾಧಾಕೃಷ್ಣ, ಡೋಣಿ ಚರಿತ್ರೆಯನ್ನು ಪಠ್ಯದಲ್ಲಿ ಓದಿದ್ದೇವೆ. ಅವರ ಸ್ಮಾರಕದ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅದಕ್ಕೆ ಕೊಡಬೇಕಾದ ಗೌರವ ಕೊಟ್ಟೇ ಕೊಡ್ತೇವೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ನಾರಾಯಣ ಡೋಣಿ ಅವರ ಸ್ಮಾರಕ ಇದೆ ಅನ್ನೋದನ್ನೆ ಪಾಲಿಕೆ ಮರೆತಂತಿದೆ. ಈಗಲಾದರೂ ಡೋಣಿ ಸೇರಿ ಸ್ವಾತಂತ್ರ್ಯ ಸೇನಾನಿಗಳ ಸ್ಮಾರಕಗಳಿಗೆ ಅಗತ್ಯ ಗೌರವ ಕೊಡಲಿ ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕನಿಂದ ರಾಷ್ಟ್ರಧ್ವಜಕ್ಕೆ ಅಪಮಾನ
ಇದೇನಾ ಬಿಜೆಪಿ ಮುಖಂಡನ ದೇಶಪ್ರೇಮ ? ಬಿಜೆಪಿ ಮುಖಂಡನಿಂದಲೇ ರಾಷ್ಟ್ರ ಧ್ವಜಕ್ಕೆ ಅಪಮಾನ. ಪಾಲಿಕೆ ಸದಸ್ಯ ಪತಿಯಿಂದಲೇ ರಾಷ್ಟ್ರ ಧ್ವಜಕ್ಕೆ ಅಪಮಾನವಾಗಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ - ಧಾರವಾಡ ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ಪತಿ ಸಿದ್ದು ಮೊಗಲಿಶೆಟ್ಟರ್ ರಿಂದ ರಾಷ್ಟ್ರ ಧ್ವಜಕ್ಕೆ ಅವಮಾನವಾಗಿದೆ. ಜನತೆಗೆ ಹರ್ ಘರ್ ತಿರಂಗಾ ಅಭಿಯಾನ ತಿಳಿಸುವ ಭರದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ. ಒಂದು ಕೈಯಲ್ಲಿ ಮೇಲೆ ಧ್ವಜ, ಇನ್ನೊಂದು ಚಪ್ಪಲಿ ಮೇಲೆ ಬಿಟ್ಟ ಪಾಲಿಕೆ ಸದಸ್ಯೆಯ ಪತಿ ಅಚಾತುರ್ಯ ಎಸಗಿದ್ದಾರೆ.
ಧ್ವಜದ ಮಹತ್ವ ಮರೆತು ಅಪಮಾನ
ಹರ್ ಘರ್ ತಿರಂಗಾ ಅಭಿಯಾನದ ಭರದಲ್ಲಿ ಪಾಲಿಕೆ ಸದಸ್ಯೆಯ ಪತಿ ರಾಷ್ಟ್ರಧ್ವಜದ ಮಹತ್ವವನ್ನೇ ಮರೆತ್ರಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಧ್ವಜದ ಮಹತ್ವವನ್ನೇ ಮರೆತು ಅಪಮಾನ ಮಾಡಲಾಗಿದೆ.
ಇದನ್ನೂ ಓದಿ: Google Doodle India: ಸ್ವಾತಂತ್ರ್ಯ ದಿನಾಚರಣೆಯನ್ನು ಗೂಗಲ್ ಹೇಗೆಲ್ಲ ಪ್ರದರ್ಶಿಸಿತ್ತು? ಇಲ್ಲಿದೆ ನೋಡಿ
ತಮ್ಮ ವಾರ್ಡ್ ನಲ್ಲಿ ಹರ್ ಘರ್ ತಿರಂಗಾ ಅಭಿಯಾನದ ವೇಳೆ ಮಹಾ ಯಡವಟ್ಟು ಮಾಡಿದ್ದಾರೆ. ವಾರ್ಡ್ ನಲ್ಲಿ ಜನರಿಗೆ ಅಮೃತ ಮಹೋತ್ಸವದ ಕುರಿತು ಅಭಿಯಾನದ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಪಾಲಿಕೆ ಸದಸ್ಯೆಯ ಪತಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಮುಖಂಡನ ಮೇಲೆ ಕ್ರಮಕ್ಕೆ ಜನತೆ ಆಗ್ರಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ