ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂಚಿಂಚು ಜಾಗವೂ ಕೋಟಿ ಕೋಟಿ ಬೆಲೆ ಬಾಳುತ್ತೆ. ಅದರಲ್ಲೂ ಸರ್ಕಾರಿ ಜಾಗ (Govt Place) ಸಿಗುತ್ತದೆ ಎಂದರೆ ನಂಗೊಂದು ಇರಲಿ, ನಮ್ಮಪ್ಪನಿಗೊಂದು ಇರಲಿ ಅಂತಾರೆ. ಸೈಟ್ ಅಲ್ಲ ಸಮಾಧಿ ಜಾಗ ಇದ್ರೂ ಕಬಳಿಸೋಕೆ ಭೂಗಳ್ಳರು ಹಿಂದೇಟು ಹಾಕೋದಿಲ್ಲ. ಇದೀಗ ಬಿಟಿಎ (BDA) ಲೇಔಟ್ ಗಾಗಿ ಬಿಟ್ಟ ರಸ್ತೆಯನ್ಜೂ ಬಿಡುತ್ತಿಲ್ಲ. ಬೆಂಗಳೂರಿನಲ್ಲಿ (BENGALURU) ಸರಕಾರಿ ಜಾಗ ಕಬಳಿಸೋದು ತುಂಬ ಈಸಿಯಾಗಿದೆ. ಅದರಲ್ಲೂ ಬಿಡಿಎ ಜಾಗ ಒತ್ತುವರಿ ಮಾಡೋದು ಇನ್ನು ಸುಲಭ. ಇಲ್ಲಿಯವರೆಗೆ ಸೈಟ್, ಸಮಾಧಿ ಜಾಗ ಕಬಳಿಸಿದ್ದಾಯಿತು. ಇದೀಗ ರಸ್ತೆಯೂ ಕಬಳಿಕೆಯಾಗ್ತಿದೆ. ಬಿಡಿಎ ಲೇಔಟ್, ರಸ್ತೆ ಕಟ್ಟಡಗಳಾಗಿ ಮಾರ್ಪಾಟಾಗುತ್ತಿದೆ. ಬೆಂಗಳೂರು ಬಿಡಿಎ ವ್ಯಾಪ್ತಿಯಲ್ಲಿ 37,068 ಎಕರೆ ಇದೆ. ಇದರಲ್ಲಿ 64 ಲೇಔಟ್ ಗೆಂದು ಮೀಸಲಿಟ್ಟ ಜಾಗದಲ್ಲಿ ಎಲ್ಲೆಲ್ಲೂ ಕಬಳಿಕೆಯದ್ದು ಸದ್ದು ಹೆಚ್ಚಾಗಿದೆ. ಇದರಲ್ಲಿ ಬರೋಬ್ಬರಿ 1171 ಎಕರೆ ಜಾಗ ಕಬಳಿಕೆಯಾಗಿದೆ. ಸರ್ಕಾರಿ ಜಾಗ ಒತ್ತುವರಿ ಆದ್ರೂ ಬಿಡಿಎ ಗಾಢನಿದ್ರೆಯಲ್ಲಿದ್ರೆ, ಬಿಬಿಎಂಪಿ ಸಹ ಕಣ್ಣು ಮುಚ್ಚು ಕುಳಿತಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್.
ಡಿಎ ಜಾಗದಲ್ಲಿ ಅಕ್ರಮ ಕಟ್ಟಡ
ಅಗ್ರಹಾರ ದಾಸರಹಳ್ಳಿ ಪ್ರದೇಶದಲ್ಲಿ ಐದಕ್ಕೂ ಹೆಚ್ಚು ಬಿಡಿಎ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ ಬಿಡಿಎ ಲೇಔಟ್ ರಸ್ತೆಯ ಜಾಗವನ್ನೇ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಬಿಬಿಎಂಪಿ ಕಚೇರಿ ಸಮೀಪದಲ್ಲಿ ಈ ಕಟ್ಟಡ ನಿರ್ಮಾಣವಾಗಿರುವುದು ಮತ್ತೊಂದು ವಿಶೇಷ. ಈ ಹಿಂದೆ ಅಕ್ರಮ ಕಟ್ಟಡಕ್ಕಾಗಿ ಕೆಡವಿದ್ದ ಜಾಗದಲ್ಲಿ ಮತ್ತೆ ನಿರ್ಮಾಣ ಮಾಡಿದ್ದಾರೆ. ಬಿಡಿಎ ಜಾಗದಲ್ಲಿ ಅಕ್ರಮ ಕಟ್ಟಡ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದೆ. ಲೋಕಾಯುಕ್ತ ಬಿಡಿಎಗೆ ಪ್ರತಿ ತಿಂಗಳು ತೆರವುಗೊಳಿಸಿದ ಬಗ್ಗೆ ಮಾಹಿತಿ ನೀಡಬೇಕು. ಆದರೆ ಬಿಡಿಎ, ಬಿಬಿಎಂಪಿ ಜಾಣಮೌನ ವಹಿಸಿ ಅಕ್ರಮಕ್ಕೆ ಅನುವು ಮಾಡಿಕೊಡುತ್ತಿದೆ. ಆದರೆ ಕಟ್ಟಡ ನಿರ್ಮಿಸಿದವರು ಬಿಡಿಎ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕ್ತಾರೆ.
ಇದನ್ನೂ ಓದಿ: Bengaluru: ಡೇಟಿಂಗ್ ಯುವತಿಯ ಪ್ರೀತಿ ಮಾತಿಗೆ ಮರುಳಾದ! 5 ಕೋಟಿ ಕಳೆದುಕೊಂಡು ಪೊಲೀಸರ ಅತಿಥಿಯಾದ ಬ್ಯಾಂಕ್ ಮ್ಯಾನೇಜರ್
ಬಿಡಿಎ ಇಂಜಿನಿಯರ್ ಉತ್ತರ
ಈ ಬಗ್ಗೆ ಬಿಬಿಎಂಪಿ ಎಇಇ ಉಮೇಶ್ ಅವರನ್ನು ಕೇಳಿದ್ರೆ ಅಕ್ರಮ ಕಟ್ಟಡಗಳ ತೆರವಿನ ಬಗ್ಗೆ ಬಿಡಿಎಗೆ ಪತ್ರ ಬರೆಯಲಾಗಿದೆ. ಬಿಬಿಎಂಪಿ ಬಿಲ್ಡಿಂಗ್ಅ ಪ್ರೂವಲ್ ಪ್ಲಾನ್, ಖಾತಾ ಕೊಟ್ಟಿರುವುದು ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಕೊಟ್ಟಿದ್ದರೆ ತಪ್ಪು. ಈಗಾಗಲೇ ಅಂಥವರಿಗೆ ನೋಟೀಸ್ ನೀಡಲಾಗಿದೆ. ಬಿಡಿಎ ಗಮನಕ್ಕೆ ತಂದಿದೀವಿ ಎನ್ನುತ್ತಾರೆ.
ಬಿಡಿಎ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಈ ಕುರಿತು ಹಂತ ಹಂತವಾಗಿ ವಶ ಪಡಿಸಿಕೊಳ್ಳುತ್ತಿದ್ದೇವೆ. ಅಕ್ರಮ ಕಟ್ಟಡ ತೆರವುಗೊಳಿಸಿದ್ರೂ ಮತ್ತೊಮ್ಮೆ ಕಟ್ಟಡ ನಿರ್ಮಿಸುವುದು ಸರಿಯಲ್ಲ. ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಬಿಡಿಎ ಇಂಜಿನಿಯರ್ ಸೆಕ್ಷನ್ ಅಫೀಸರ್ ಶಿವಾನಂದ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇರುತ್ತೋ, ಅಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಎಗ್ಗಿಲ್ಲದೇ ಆಗ್ತಿದೆ. ಅದು ಸರ್ಕಾರಿ ಜಾಗವಾದ್ರೆ ಇನ್ನೂ ಈಸಿಯಾಗಿ ಕಬಳಿಸಿಬೋದು ಎಂಬ ಲೆಕ್ಜಾಚಾರವಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ. ಈ ಕುರಿತು ಹಂತ ಹಂತವಾಗಿ ವಶ ಪಡಿಸಿಕೊಳ್ಳುತ್ತಿದ್ದೇವೆ. ಅಕ್ರಮ ಕಟ್ಟಡ ತೆರವುಗೊಳಿಸಿದ್ರೂ ಮತ್ತೊಮ್ಮೆ ಕಟ್ಟಡ ನಿರ್ಮಿಸುವುದು ಸರಿಯಲ್ಲ. ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಬಿಡಿಎ ಇಂಜಿನಿಯರ್ ಸೆಕ್ಷನ್ ಅಫೀಸರ್ ಶಿವಾನಂದ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇರುತ್ತೋ, ಅಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಎಗ್ಗಿಲ್ಲದೇ ಆಗ್ತಿದೆ. ಅದು ಸರ್ಕಾರಿ ಜಾಗವಾದ್ರೆ ಇನ್ನೂ ಈಸಿಯಾಗಿ ಕಬಳಿಸಿಬೋದು ಎಂಬ ಲೆಕ್ಜಾಚಾರವಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ