ರಾಜ್ಯದಲ್ಲಿ ಈಗಾಗಲೇ ಕೊರೋನಾ (Corona) ಕೇಸ್ಗಳ ಹೆಚ್ಚಳವಾಗ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ಕೇಸ್ಗಳ ಸಂಖ್ಯೆ 1 ಲಕ್ಷ ಗಡಿ ದಾಟಲಿದೆ ಎನ್ನಲಾಗ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ (Government) ಈಗಾಗಲೇ ಜಾರಿ ಮಾಡಿತ್ತು. ಆದ್ರೆ ವೀಕೆಂಡೆ ಕರ್ಫ್ಯೂಗೆ (Weekend Curfew) ಎಲ್ಲಾ ವಲಯದಿಂದಲೂ ವಿರೋಧ ಕೇಳಿ ಬಂದ ಹಿನ್ನೆಲೆ, ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ತೆರವು ಮಾಡಿದೆ. ಇದ್ರ ಬೆನ್ನಲ್ಲೇ ನೈಟ್ ಕರ್ಫ್ಯೂ ಕೂಡಾ ಸಮಯವನ್ನು ವಿಸ್ತರಿಸಿದೆ.
ಆದ್ರೆ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ನೈಟ್ ಕರ್ಫ್ಯುವನ್ನು ತೆರವು ಮಾಡ್ಬೇಕು ಅನ್ನೋ ಚಿಂತನೆಯಲ್ಲಿದೆ ಸರ್ಕಾರ. ಆದ್ರೆ ಯಾವುದೇ ಮಾನದಂಡಗಳು ಇಲ್ಲದೆ ತೆರವು ಮಾಡೋದು ಅವೈಜ್ಞಾನಿಕವಾಗಲಿದೆ, ಅನ್ನೋ ನಿಟ್ಟಿನಲ್ಲಿ ಆಸ್ಪತ್ರೆಗಳ ದಾಖಲಾತಿಯ ವರದಿಯ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅಥ್ವಾ, ರಿಲೀಫ್ ಕೊಡ್ಬೇಕೋ ಅನ್ನೋದನ್ನು ನಿರ್ಧರಿಸಲು ಮುಂದಾಗಿದೆ. ಯಾಕೆಂದರೆ ಮೂರನೇ ಅಲೆಯಲ್ಲಿ ಹೆಚ್ಚು ಪ್ರಕರಣಗಳು ಬರುತ್ತೆ, ಆದ್ರೆ ಅದ್ರ ತೀವ್ರತೆ ಹೆಚ್ಚಿರೋದಿಲ್ಲ ಅನ್ನೋ ತಜ್ಞರ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.
ಆದ್ರೆ ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸೋದಾದ್ರೆ, ರಾಜ್ಯದಲ್ಲಿ ಸೋಂಕು ಹೆಚ್ಚಳವಾದ್ರು,ಆತಂಕಬೇಡ ಎನ್ನುತ್ತಿದ್ದಾರೆ ತಜ್ಞ ವೈದ್ಯರು. ಮೂರನೇ ಅಲೆಯ ಕೊರೋನಾ ನೆಗಡಿ, ಕೆಮ್ಮು, ಜ್ವರಕ್ಕೆ ಮಾತ್ರ 3ನೇ ಅಲೆ ಸೀಮಿತವಾಗಿದೆ.
ಇದನ್ನೂ ಓದಿ: 8 ಲಕ್ಷ ಕೊಟ್ಟು ಒಂಟಿ ಎತ್ತು ಖರೀದಿಸಿದ ಕಾಫಿ ನಾಡಿನ ರೈತ
50,000 ಕೇಸ್ ಬಂದ್ರು, ಆಸ್ಪತ್ರೆಗೆ ಜನರು ಬರ್ತಿಲ್ಲ. ಇಡೀ ರಾಜ್ಯದಲ್ಲಿ ಶೇ.80ರಷ್ಟು ಅಂದ್ರೆ 1,32,575 ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ. ಹೀಗಾಗಿ, ರಾಜ್ಯಾದ್ಯಂತ ಆಸ್ಪತ್ರೆ ದಾಖಲಾತಿಯೂ ಇಲ್ಲ. ಹೀಗಾಗಿ ಆಸ್ಪತ್ರೆ ದಾಖಲಾತಿ ಹೆಚ್ಚದಿದ್ದರೆ 50:50 ರೂಲ್ಸ್ ತೆರವು ಮಾಡೋ ಸಾಧ್ಯತೆಗಳು ಹೆಚ್ಚಿವೆ.
ಇನ್ನು ಹಾಗಾದ್ರೆ ಬೆಂಗಳೂರು ಹಾಗೂ ರಾಜ್ಯದಲ್ಲಿ ಆಸ್ಪತ್ರೆ ದಾಖಲಾತಿ ಹೇಗಿದೆ ಅಂತ ನೋಡೋದಾದ್ರೆ
*ಬೆಂಗಳೂರು ನಗರ*
ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜ.16 21,071 72
ಜ.17 15,947. 81
ಜ.18 25,595 84
ಜ.19 24,135. 80
ಜ.20 30,540 81
ಜ.21 29,068 87
ಜ.22 17,266 71
*ಕರ್ನಾಟಕ*
ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜ.16 34,047 717
ಜ.17 27,156 192
ಜ.18 41,457 213
ಜ.19 40,499 447
ಜ.20 47,754 102
ಜ.21 48,049 185
ಜ.22 42,470 292
ನಾವು ಕಳೆದ ಒಂದು ವಾರದ ರಾಜ್ಯ ಹಾಗೂ ಬೆಂಗಳೂರಿನ ಸ್ಥಿತಿ ಗತಿ ನೋಡಿದ್ರೆ, ಹೆಚ್ಚು ಜನರು ಆಸ್ಪತ್ರೆಗೆ ಹೋಗಿ ದಾಖಲಾಗದೆ ಇರೋದು ಕಂಡು ಬಂದಿದೆ. ಆದ್ರೆ 1 ಲಕ್ಷ ಕೇಸ್ ಬರುತ್ತೆ ಅನ್ನೋ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಬೆಂಗಳೂರಿನ 198 ವಾರ್ಡ್ಗಳು ಸೇರಿ ರಾಜ್ಯಾದ್ಯಂತ ಸುಮಾರು 1.5 ಲಕ್ಷ ಬೆಡ್ಗಳನ್ನು ನಿಯೋಜನೆ ಮಾಡಿದೆ. ಒಂದು ವೇಳೆ ಏಕಾಏಕಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದ್ರೆ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳುತ್ತಿದೆ.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ- ಚೊಂಬು, ಬಿಂದಿಗೆ ಹಿಡಿದು ಬಂದ ಜನ
ಹೀಗಾಗಿ ಆಸ್ಪತ್ರೆ ದಾಖಲಾತಿಯಲ್ಲಿ ಮತ್ತಷ್ಟು ಇಳಿಮುಖ ಕಂಡು ಬಂದ್ರೆ ಕೊರೋನಾದ ಟಫ್ ರೂಲ್ಸ್ನಿಂದ ಜನರಿಗೆ ಮುಕ್ತಿ ಸಿಗಲಿದೆ.
ವರದಿ: ಹಂಸ ಶ್ಯಾಮಲ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ